ʼಇತ್ತ ಬಾರಯ್ಯಾ, ಇತ್ತ ಬಾರಯ್ಯಾʼ ಎಂದು
ಭಕ್ತರೆಲ್ಲರೂ ಕೂರ್ತು ಹತ್ತೆ ಕರೆಯುತಿರೆ,
ಮತ್ತೆ ಕೆಲಕ್ಕೆ ಹೋಗಿ, ಶರಣೆಂದು ಹಸ್ತ-ಬಾಯನೆ ಮುಚ್ಚಿ,
ಕಿರಿದಾಗಿ ಭೃತ್ಯಾಚಾರವ ನುಡಿದು,
ವಿನಯವದ್ಧ್ಯಾನವುಳ್ಳರೆ
ಎತ್ತಿಕೊಂಬನಯ್ಯಾ, ಕೂಡಲಸಂಗಮದೇವ ಪ್ರಮಥರ ಮುಂದೆ.
Transliteration ʼitta bārayyā, itta bārayyāʼ endu
bhaktarellarū kūrtu hatte kareyuttire,
matte kelakke hōgi, śaraṇendu hasta-bāyane mucci,
kiridāgi bhr̥tyācārava nuḍidu,
vinayavad'dhyānavuḷḷare
ettikombanayyā, kūḍalasaṅgamadēva pramathara munde.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 When all the devotees
Invite you fondly to their side:
'Come here, Sir, come, Sir, here,'
If, sidling off, you greet,
With hand placed over your mouth,
Shrinking, and mumbling servant-wise,
With modesty and thoughtfully,
Lord Kūḍala Saṅgama will lift you up
Before the Pioneers.
Translated by: L M A Menezes, S M Angadi
Hindi Translation यहाँ आइए ‘यहाँ आइए’ सफल भक्तों के
यों प्रेम से पास बुलाने पर, पार्श्व में जाकर
प्रणाम करते हाथ से मुँह ढाँपकर,
सकुचाने, भृत्याचार की बात करते
विनय से ध्यान करने पर कूडलसंगमदेव
तुम्हें प्रमथों के समक्ष उठालेंगे ॥
Translated by: Banakara K Gowdappa
Telugu Translation రావయ్యా; యిటు రావయ్యా యని;
భక్తులందరూ నను ప్రీతి పిలువగ;
మాటిమాటికి పజ్జ కొదవి శరణంచు
వేళ్ళతో నోరుమూసి; చిరుతనై
భృత్యాచారము సల్పి వినయవ ద్ద్యానమందున్న
ప్రమధుల యెదుట సంగయ్య ఎత్తుకొనునయ్యా!
Translated by: Dr. Badala Ramaiah
Tamil Translation இங்கே வாருமையா இங்கே வாருமையா என,
பக்தரனைவருங் கூடி அருகில் விளிக்க
மற்று மருகி “தஞ்ச” மெனக் கையினாற் வாயைப் பொத்தி,
மென்மையாகத் தொண்டு முறை யுரைத்துப்
பணிவுடனிருப்பின் ஏற்பான் ஐயனே
கூடல சங்கம தேவன் கணங்களின் முன்னே.
Translated by: Smt. Kalyani Venkataraman, Chennai
Marathi Translation
इकडे यावे, इथे यावे असे प्रेमाने शरणांनी बोलविले तर
नम्रतेने जवळ जावून शरण करून,
तोंडावर हात ठेवून, कमी बोलून भृत्याचार केला पाहिजे.
विनयाने ध्यान दिले तर जवळ घेतात.
अशा विनयी लोकांना उचलून घेतो.
कूडलसंगमदेव प्रमथांच्या समोर.
Translated by Shalini Sreeshaila Doddamani
ಶಬ್ದಾರ್ಥಗಳು ಪ್ರಮಥರು = ; ಭೃತ್ಯಾಚಾರ = ಪಂಚಾಚಾರಗಳಲ್ಲಿ ಒಂದು, ಸೇವಾಭಾವ; ಹತ್ತೆ = ;
ಕನ್ನಡ ವ್ಯಾಖ್ಯಾನ ನಮ್ಮನ್ನು ಶಿವಭಕ್ತರು ಕಂಡು ಪ್ರೀತಿಯಿಂದ ಇತ್ತ ಬಾ, ಇನ್ನೂ ಹತ್ತಿರ ಬಾ ಎಂದು ಕರೆಯುತ್ತಿದ್ದರೆ ನಾವು ಮತ್ತೆ ಸ್ವಲ್ಪ ದೂರವಾಗಿಯೇ ನಿಂತು ಶರಣು ಎಂದು-ಆ ಸಲಿಗೆಗೆ ಹೆದರಿ ಬಾಯಿಗೆ ಕೈಯನ್ನು ಮುಚ್ಚಿಕೊಂಡು ಕುಗ್ಗಿ ನಿಂತು-ಅಯ್ಯ ನಾನು ನಿಮ್ಮ ಸೇವಕ, ಅಪ್ಪಣೆ ಕೊಡಿಸಿರೆಂದು ಅವರ ಕಡೆಯೇ ದತ್ತಾವಧಾನವಾಗಿರಬೇಕು. ಆಗ ಶಿವನು ನಮ್ಮನ್ನು ತನ್ನ ಕುಮಾರನೆಂದು ಶಿವಶರಣರ ಸಮಕ್ಷಮದಲ್ಲಿ ಮುದ್ದಿನಿಂದ ಸೆಳೆದೆತ್ತಿ ಬಿಗಿಯಪ್ಪುವನು.
ನೆರೆದ ಬಂಧುಬಳಗ ಕರೆದರೂ ಹತ್ತಿರ ಬಾರದೆ ದೂರ ಸರಿದು ಮುದ್ದಾಗಿ ಶರಣೆಂದು-ಎಂದ ತೊದಲಿಗೆ ಲಜ್ಜೆಯಾಗಿ, ಬಾಯನ್ನು ಕೈಯಿಂದ ಬಿಗಿಹಿಡಿದು, ಅಣಗಿನಿಂತು, ವಿಧೇಯವಾದ ಮುದ್ದು ಮಗುವನ್ನು ತಂದೆ ಅಕ್ಕರಿಂದ ಬಾಚಿ ತಬ್ಬಿಕೊಳ್ಳುವ ಸುಂದರ ಚಿತ್ರದ ಹಂದರವಿದೆ ಈ ವಚನೋಕ್ತಿಯಲ್ಲಿ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು