•  
  •  
  •  
  •  
Index   ವಚನ - 241    Search  
 
ಭಕ್ತನ ಜ್ಞಾನಿಸ್ಥಲ - ವಿನಯ
ಏನಿ ಬಂದಿರಿ, ಹದುಳವಿದ್ದಿರೆ? ಎಂದರೆ ನಿಮ್ಮ ಮೈಸಿರಿ ಹಾರಿಹೋಹುದೆ? ʼಕುಳ್ಳಿರೆಂದರೆʼ ನೆಲ ಕುಳಿಹೋಹುದೆ? ಒಡನೆ ನುಡಿದರೆ ಶಿರ-ಹೊಟ್ಟೆಯೊಡೆವುದೆ? ಕೊಡಲಿಲ್ಲದಿದ್ದರೊಂದು ಗುಣವಿಲ್ಲದಿರ್ದಡೆ, ಕೆಡಹಿ ಮೂಗ ಕೊಯ್ಯದೆ ಮಾಣ್ಬನೆ ಕೂಡಲಸಂಗಮದೇವನು?
Transliteration ʼēni bandiri, haduḷaviddire?ʼ endare nim'ma maisiri hārihōhude? ʼkuḷḷirendareʼ nela kuḷihōhude? Oḍane nuḍidare śira-hoṭṭeyoḍevude? Koḍalilladiddarondu guṇavilladirdaḍe, keḍahi mūga koyyade māṇbane kūḍalasaṅgamadēvanu?
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
Music Courtesy: Akkanabalaga, Sri Taralabalu Jagadguru Brihanmath, Sirigere
English Translation 2 Does it make you ugly if you say 'Come right in , how do you do ! ? Does your floor cave in when you say 'Do sit down, please'? Or does your head, or belly, burst If only you speak to one? If you have nothing to give, not even a grace, Lord Kūḍala Saṅgama, be sure, Will pull you down and chop your nose! Translated by: L M A Menezes, S M Angadi
Hindi Translation आइए, क्या सब कुशल है कहने पर तुम्हारे सौंदर्य का ह्रास होगा? ‘बैठिए’ कहने पर धरती धँस जायेगी? तत्क्षण बोलने पर सिर और पेट फट जायेंगे? कुछ न देने पर भी एक गुण भी न हो, तो कूडलसंगमदेव तुम्हें गिराकर नाक काटना छोडेंगे? Translated by: Banakara K Gowdappa
Telugu Translation రా రండేమికావలె సుఖముంటిరే యన ఆరిపోవునే మీమేని సిరి; కూర్చొనుడన ధర క్రుంగిపోవునే? తక్షణమె బల్క తల బ్రద్దలగునే? లేమియున్న ఒకటి గుణము లేకయున్న పడవైచి ముక్కుకోయక మానునే? కూడల సంగమదేవుడు. Translated by: Dr. Badala Ramaiah
Tamil Translation வாரும் நலமாயுள்ளீரோ எனின் உம் செல்வம் பறந்துபோமோ? “இரீர்” எனின் நிலம் குழியாகிப் போமோ? உடனே மொழியின் தலையும், வயிறு முடைந்து போமோ? அளியாதொழியினும் நல்லியல்பிலையேல் மூக்கைக் கொய்யானோ கூடல சங்கம தேவன்? Translated by: Smt. Kalyani Venkataraman, Chennai
Marathi Translation करिताचि स्वागत, दिसता समोर क्षेम कुशल सत्वर, पुसो जाता येताचि सौजन्य, बोलता सत्वर नच झडे शरीर, मस्तक ते 'काय हो आलात ' ‘या बसा’ म्हणता तड़के का खालची, जमिन ती नसे काही द्याया, पुरे एक सद्गुण थोर तयाहून, नच काही कूडलसंगमदेवा ! दिसे ऐसा न गुण केल्याविण ताडन, राहिल का ? अर्थ - आपल्याकडे येणाऱ्यांना 'आत या, सर्व क्षेम कुशल आहे ना?' अशी सौजन्यपूर्वक त्याची विचारपूस केल्यास तुमच्या शरीरावरील मांस कमी होईल का? व सौंदर्य नष्ट होईल का 'या बसा' असे आदराने त्यांचे स्वागत केल्यास तुमच्या पायाखालील जमीन सरकू लागेल काय? 'अतिथी देवो भव' समजून त्याच्याशी सत्वर बोलल्यास तुमच्या पोटाला किंवा मस्तकाला तडे बसतील का? त्यांच्या अतिथ्यासाठी तुमच्याकडे द्यावयास वस्त्र, आहार, संपत्ती इत्यादि काहीही नसल्यास निदान सौजन्य गुण तरी नको का तुमच्यात? आलेल्या अतिथीशी अहंपणाची वागणूक दिल्यास 'याद राखा' माझा कुडलसंगमदेव (परमेश्वर) अशांना शासन केल्याविना राहणार नाही. Translated by Rajendra Jirobe, Published by V B Patil, Hirabaug, Chembur, Mumbai, 1983 यावे, कुशल आहे ना? असे विचारल्याने तुमचे धनखर्च होते का ? बसावे असे म्हणाल्याने जमिन झिजेल का ? पाहिल्याबरोबर बोलण्याने घसा बसेल का ? आपण काही दिले नाही तरीही चालेले पण विनय नसेल तर नाक कापल्याविना सोडतील का कूडलसंगमदेव ? Translated by Shalini Sreeshaila Doddamani
Urdu Translation جب بھی آئےتمھارے پاس کوئی دوقدم بڑھ کےاس کولینےسے اورپھرپوچھنےسےخیریّت آبروپہ نہ داغ آئے گا اورہمسایہ کےلئے اٹھ کر اپنی مسَند کے پیش کرنے سے یہ زمیں توسرک نہ جائےگی حُرفِ شیریں زباں پہ لانے سے سرپھٹے گانہ پیٹ پھُولے گا ہونہ خیرات بھی اگرتم سے اچھّی سیرت تواختیارکرو جبکہ اس کا ثواب ملتا ہے ہاںسنو،غورسےسنومجھ کو جب نہ کردارمیں طہارت ہو ناک کٹ جائےگی زمانےمیں اورتم کو ملےگی خوب سزا کوڈلا سنگما کی جانب سے Translated by: Hameed Almas
ಶಬ್ದಾರ್ಥಗಳು ಮಾಣ್ಬು = ; ಸಿರಿ = ಸಂಪತ್ತು; ಹದುಳ = ಕ್ಷೇಮ; ಹೋಪು = ;
ಕನ್ನಡ ವ್ಯಾಖ್ಯಾನ ಬಂದವರೊಡನೆ ವಿನಯವಾಗಿರಬೇಕು ಮನೆಗೆ ಬಂದವರನ್ನು ಸತ್ಕರಿಸುವುದು ಭಾರತೀಯ ಸಂಪ್ರದಾಯದಲ್ಲಿ ಅವ್ಯಾಹತವಾಗಿ ನಡೆದು ಬಂದಿರುವ ಒಂದು ಶಿಷ್ಟಾಚಾರ. 'ಅತಿಥಿ ದೇವೋಭವ' ಎಂದು ಮನೆಗೆ ಬಂದ ಅತಿಥಿಯನ್ನು ದೇವರೆಂದೇ ಕರೆದರು ನಮ್ಮ ಹಿರಿಯರು. ಅಹಂಕಾರದಿಂದ, ಐಶ್ವರ್ಯ ಮದದಿಂದ ಮೇರೆ ಮೀರಿದ ಸಿರಿವಂತರು ಈ ಶಿಷ್ಟಾಚಾರವನ್ನು ಉಪೇಕ್ಷಿಸಿದರೆ ಅಂಥವರನ್ನು ಕಂಡು ಅಣ್ಣನವರು ಮನೆಗೆ ಬಂದ ಅತಿಥಿ ಅಭ್ಯಾಗತರನ್ನು ಏನು ಬಂದಿರಿ, ಸುಖದಿಂದಿರುವಿರಾ? ಎಂದು ಕುಶಲ ಪ್ರಶ್ನೆ ಮಾಡಿದರೆ ನಿಮ್ಮ ಘನತೆ, ಗೌರವವೇನು ಬಿದ್ದು ಹೋಗುತ್ತದೆಯೇ? ಎಂದು ಕೇಳುತ್ತಾರೆ. ಬಂದವರನ್ನು ವಿನಯದಿಂದ 'ಕುಳಿತುಕೊಳ್ಳಿ' ಎಂದರೆ ನಿಮ್ಮ ಮನೆಯ ನೆಲದಲ್ಲಿ ತಗ್ಗು ಬೀಳುವುದೇ? ಎಂದು ಪ್ರಶ್ನಿಸುತ್ತಾರೆ. ಬಂದವರೊಡನೆ ನಾಲ್ಕು ಕುಶಲ ಮಾತುಗಳನ್ನು ಆಡಿದರೆ ನಿಮ್ಮ ತಲೆ, ಹೊಟ್ಟೆ ಏನಾದರೂ ಒಡೆದು ಹೋಗುವುದೇ? ಎಂದು ಕಟಕಿಯಾಡುತ್ತಿದ್ದಾರೆ. ಬಂದವರಿಗೆ ಕೊಡುವುದೇನೂ ಬೇಡ, ಅವರ ಬಗ್ಗೆ ವಿನಯ ವಿಶ್ವಾಸದ ನಾಲ್ಕು ಮಾತುಗಳನ್ನಾಡುವ ಒಂದು ಒಳ್ಳೆಯ ಗುಣವೂ ಇಲ್ಲದಿದ್ದರೆ ಕೂಡಲ ಸಂಗಮದೇವ ಅಂಥವನನ್ನು ಕೆಡಹಿ ಮೂಗ ಕೊಯ್ಯದೆ ಬಿಡುವನೇ ಎಂದರೆ ಅವನ ಅಹಂಕಾರಕ್ಕೆ ತಕ್ಕ ಶಾಸ್ತಿ ಮಾಡದೇ ಬಿಡುತ್ತಾನೆಯೇ ಎಂದು ಮೂದಲಿಸುತ್ತಿದ್ದಾರೆ. ಈ ರೀತಿ ನಡೆಯ ಕಲಿಸಿದ ಅಣ್ಣ ಉಣ್ಣುವುದನ್ನೂ ಈ ಮುಂದಿನ ವಚನದಲ್ಲಿ ಕಲಿಸಿದ್ದಾನೆ. - ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.

C-553 

  Sat 04 Jan 2025  

 https://savithru.blogspot.com/2024/10/blog-post_23.html
  ಸವಿತೃ