ಭಕ್ತನ ಜ್ಞಾನಿಸ್ಥಲ - ನಡೆ-ನುಡಿ
ಸ್ವಾಮಿ ಭೃತ್ಯಸಂಬಂಧಕ್ಕೆ ಆವುದು ಪಥವೆಂದರೆ:
ದಿಟವ ನುಡಿವುದು, ನುಡಿದಂತೆ ನಡೆವುದು.
ನುಡಿದು ಹುಸಿವ, ನಡೆದು ತಪ್ಪುವ
ಪ್ರಪಂಚಿಯನೊಲ್ಲ ಕೂಡಲಸಂಗಮದೇವ.
Transliteration Svāmibhr̥tyasambandhakke āvuda pathavendare:
Diṭava nuḍivudu, nuḍidante naḍevudu.
Nuḍidu husiva, naḍedu tappuva
prapan̄ciyanolla kūḍalasaṅgamadēva.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 What principle unites
The servant and his lord?
To speak the truth, and act
According to your word.
Kūḍala Saṅgama spurns
The worldly man who lies
In word, and fails in deed.
Translated by: L M A Menezes, S M Angadi
Hindi Translation स्वामी-सेवक संबंध का कौन सा पथ है?
सत्य बोलना, कथनानुसार चलना है
वचन व आचरण से चूकनेवाले
प्रपंची को कूडलसंगमदेव नहीं चाहते ॥
Translated by: Banakara K Gowdappa
Telugu Translation స్వామి భృత్యసంబంధమున కేది పదమన్న;
నిజము చెప్పుట; చెప్పినటు నడచుట;
తప్పు చెప్పి; తప్పినడచు ప్రాకృతుల
మెచ్చడు కూడల సంగమదేవుడు
Translated by: Dr. Badala Ramaiah
Tamil Translation ஆண்டான், அடியான் தொடர்பிற்கு எது வழியெனின்
மெய்யுரைப்பது உரைத்த வண்ணம் நடப்பது
சொல்லிப் பொய்த்து நடந்து பிறழும்
மாந்தரை வேண்டான் கூடல சங்கம தேவன்.
Translated by: Smt. Kalyani Venkataraman, Chennai
Marathi Translation
स्वामी-भृत्य संबंधाला कोणता मार्ग आहे?
खरे बोलणे, बोलल्याप्रमाणे वागणे, बोलून न करणारे,
आचरणात चुकणारे, अशा संसारी लोकांना
जवळ घेत नाही कूडलसंगमदेव.
Translated by Shalini Sreeshaila Doddamani
ಶಬ್ದಾರ್ಥಗಳು ದಿಟ = ಸತ್ಯ; ಪಥ = ದಾರಿ; ಪ್ರಪಂಚಿ = ; ಭೃತ್ಯ = ಸೇವಕ; ಹುಸಿ = ಸುಳ್ಳು;
ಕನ್ನಡ ವ್ಯಾಖ್ಯಾನ ಶಿವನು ಒಡೆಯನು, ನಾನವನ ಸೇವಕನೆಂಬ ಭಕ್ತನು ಹಿಡಿಯಬೇಕಾದ ಹಾದಿಯೆಂಥದು ? ಅವನು ಸತ್ಯವನ್ನೇ ನುಡಿಯಬೇಕು, ಅದಕ್ಕನುಸಾರವಾಗಿ ನಡೆಯಬೇಕು, ಹಾಗಲ್ಲದೆ ಬಾಯಿಬಿಟ್ಟರೆ ಸುಳ್ಳು ಹೇಳುವ, ಆಸ್ಪದ ಕೊಟ್ಟರೆ ವಿಶ್ವಾಸಘಾತುಕತನ ಮಾಡುವ ಮೋಸಗಾರನಿಗೆಂದಿಗೂ ಶಿವನೊಲಿಯುವುದಿಲ್ಲ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು