•  
  •  
  •  
  •  
Index   ವಚನ - 240    Search  
 
ಭಕ್ತನ ಜ್ಞಾನಿಸ್ಥಲ - ಸ್ವರ್ಗ-ನರಕ
ಪುಣ್ಯ ಪಾಪವೆಂಬುವು ತಮ್ಮಿಷ್ಟ ಕಂಡಿರೇ; `ಅಯ್ಯಾ' ಎಂದಡೆ ಸ್ವರ್ಗ; `ಎಲವೋ' ಎಂದಡೆ ನರಕ! ʼದೇವಾ, ಭಕ್ತ, ಜಯಾ, ಜೀಯಾʼ ಎಂಬ ನುಡಿಯೊಳಗೆ ಕೈಲಾಸವಿದ್ದುದೇ ಕೂಡಲಸಂಗಮದೇವಾ.
Transliteration Puṇyapāpavembuvu tam'miṣṭa kaṇḍirē; `ayyā' endaḍe svarga; `elavō' endaḍe naraka! ʼdēvā, bhakta, jayā, jīyāʼ emba nuḍiyoḷage kailāsaviddudē kūḍalasaṅgamadēvā.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Mark you, virtue and sin Are your own choice; To say 'Sir' is heaven; To say 'you there!' is Hell.. O Kūḍala Saṅgama Lord, In saying 'God', and 'Saint' And 'bless you, Master' - here Is Kailāsa ! Translated by: L M A Menezes, S M Angadi
Hindi Translation देखो, पापपुण्य तुम्हारी इच्छा से है-, ‘जी’ कहना स्वर्ग है ‘रे’ कहना नरक। देव और भक्त की जय हो, प्रभो इन बातों से कैलास प्राप्त होता है, कूडलसंगमदेव ॥ Translated by: Banakara K Gowdappa
Telugu Translation పుణ్యపాపము లనుట తమ యిచ్చ కంటిరే: అయ్యా యనగా స్వర్గము; ఓరీ యనగా నరకము: దేవా! భక్తప్రియా; స్వామీ; యను పలుకులందు; కైలాసముండె కూడల సంగమదేవా! Translated by: Dr. Badala Ramaiah
Tamil Translation நல்வினை, தீவினை என்பது நம் விருப்பம் காணீர்! “அய்யா” எனின் மேலுலகம் “அடா” எனின் கீழுலகம் தேவன், பக்தன் செயன் சீயன் எனும் சொற்களிலே கைலாசமிலையோ கூடல சங்கம தேவனே! Translated by: Smt. Kalyani Venkataraman, Chennai
Marathi Translation पुण्य-पाप आपल्याच हातात आहे. ` ’तुम्ही` म्हणता स्वर्ग, `तू` म्हणता नरक’. देवा, भक्ता, स्वामी या संबोधनातच कैलास आहे कूडलसंगमदेवा. Translated by Shalini Sreeshaila Doddamani
Urdu Translation یہ جان لوکہ ہے نیکی بد ی تمھارے ہاتھ مثالِ سایۂ جنّت ہےانکسارکا لفظ کٹھور پن ہے جہنم کی تیز دھوپ کی طرح ہمارے شیوکو بھگتوں کے شیو کو یاد کرو اِنھی کے ذکرسے کیلاش ملنے والا ہے مرےعزیزمرے دیوا کوڈلا سنگم Translated by: Hameed Almas
ಶಬ್ದಾರ್ಥಗಳು ಜೀಯಾ = ವಿನಯದಿಂದ ಹೇಳುವ ಪದ; ನರಕ = ಅತಿಯಾದ ಕಷ್ಟ;
ಕನ್ನಡ ವ್ಯಾಖ್ಯಾನ ಉತ್ತಮಾಧಮ ನಡೆನುಡಿಗಳಲ್ಲಿಯೇ ಸ್ವರ್ಗ-ನರಕಗಳು ಈ ಹಿಂದೆಯೇ ನೋಡಿರುವಂತೆ ಸ್ವರ್ಗ-ನರಕಗಳ, ಪುಣ್ಯ-ಪಾಪಗಳ ಬಗ್ಗೆ ಬಸವಣ್ಣನವರಿಗಿರುವ ಕಲ್ಪನೆಯೇ ಬೇರೆ. ಅದು ಎಷ್ಟು ಸರಳವೋ ಅಷ್ಟೇ ಸೂಕ್ಷ್ಮವೂ ಹೌದು. ಯಜ್ಞಯಾಗಾದಿಗಳನ್ನು ಮಾಡುವುದರಿಂದ ಪುಣ್ಯ ಉಂಟಾಗುತ್ತದೆ, ಅದರಿಂದ ತಮ್ಮ ಮರಣಾನಂತರ ಸ್ವರ್ಗ ದೊರೆಯುತ್ತದೆಯೆಂದು ಹೇಳಿದರೆ ಬಸವಣ್ಣನವರು ಮಾನವನು ಮಾನವನ್ನು ಪ್ರೀತಿಸುವಲ್ಲಿಯೇ ‘ಅಯ್ಯಾ’ಎಂಬ ಒಂದು ಒಳ್ಳೆಯನುಡಿಯಿಂದ ಇತರ ಮಾನವನನ್ನು ಗೌರವದಿಂದ ಕಾಣುವಡೆಯಲ್ಲಿಯೇ ಸ್ವರ್ಗವಿದೆಯೆಂದು ಹೇಳುತ್ತಾರೆ. ಪ್ರಾಣಿ ಹತ್ಯೆಯಿಂದ ಪಾಪವುಂಟಾಗಿ ಮರಣಾನಂತರ ನರಕ ಪ್ರಾಪ್ತಿಯಾಗುವುದೆಂದು ಕೆಲವರು ಹೇಳಿದರೆ ಆ ರೀತಿಯ ಕ್ರೂರ ಹಿಂಸೆಯ ಮಾತಿರಲಿ ಅದಕ್ಕಿಂತಲೂ ಸೂಕ್ಷ್ಮವಾಗಿ ಮಾನವನು ಮಾನವನನ್ನು ಪ್ರೀತಿಸದೆ ದ್ವೇಷಿಸುವಲ್ಲಿಯೇ ಎಲವೋ ಎಂದು ಅನಾದರದಿಂದ ಕಾಣುವಡೆಯಲ್ಲಿ ಯೇ ನರಕವಿದೆಯೆನ್ನುತ್ತಾರೆ. ದೇವಾ, ಭಕ್ತ, ಜೀಯಾ ಇತ್ಯಾದಿ ಮೃದು ನುಡಿಗಳಲ್ಲಿಯೇ ಕೈಲಾಸವಿದೆಯೆನ್ನುತ್ತಾರೆ ಆದ್ದರಿಂದ ಸ್ವರ್ಗವನ್ನಾಗಲೀ, ನರಕವನ್ನಾಗಲೀ ವ್ಯಕ್ತಿಯು ತನ್ನ ಆಚಾರಗಳಿಂದ ಸೃಷ್ಟಿಸಿಕೊಳ್ಳುತ್ತಾನೆಯೇ ಹೊರತು ಅವು ಬೇರೆಲ್ಲೂ ಇಲ್ಲ. ಒಟ್ಟಿನಲ್ಲಿ ಹೇಳುವುದಾದರೆ ಸಮಾಜಕ್ಕೆ ಅಹಿತಕಾರಿಯಾದುದು ನರಕ ಜೀವನವು, ಸಮಾಜಕ್ಕೆ ಹಿತಕಾರಿಯಾದುದು ಯಾವುದೋ ಅದು ಸ್ವರ್ಗ ಜೀವನವು. - ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.