•  
  •  
  •  
  •  
Index   ವಚನ - 239    Search  
 
ಭಕ್ತನ ಜ್ಞಾನಿಸ್ಥಲ - ಸ್ವರ್ಗ-ನರಕ
ದೇವಲೋಕ ಮರ್ತ್ಯಲೋಕವೆಂಬುದು ಬೇರಿಲ್ಲ ಕಾಣಿ ಭೋ! ಸತ್ಯವ ನುಡಿವುದೆ ದೇವಲೋಕ; ಮಿಥ್ಯವ ನುಡಿವುದೆ ಮರ್ತ್ಯಲೋಕ! ಆಚಾರವೆ ಸ್ವರ್ಗ, ಅನಾಚಾರವೆ ನರಕ- ಕೂಡಲಸಂಗಮದೇವಾ, ನೀವೇ ಪ್ರಮಾಣು.
Transliteration Dēvalōka matryalōkavembudu bērilla kāṇi bhō! Satyava nuḍivude dēvalōka; mithyava nuḍivude martyalōka! Ācārave svarga, anācārave naraka- kūḍalasaṅgamadēvā, nīvē pramāṇu.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
Music Courtesy: BHAKTHI MUSIC, BASAVANNA VACHANAGALU, Singer : Ananthakumar and Suma, Music : Music : Ananthakumar
English Translation Look! The Divine World and the Mortal World are not two different worlds at all! Both exist right here, You create them in your own actions— Speaking the Truth alone is the Divine World! Speaking only lies is the Mortal World! Good conduct alone is Heaven; Bad conduct alone is Hell— O Lord Kūḍala Saṅgama! You are the Ultimate Authority To decide what is right and what is wrong! Who is good and who is bad!
Translated by: Dr Shivamurthy Shivacharya Mahaswamiji, Taralabalu Math, Sirigere
English Translation 2 Behold! between the worlds Of mortals and of gods There is no difference! To speak the truth is world of gods; To speak untruth, the mortal world. Good works is Heaven, Bad works is Hell- And you can witness it, O Lord Kūḍala Saṅgama! Translated by: L M A Menezes, S M Angadi
Hindi Translation देवलोक मर्त्यलोक भिन्न नहीं है सत्य बोलना ही देवलोक है असत्य बोलना ही मर्त्यलोक; आचार ही स्वर्ग है अनाचार ही नरक, कूडलसंगमदेव तुम ही प्रमाण हो ॥ Translated by: Banakara K Gowdappa
Telugu Translation దేవలోక మర్త్య లోకములని వేఱులేవు తెలియుడో! సత్యము పలుకుటే దేవలోకము; మిథ్యను బలుకుటే మర్త్యలోకము; అచారమే స్వర్గము! అనాచారమే నరకము; కూడల సంగమ దేవా! నీవే ప్రమాణము. Translated by: Dr. Badala Ramaiah
Tamil Translation விண்ணுலகு மண்ணுலகு என்பது வேறில்லை காணீர், மெய்யுரைத்தல் விண்ணுலகு பொய்யுரைத்தல் மண்ணுலகு, நன்னெறியே சுவர்க்கம் தீ நெறியே நரகம் ஐயனே, கூடல சங்கம தேவனே, நீரே சாட்சி ஐயனே. Translated by: Smt. Kalyani Venkataraman, Chennai
Marathi Translation एक देव लोक, दुजे मृत्यु लोक नोहे ऐसा देख, एक जाणा सत्य वचन हेचि, जाणा देव लोक मिथ्या वचन देख, मृत्यू लोक आचारचि स्वर्ग, अनाचार नर्क कूडलसंगम एक, साक्ष यासी अर्थ - देवलोक - मृत्यूलोक हे वेगवेगळे नाहीत. सत्य बोलणे म्हणजे देवलोक व मिथ्या बोलणे म्हणजे मृत्यूलोक जाणावा. तुमचे आचारविचारच स्वर्ग व अनाचारच नरक जाणावेत. कारण सदाचार ही भक्तिमार्गातील पहिली पायरी आहे. व हीच परमेश्वरी ऐक्यातील एकमेव पायरी होय. हे मी माझ्या अनुभव व अनुभूतीद्वारे सांगतो आहे, याला माझा एकमेव कूडलसंगमदेव (परमेश्वर) प्रमाण आहे. Translated by Rajendra Jirobe, Published by V B Patil, Hirabaug, Chembur, Mumbai, 1983 देवलोक, मर्त्यलोक वेगवेगळे नाही. खरे बोलणे हाच देवलोक, खोटे बोलणे हाच मर्त्यलोक. आचार हाच स्वर्ग, अनाचार हाच नरक. कूडलसंगमदेव हेच याला साक्षी. Translated by Shalini Sreeshaila Doddamani
Urdu Translation جوغورکیجئے ارض وسما میں فرق نہیں یہاں بھی دوزخ وفردوس کی فضائیں ہیں عمل یہاں بھی ہے پیمانۂ سزا و جزا کہوگے جھوٹ تودوزخ بنے گی یہ دنیا جوسچ کہوتوتمھارے لیے یہ جنّت ہے ہمارے کوڈلا سنگا کا ہے یہی ارشاد Translated by: Hameed Almas
ಶಬ್ದಾರ್ಥಗಳು ಆಚಾರ = ನಡೆ; ಮರ್ತ್ಯಲೋಕ = ಮಾನವ ಲೋಕ; ಮಿಥ್ಯ = ಸುಳ್ಳು;
ಕನ್ನಡ ವ್ಯಾಖ್ಯಾನ ದೇವಲೋಕ-ಮರ್ತ್ಯಲೋಕಗಳು ಬೇರಿಲ್ಲ ದೇವಲೋಕವೆಂಬುದೊಂದಿದೆಯೆಂಬ ಭಾವನೆಯು ಬಲವಾಗಿ ಬೇರೂರಿವಾಗ ಅದು ಬೇರೆಲ್ಲೂ ಇಲ್ಲ, ಶಿವಭಕ್ತನಿರುವ ಸ್ಥಳವೇ ದೇವ ಲೋಕವೆಂದು ಮೇಲೆ ಹೇಳಿದ ನೂತನ ವಿಚಾರಸರಣಿಯು ಜನರನ್ನು ಚಕಿತಗೊಳಿಸಿರಬೇಕು. ದೇವಲೋಕ-ಮರ್ತ್ಯಲೋಕಗಳ, ಸ್ವರ್ಗ-ನರಕಗಳ ಬಗ್ಗೆ ಬಸವಣ್ಣನವರ ಕಲ್ಪನೆಯೇ ಬೇರೆ. ಅವರೇ ಅದನ್ನು ವಿಸ್ಮಯಕ್ಕೊಳಗಾದ ಜನರ ಮನಂಬುಗುವಂತೆ ಇಲ್ಲಿ ವಿವರಿಸಿದ್ದಾರೆ. ದೇವಲೋಕವಾಗಲೀ, ಮರ್ತ್ಯಲೋಕವಾಗಲೀ ಬೇರೆ ಎಲ್ಲೂ ಇಲ್ಲ. ಸತ್ಯವನ್ನು ನುಡಿಯುವುದೇ ದೇವಲೋಕ, ಮಿಥ್ಯೆ (ಅಸತ್ಯ) ವನ್ನು ನುಡಿಯುವುದೇ ಮರ್ತ್ಯಲೋಕ, ಆಚಾರವೇ ಸ್ವರ್ಗ, ಅನಾಚಾರವೇ ನರಕ, ಇದನ್ನೇ ಗೌತಮ ಧರ್ಮ ಸೂತ್ರವು ‘ಸ್ವರ್ಗಃ ಸತ್ಯವಚನೇ ವಿಪರ್ಯಯೇ ನರಕಃ’ ಎನ್ನುತ್ತದೆ. ನಮ್ಮಲ್ಲಿ ಒಳ್ಳೆಯ ಆಚಾರ ವಿಚಾರಗಳಿದ್ದರೆ ಅದೇ ದೇವಲೋಕ ಮತ್ತು ಸ್ವರ್ಗ.ಅವಿಲ್ಲದೇ ಹೋದರೆ ಅದೇ ಮರ್ತ್ಯಲೋಕ ಮತ್ತು ನರಕ. ನೀತಿಯುತವಾದ ಜೀವನವೇ ಸ್ವರ್ಗ ಜೀವನ. ನೀತಿ ಬಾಹಿರವಾದ ಜೀವನವೇ ನರಕ ಜೀವನ. - ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.