ಸತ್ಯವುಳ್ಳ ಭಂಡವ ತುಂಬುವುದಯ್ಯಾ!
ಸಯಿಧಾನ, ಸಯಿಧಾನವಯ್ಯಾ:
ಮನ ಧಾರೆವಟ್ಟಲು!
ಕೂಡಲಸಂಗನ ಶರಣರು ಹಿಡಿಯದ ಭಂಡವನು
ಆರಾದೊಡಾಗಲಿ ಹೋಗಲೀಯರಯ್ಯಾ.
Transliteration Satyavuḷḷa bhaṇḍava tumbuvudayyā!
Sayidhāna, suyidhānavayyā:
Mana dhārevaṭṭalu!
Kūḍalasaṅgana śaraṇaru hiḍiyada bhaṇḍavanu
ārādaḍāgali hōgalīyarayyā.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 You should collect
Only such goods as have
The touch of truth...
Beware, O Sir, beware!
The heart's a leaking pot!
Whoever he be,
He does not let aught pass
Unless it is approved
By Kūḍala Saṅga's Śaraṇās.
Translated by: L M A Menezes, S M Angadi
Hindi Translation सत्य-संपन्न सामग्री भर लो,
सावधान रहो, सावधान रहो,
मन धारापात्र है-
कूडलसंगमदेव के शरणों से अस्वीकृत सामग्री
कोई भी हो जाने नहीं देंगे ॥
Translated by: Banakara K Gowdappa
Telugu Translation నత్యముగల సరుకు నింపవలెనయ్య!
అపుడే తృప్తి, సంతృప్తి సమకూడునయ్యా;
మనసు ధారా పాత్ర:
కూడల సంగని శరణులు పట్టిన సరుకును
ఎంతవారైనా ముందుకు పోనీయరయ్యా!
Translated by: Dr. Badala Ramaiah
Tamil Translation உண்மையுள்ள பண்டத்தை நிறப்புவது ஐயனே,
விழித்திரு, விழித்திரு ஐயனே,
உள்ளம் உள்ளீடற்ற தையனே,
கூடல சங்கனின் மெய்யடியார் ஏற்காத பண்டம்தனை
எவராயினும் செல்லா ரையனே.
Translated by: Smt. Kalyani Venkataraman, Chennai
Marathi Translation
सत्याचे भांडार पूर्ण भरले पाहिजे.
हाच सन्मार्ग आहे, हाच सन्मार्ग आहे.
मन स्थिर ठेवा. कूडलसंगमदेवाच्या
शरणांनी त्याग केलेल्या संपत्तीला
कोणीही जवळ घेत नाही.
Translated by Shalini Sreeshaila Doddamani
ಶಬ್ದಾರ್ಥಗಳು ಧಾರೆ = ; ಭಾಂಡರ = ಸರಕು ಪಾತ್ರೆ ; ಸುಯಿಧಾನ = ;
ಕನ್ನಡ ವ್ಯಾಖ್ಯಾನ ಬಸವಣ್ಣನವರು ಭಕ್ತರಿಗೆ ಎಚ್ಚರ ಹೇಳುತ್ತಾರೆ : ಅಯ್ಯ, ಸಾಧಕನೇ, ನೀನು ಸತ್ಯಭರಿತನೇ ಆಗಿರಬೇಕಾಗಿದೆ. ಆದರೆ ನಿನ್ನ ಮನಸ್ಸು ಒಂದು ತೂತು ಬಟ್ಟಲು. ಅದರಲ್ಲಿ ಭಕ್ತಿರಸವೆಲ್ಲಾ ಸೋರಿಹೋಗಿ ವಿಷಯದ ಕಸ ಮಾತ್ರ ಉಳಿದಿರುವುದು. ಆ ಕಸಕ್ಕೇನೂ ಬೆಲೆಯಿಲ್ಲವಾಗಿ-ಅದು ಶರಣರಿಗೆ ಹೇಯವಾಗಿ- ನಿನ್ನನ್ನು ಅವರು ತಿರಸ್ಕರಿಸುವರು-ಎಂದು
ಬಸವಣ್ಣನವರ ಈ ವಚನದುದ್ದಕ್ಕೂ ಸುಂಕದಕಟ್ಟೆಯ ಬಳಿ ಪರವಾನಿಗೆಗಾಗಿ ಕಾದುನಿಂತಿರುವ ಸರಕು ತುಂಬಿದ ಭಂಡಿಯೊಂದರ ಉಪಮಾನ ಚಾಚಿಕೊಂಡಿದೆ. ಆ ಭಂಡಿಯಲ್ಲಿ ಸರಿಯಾದ ಸರಕನ್ನು ಸರಿಯಾಗಿ ತುಂಬಿ-ಆ ತುಂಬಿದ ಸರಕು ಹಾದಿಯಲ್ಲಿ ಚೆಲ್ಲಿಹೋಗದೆ ಕಳಿಸಿದವನ ವಿವರಪತ್ರಕ್ಕನುಸಾರವಾಗಿದ್ದರೆ ಮಾತ್ರ ಪ್ರತಿನಿಧಿಯು ಅದನ್ನು ಒಪ್ಪಿ ಒಳಕ್ಕೆ ಬಿಟ್ಟುಕೊಳ್ಳುವನು-ಇಲ್ಲದಿದ್ದರೆ ಕೈಬಿಡುವನು.
ಶಿವನು ಕಳಿಸಿಕೊಟ್ಟ ಈ ಮಾನವಮಾಲು ಮಾನವೀಯತೆಯನ್ನೇ ಕಳೆದುಕೊಂಡರೆ ಅದು ಶರಣರಿಂದ ತಿರಸ್ಕ್ರತವಾಗುವುದೆಂಬುದಭಿಪ್ರಾಯ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು