•  
  •  
  •  
  •  
Index   ವಚನ - 243    Search  
 
ಭಕ್ತನ ಜ್ಞಾನಿಸ್ಥಲ - ಭಕ್ತಿ
ಭಕ್ತಿಯೆಂಬ ನಿಧಾನವ ಸಾಧಿಸುವರೆ ಶಿವಪ್ರೇಮವೆಂಬಂಜನವ ನೆಚ್ಚಿಕೊಂಬುದು. ಭಕ್ತನಾದವಂಗೆ ಇದೆ ಪಥವಾಗಿರಬೇಕು. ನಮ್ಮ ಕೂಡಲಸಂಗನ ಶರಣರನುಭಾವ ಗಜವೈದ್ಯವಯ್ಯಾ.
Transliteration Bhaktiyemba nidhānava sādhisuvare śivaprēmavemba an̄janavaneccikombudu. Bhaktanādavaṅge ide pathavāgirabēku. Nam'ma kūḍalasaṅgana śaraṇara anubhāva gajavaidyavayyā.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 If you would find Devotion's hoard You ought to trust the eyeblack called The love of God. This, this must be the path Of the true devotee. The experience of the Śaraṇās Of our Kūḍala Saṅga Is a sovereign remedy! Translated by: L M A Menezes, S M Angadi
Hindi Translation भक्ति रुपी निधान साधना हो, तो शिवप्रेम रुपी सिद्धांजन में विश्वास रखो । भक्त का यही पथ होना चाहिए । मम कूडलसंग के शरणों का अनुभाव श्रेष्ट वैद्य है ॥ Translated by: Banakara K Gowdappa
Telugu Translation భక్తియను నిధానము సాధింపగ శివ ప్రేమయను అంజన మెత్తుకొనవలె; భక్తుండగువాని కిదే పథమై యుండవలె; సంగని శరణుల అనుభావము గజవైద్యమయ్యా! Translated by: Dr. Badala Ramaiah
Tamil Translation பக்தி எனும் செல்வத்தை நிலைநாட்டிட, “சிவப்பிரேமை” எனும் அஞ்சனத்தை நயப்பாய் அடியார் என்போனுக்கு இதே நல்வழியாம், நம் கூடல சங்கனினடியாரை யுணர்வதே மாமருந்தாம். Translated by: Smt. Kalyani Venkataraman, Chennai
Marathi Translation भक्तीरुपी संपत्ती मिळविण्यासाठी शिवप्रेमरुपी अंजन लावले पाहिजे. भक्तासाठी हाच मार्ग योग्य आहे. कूडलसंगाच्या शरणांचा अनुभाव गजवैद्य आहे. Translated by Shalini Sreeshaila Doddamani
ಶಬ್ದಾರ್ಥಗಳು ಅಂಜನ = ದೋಷ ಅಂಟಿಕೊಳ್ಳುವುದು; ಅನುಭಾವ = ನಿಜದ ಅಥವಾ ಪರಮಾತ್ಮನ ಅನುಭವ ಅಥವಾ ಸಾಕ್ಷತ್ಕಾರ; ನಿಧಾನ = ಹುದುಗಿಟ್ಟ ಹಣ; ಪಥ = ದಾರಿ; ಶಿವಪ್ರೇಮ = ಶಿವನ ಮೇಲಿನ ಪ್ರೀತಿ;
ಕನ್ನಡ ವ್ಯಾಖ್ಯಾನ ಭಕ್ತಿಯೆಂಬುದೊಂದು ಗುಪ್ತನಿಧಿ-ಅದು ನನಗೆ ಕೈವಶವಾಗುವುದೆಂತೆಂದು ಚಿಂತಿಸಬೇಡ. ಶಿವಪ್ರೇಮವೆಂಬ ಅಂಜನವನ್ನು ಕಣ್ಣಿಗೆ ಎಚ್ಚಿಕೊಂಡು ನೋಡಿದ್ದೇ ಆದರೆ ಕಾಣುವುದು ನಮಗೆ ಆ ನಿಧಿ. ಅಂದರೆ- ಶಿವ ಪ್ರೇಮ ತುಂಬಿದ ಕಣ್ಣುಗಳಿಂದ ಈ ಜಗತ್ತನ್ನು ಅವಲೋಕಿಸಿದ್ದೇ ಆದರೆ-ಆ ದರ್ಶನವೇ ಭಕ್ತಿಯೆಂದರ್ಥ, ಪ್ರೇಯಸಿಯು ಪ್ರೇಮಿಯನ್ನೇ ಅಲ್ಲ-ಅವನಿಗೆ ಪ್ರಿಯವಾದುದನ್ನೆಲ್ಲ ಪ್ರೀತಿಸುವಂತೆ-ಭಕ್ತನಾದವನು ಶಿವ ನನ್ನೇ ಅಲ್ಲ. ಶಿವನಿಗೆ ಪ್ರಿಯವಾದ ಭಕ್ತರನ್ನೂ (ಸೃಷ್ಟಿಯನ್ನೂ) ಪ್ರೀತಿಸಬೇಕು. ಅದೇ ನಿಜವಾದ ಭಕ್ತಿ. ಅಂಥ ಭಕ್ತಿಗಿಂತಲೂ ಮಿಗಿಲಾದ ವೈಭವವಿಲ್ಲ. ಈ ಭಕ್ತಿಯ ಮತ್ತಷ್ಟು ವಿವರ ತಿಳಿಯಬೇಕಾದರೆ ಶಿವಶರಣರೊಡನೆ ಸಂಭಾಷಣೆ ಮಾಡಬೇಕು. ಶರಣರೊಡನೆ ಮಾಡುವ ಈ ಶಿವಾನುಭಾವವು ಭವವೆಂಬ ದೊಡ್ಡ ರೋಗವನ್ನು ಕಳೆದು ಶಿವಾನಂದ ನಿರಾಮಯವನ್ನು ದಯಪಾಲಿಸುವುದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು