ಭಕ್ತನ ಜ್ಞಾನಿಸ್ಥಲ - ಶರಣರ ಸಂಗ
ಸಂಸಾರದಲ್ಲಿ ಹುಟ್ಟಿ ಮತ್ತೊಂದ ಬಯಸಲೇಕಯ್ಯಾ?
ನಗುವುದು ನುಡಿವುದು ಶಿವಭಕ್ತರೊಡನೆ.
ಸುಮ್ಮಾನ ಹಮ್ಮು ಬಿಮ್ಮಾಗಿರಲೇಕಯ್ಯಾ?
'ವಿನಯಾದಿ ವಿಹೀನಸ್ಯ| ಪುಂಸೋ ಜನ್ಮ ನಿರರ್ಥಕಂ|
ಗುರುಣಾs ಸಮಂ ಹಾಸ್ಯಂ| ಕರ್ತವ್ಯಂ ಕುಟಿಲಂ ವಿನಾ||
ನಮ್ಮ ಕೂಡಲಸಂಗನ ಶರಣರೊಡನೆ
ಮನದೆರೆದು ಮಾತನಾಡುವುದಯ್ಯಾ.
Transliteration Sansāradalli huṭṭi mattonda bayasalēkayyā?
Naguvudu nuḍivudu śivabhaktaroḍane.
Sum'māna ham'mu bim'māgiralēkayyā?
'Vinayādi vihīnasya| punsō janma nirarthakaṁ|
guruṇās samaṁ hāsyaṁ| kartavyaṁ kuṭilaṁ vinā||
nam'ma kūḍalasaṅgana śaraṇaroḍane
manaderedu mātanāḍuvudayyā.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Born in this world of sin,
Why should I wish
Augut else except
To smile, to speak
To Śiva's devotees?
Why should I be, good Sir,
A proud. conceited, sullen man?
'Vain is his life
Who has no courtesy!.
If you aren't insincere,
You may even jest at ease
With your own Master!,
You, Sir, should speak
With our Kūḍala Saṅga's Śaraṇās
With open heart.
Translated by: L M A Menezes, S M Angadi
Hindi Translation संसार में जन्म लेकर किसी और की आशा क्यों करें?
हँसो, बोलो शिवभक्तों के साथ ।
मौन, घमंडी और अभिमानी क्यों बनते हो?
“अभ्यासेन विहीनस्य तस्य जन्म निरर्थकम् ।
गुरुणापि समं हास्यं कर्तव्यं कुटिलं विना ॥”
अतः हमारे कूडलसंगमेश के शरणों से
मन खोलकर बोलना चाहिए ॥
Translated by: Banakara K Gowdappa
Telugu Translation సంసారమున బుట్టి వేఱెస్మరింప నేలయ్యా?
నవ్వుచు శివభక్తులతో మాటాడక
హుమ్మని బింకమ్ముతో బిగియ నేలయ్యా?
‘‘అభ్యాసస్స విహీనస్య; తస్యజన్మ నిరర్ధకం
గురోరపి సమం హాస్యం: కర్తవ్యం కుటిలం వినా’’
మా కూడల సంగని శరణులలో
మనసార మాటాడవచ్చునయ్యా!
Translated by: Dr. Badala Ramaiah
Tamil Translation உலக வாழ்விலே பிறிதொன்றை நயப்பதேனையனே?
நகுவதும், உரைப்பதும் சிவனடியாருடன்,
வரிதேவீண் அகந்தையுறுவது ஏனையனே?
“அப்யாஸேன விஹீனஸ்ய தஸ்ய ஜன்ம நிரர்தகம்|
குராவபி ஸமம் ஹாஸ்யம் கர்தவ்யம் குடிலம் வினா”||
இதனால்நம் கூடல சங்கன் அடியாரொடு
மனந்திறந்து சொல்லாடுவதையனே.
Translated by: Smt. Kalyani Venkataraman, Chennai
Marathi Translation
संसारी येऊनि, मनी इच्छा फार
नको अन्य विचार करावा तो
शिवशरण संगे, बोलणे ते हसणे
मन मोकळे करणे, आनंदाने
“अभ्यासेन निपीनस्य तस्य जन्म निरर्थकं
गुरावपि समं हास्य कर्तव्य कुटिलं विना”
कूडलसंगमदेवा ! हेचि ते प्रमाण
खोटा अभिमान करु नये
अर्थ - विशिष्ट उद्देश साध्य करण्यासाठी संसारात जन्म घेऊन इतर बाबीकडे आकर्षित का व्हावे ? आणि इतर इच्छा का बाळगू ? शिवशरणांचा सत्संग मिळविताना त्यांच्याबरोबर मनमोकळे करुन बोलेन. त्यांच्याबरोबर हसताना जुजबीपणा मनात आणणार नाही. त्यांच्याशी बोलतांना व हसताना कसलाही संकोच मनात येऊ देणार नाही. अधिकाराचा दर्प वा अभिमान यत्किंचिंतही मनात येऊ देणार नाही. महात्मा बसवेश्वर आपल्या वचनाला अधिक पुष्टी देण्यासाठी आगममधील वरील श्लोक उदाहरणास्तव घेऊन त्याची महती ते पटवून सांगत आहेत.
Translated by Rajendra Jirobe, Published by V B Patil, Hirabaug, Chembur, Mumbai, 1983
संसारात जन्म घेतला तर कोणती
इच्छा करता ? सद्भक्ताबरोबर हसणे-
बोलणे यातच सर्व आहे.
अहंकार, दुराभिमान का धरतो ?
अभ्यासेन विहीनस्य तस्य जन्म निरर्थक।
मुरावपि समं हास्यं कर्तव्यं कुटिलं विना।
आमच्या कूडलसंगाच्या शरणाबरोबर
मन मोकळे ठेवून बोलले पाहिजे.
Translated by Shalini Sreeshaila Doddamani
ಶಬ್ದಾರ್ಥಗಳು ಕುಟಿಲ = ಮೋಸ; ತಸ್ಯ = ; ಬಿಮ್ಮು = ; ವಿಹೀನ = ಸೇರುವುದು; ಹೆಮ್ಮು = ;
ಕನ್ನಡ ವ್ಯಾಖ್ಯಾನ ನಾವು ಈ ಪ್ರಪಂಚದಲ್ಲಿ ಹುಟ್ಟಿದ ಮೇಲೆ-ಅಲ್ಲಿ ನಮ್ಮನ್ನು ಅನುಗ್ರಹಿಸಲೆಂದೇ ಬಂದಿರುವ ಸಜ್ಜನರಿದ್ದ ಮೇಲೆ, ಇನ್ನೊಂದನ್ನೇಕೆ ಬಯಸಬೇಕು? ಆ ಶಿವಭಕ್ತರೊಡನೆ ಶರಣರೊಡನೆ ಕುಹಕವಿಲ್ಲದೆ ಸರಸವಾಗಿರಬೇಕು, ಅಹಂಕಾರವಿಲ್ಲದೆ ಗಡಿಬಿಡಿಯಾಗಿ ಮಾತನಾಡಬೇಕು. ಇದಕ್ಕಿಂತಲೂ ಮಿಗಿಲಾದ ಸೌಭಾಗ್ಯ ವೇನಿದೆ ಈ ಸಂಸಾರ(ಪ್ರಪಂಚ)ದಲ್ಲಿ ಎನ್ನುವರು ಬಸವಣ್ಣನವರು. ಮತ್ತು ಅದನ್ನು ಸಮರ್ಥಿಸಲು ಒಂದು ಶ್ಲೋಕವನ್ನು ಉಲ್ಲೇಖಿಸಿರುವರು-“ ಗುರುವಿನ ಸಾನ್ನಿಧ್ಯವಿಲ್ಲದವನ ಜನ್ಮ ನಿರರ್ಥಕ-ಕುಟಿಲವಿಲ್ಲದೆ ಅವನೊಡನೆ ಸರಸವಾಗಿರುವುದೂ ಮತ್ತು ಮುಕ್ತಮನಸ್ಕನಾಗಿರುವುದೂ ತಪ್ಪೇನಲ್ಲ” ಎಂದದರರ್ಥ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು