•  
  •  
  •  
  •  
Index   ವಚನ - 246    Search  
 
ಭಕ್ತನ ಜ್ಞಾನಿಸ್ಥಲ - ವಿನಯ
ಭಕ್ತ ಭಕ್ತನ ಮನೆಗೆ ಬಂದರೆ, ಭೃತ್ಯಾಚಾರವ ಮಾಡಬೇಕು: ಕರ್ತನಾಗಿ ಕಾಲ ತೊಳೆಯಿಸಿಕೊಂಡರೆ, ಹಿಂದೆ ಮಾಡಿದ ಭಕ್ತಿಗೆ ಹಾನಿ! ಲಕ್ಷಗಾವುದ ದಾರಿಯ ಹೋಗಿ ಭಕ್ತನು ಭಕ್ತನ ಕಾಂಬುದು ಸದಾಚಾರ; ಅಲ್ಲಿ ಕೂಡಿ ದಾಸೋಹವ ಮಾಡಿದರೆ ಕೂಡಿಕೊಂಬನು ನಮ್ಮ ಕೂಡಲಸಂಗಮದೇವನು.
Transliteration Bhakta bhaktana manege bandare, bhr̥tyācārava māḍabēku: Kartanāgi kāla toḷeyisikoṇḍare, hinde māḍida bhaktige hāni! Lakṣagāvuda dāriya hōgi bhaktanu bhaktana kāmbudu sadācāra; alli kūḍi dāsōhava māḍidare kūḍikombanu nam'ma kūḍalasaṅgamadēvanu.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 When bhakta comes to bhakta's house, He must behave as servant would: If he should ask to wash his feet, As though he were the lord, His past devotion is a waste! A hundred thousand leagues, to see A bhakta, is meritorious deed; And if, together, they perform The lowliest service, then indeed Our Lord Kūḍala Saṅgama Shall take them to his heart! Translated by: L M A Menezes, S M Angadi
Hindi Translation भक्त, भक्त द्वार आने पर भृत्याचार करना चाहिए। कर्ता बनकर पैर धुलवाने से पूर्व-कृत भक्ति नष्ट होगी! लाख कोस चलकर भक्त का भक्त को देखना सदाचार है । वहाँ मिलकर ‘दासोह’ करें तो मम कूडलसंगमदेव अपना लेंगे॥ Translated by: Banakara K Gowdappa
Telugu Translation భక్తుడు భక్తుని యింటికి రాగ; భృత్యాచారము సేయవలె; కర్తjైు కాళ్ళు తా కడిగించుకొన ముందు చేసిన భక్తి కి ముప్పువచ్చు: కడు దూరము నడచివచ్చి; భక్తుడు భక్తుని చూచుట సదాచారమట గూడి దాసోహము సేయకూడుకొనునయ్య కూడల సంగయ్య: Translated by: Dr. Badala Ramaiah
Tamil Translation அடியார், அடியார் மகைபுகின் தொண்டு செயல் வேண்டும், உடையனெனக் காலை தூய்மை செய்து கொளின், முன்பு செய்த பக்திக்கு அது கேடு, இலட்சக்காத வழி சென்று, அடியார் அடியாரைக் காண்பது நன்னெறியாம், ஆங்குக் கூடித் தொண்டு செயின் கூடிக் கொள்வன் தம் கூடல சங்கம தேவன். Translated by: Smt. Kalyani Venkataraman, Chennai
Marathi Translation भक्त भक्ताघरी येता भृत्याचार केला पाहिजे. कर्ता होऊन पाय धुवून घेईल तर त्याच्या भक्तीची हानी होईल. लाखो कोस वाट चालून भक्ताने भक्ताला भेटणे हा सदाचार आहे. दोघे मिळून दासोह करु लागले तर कूडलसंगमदेव दोघांना प्रसन्न होईल. Translated by Shalini Sreeshaila Doddamani
ಶಬ್ದಾರ್ಥಗಳು ಕಾಂಬು = ; ಗಾವುದ = ; ದಾಸೋಹ = ಸೇವಾಭಾವನೆ; ಭೃತ್ಯಾಚಾರ = ಪಂಚಾಚಾರಗಳಲ್ಲಿ ಒಂದು, ಸೇವಾಭಾವ; ಲಕ್ಕ = ; ಸದಾಚಾರ = ಒಳ್ಳೆಯ ಾಚಾರ; ಹಾನಿ = ನಷ್ಟ;
ಕನ್ನಡ ವ್ಯಾಖ್ಯಾನ ನಾವು ನಿಜವಾದ ಭಕ್ತರಾದರೆ ನಮ್ಮ ಮನೆಗೊಬ್ಬ ಭಕ್ತ ಬಂದಾಗ-ಆ ಮಹನೀಯನಿಗೆ ನಾವೇ ಕಾಲು ತೊಳೆದು ಒಳಗೆ ಬರಮಾಡಿಕೊಳ್ಳಬೇಕೇ ಹೊರತು-ನಾವೇ ಕಾಲುಚಾಚಿ ಕುಳಿತು ಅವನಿಂದ ಪಾದಪೂಜೆ ಮಾಡಿಸಿಕೊಳ್ಳುವುದೆಂದರೆ-ಅದುವರೆಗೆ ನಾವು ಮಾಡಿದ ಭಕ್ತಿಗೆ ನಾವೇ ಬೆಂಕಿ ಹಚ್ಚಿಕೊಂಡಂತಾಗುವುದು. ಮತ್ತು ಎಷ್ಟೇ ದೂರವಾಗಲಿ ನಾವಾಗಿಯೇ ನಡೆದು ಹೋಗಿ ಅವನ ದರ್ಶನ ಪಡೆದುಕೊಂಡು ಅವನು ಮಾಡುವ ದಾಸೋಹದಲ್ಲಿ ನಮ್ಮ ಕೈಂಕರ್ಯ ಸಲ್ಲಿಸಿದ್ದರೆ ಸದಾಚಾರವಾಗುತ್ತಿತ್ತು. ಆಗ ಶಿವನೂ ಅಲ್ಲಿ ನಮ್ಮ ಜೊತೆಗೂಡುತ್ತಿದ್ದನು-ಎಂಬಲ್ಲಿ ಆ ಭಕ್ತನು ತಾನಾಗಿ ಬಂದು ನಮಗೆ ದರ್ಶನ ಕೊಟ್ಟಾಗ ಗರ್ವದಿಂದ ನಡೆದುಕೊಳ್ಳುವುದು ಅನಾಚಾರ. ವಿ: ಈ ವಚನದಲ್ಲಿ ಬಸವಣ್ಣನವರು ಮಾಡಿರುವ ಎರಡು ಕಟ್ಟಪ್ಪಣೆಗಳನ್ನು ಗಮನಿಸಿರಿ : (1) ಭಕ್ತರು ಭಕ್ತರ ಮನೆಗೆ ದೂರವನ್ನು ಎಣಿಸದೆ ಹೋಗಬೇಕು. ಮನೆಯವರು ಬಂದವರ ಕಾಲು ತೊಳೆದು ಒಳಗೆ ಬರಮಾಡಿಕೊಳ್ಳಬೇಕು, ಕೂಡಿಕೊಂಡು ದಾಸೋಹ ಮಾಡಬೇಕು. (2) ಬಂದ ಭಕ್ತರಿಗೆ ನಾವು ಪಾದಾರ್ಚನೆ ಮಾಡಬೇಕೇ ಹೊರತು-ನಾವೇ ಅವರಿಂದ ಪಾದರ್ಚನೆ ಮಾಡಿಸಿಕೊಳ್ಳಬಾರದು (ಮಠದಲ್ಲಿರುವ ಅಥವಾ ಬೀಡುಬಿಟ್ಟಿರುವ ಕರ್ತ ಜಂಗಮನಿಗೆ ಈ ನಿಯಮ ಅನ್ವಯಿಸುವುದಿಲ್ಲ).

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು