•  
  •  
  •  
  •  
Index   ವಚನ - 247    Search  
 
ಭಕ್ತನ ಜ್ಞಾನಿಸ್ಥಲ - ದಯೆ
ದಯವಿಲ್ಲದ ಧರ್ಮವದೇವುದಯ್ಯಾ? ದಯವೇ ಬೇಕು ಸಕಲಪ್ರಾಣಿಗಳೆಲ್ಲರಲ್ಲಿಯೂ; ದಯವೇ ಧರ್ಮದ ಮೂಲವಯ್ಯಾ: ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ.
Transliteration Dayavillada dharmavadēvudayyā? Dayavē bēku sakalaprāṇigaḷellaralliyū; dayavē dharmada mūlavayyā: Kūḍalasaṅgayyanantalladollanayyā.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
Music Courtesy: Album: Vachana Sudhamrutha Dhaare, Singer: Kasturi Shankar, Music Director: Kumar Eshwar, Music Label : Lahari Music
English Translation 2 What sort of religion can it be Without compassion? Compassion needs must be Towards all living things; Compassion is the root Of all religious faiths: Lord Kūḍala Saṅga does not care For what is not like this. Translated by: L M A Menezes, S M Angadi
Hindi Translation दयाहीन धर्म क्या कर सकता है? दया होनी चाहिए सकल प्राणियों पर दया ही धर्म का मूल है ऐसा न हो तो कूडलसंगमदेव नहीं चाहते ॥ Translated by: Banakara K Gowdappa
Telugu Translation దయలేని ధర్మమది యెట్టిదయ్యా? దయయే వలయు సమ స్తజీవుల యెడ; దయయే మూలమయ్యా ధర్మమునకు; కూడల సంగయ్య ఇటగాక ఒల్లడయ్యా! Translated by: Dr. Badala Ramaiah
Tamil Translation அன்பிலா அறம் எதற்கு ஐயனே? அன்பே வேணும் அனைத் துயிர்களிடத்தெலாம், அன்பே அறத்தின் மூலம் ஐயனே, கூடல சங்கம தேவன் அன்பிலாரை நயவா னையனே. Translated by: Smt. Kalyani Venkataraman, Chennai
Marathi Translation दयारहित धर्म, कोणता भूवरी सकल प्राण्यावरी, दया किजे कूडलसंगमदेवा! आंतरीची दया धर्माचा मूळ पाया, तोची एक अर्थ – ज्या धर्मात दया नाही तो धर्म धर्मच नव्हे. त्यास धर्म म्हणता येणार नाही. कारण जगातील सर्व जीव - प्राणीमात्राच्या कल्याणास एकमेव दयाच सिद्ध होऊ शकते. म्हणून दया हीच धर्माचा मूळ पाया होय. दया ज्यांच्या ठायी नाही ते माझ्या कूडलसंगमदेवाना नको आहे. दयेशिवाय परमेश्वराला जाणणे अशक्य आहे. Translated by Rajendra Jirobe, Published by V B Patil, Hirabaug, Chembur, Mumbai, 1983 दया रहित धर्म तो धर्म ही नाही दया ही पाहिजे सकल प्राणीमात्रांना दया ही धर्माचे मूळ आहे. कूडलसंगमदेव अन्यथा जवळ घेत नाही. Translated by Shalini Sreeshaila Doddamani
Urdu Translation بتاؤکون سا مذہب ہےجونہیں کہتا! رہے ہرایک سےدنیا میں مشفقانہ سلوک، تمھارے پیارسےمحروم ہوں نہ حیواں بھی یہ مہراورکرم ہی اساس ِمذہب ہیں وہ شخص جس کی کسی بات میںخلوص نہ ہو شرف ِقبول کااس کونہ مل سکےگا کبھی مرےشفیق مرےدیوا کوڈلا سنگا Translated by: Hameed Almas
ಶಬ್ದಾರ್ಥಗಳು ದಯೆ = ಕರುಣೆ;
ಕನ್ನಡ ವ್ಯಾಖ್ಯಾನ ಧರ್ಮಕ್ಕೆ ಆಧಾರ ವೇದವಲ್ಲ; ದಯೆ ಭಾರತೀಯ ದರ್ಶನ ಶಾಸ್ತ್ರದ ಬೆನ್ನೆಲುಬಾದ ವೇದದಲ್ಲಿ ಮುಖ್ಯವಾಗಿ ಎರಡು ಭಾಗಗಳಿವೆ. ಒಂದು ಕರ್ಮಕಾಂಡ, ಮತ್ತೊಂದು ಜ್ಞಾನಕಾಂಡ. ಕರ್ಮಕಾಂಡವು ಯಜ್ಞಯಾಗಾದಿಗಳನ್ನು ಮಾಡುವುದರಿಂದ ಸ್ವರ್ಗ ಸುಖವು ಲಭಿಸುವುದೆಂದು ಬೋಧಿಸಿದರೆ, ಜ್ಞಾನಕಾಂಡವು ಅಂತಹ ಸ್ವರ್ಗ ಸುಖವು ಅಸ್ಥಿರವೆಂದು ಅಲ್ಲಗಳೆದು ಆತ್ಮಜ್ಞಾನವನ್ನು ಸಂಪಾದಿಸುವುದರ ಮೂಲಕ ಸಂಸಾರ ಬಂಧನದಿಂದ ಸಂಪೂರ್ಣ ಮುಕ್ತನಾಗಿ ನಿತ್ಯ, ನಿರತಿಶಯ ಸುಖವನ್ನು ಪಡೆಯಬಹುದೆಂದು ಬೋಧಿಸುತ್ತದೆ. ಇವುಗಳಲ್ಲಿ ಕರ್ಮಕಾಂಡವನ್ನೇ ಪ್ರಧಾನವಾಗಿ ಆಧರಿಸಿ ಬೆಳೆದು ಬಂದಿರುವ ಪೂರ್ವಮೀಮಾಂಸಾ ಎಂಬ ದರ್ಶನದ (Philosophical system) ಪ್ರಕಾರ ‘ಯಾಗಾದಿ ರೇವ ಧರ್ಮಃ’ ಅಂದರೆ ವೇದದಲ್ಲಿ ವೇದದಲ್ಲಿ ವಿಧಿಸಲಾಗಿರುವ ಯಜ್ಞಯಾಗಾದಿಗಳನ್ನು ಮಾಡುವುದೇ ‘ಧರ್ಮ’ವೆಂಬ ಪದದ ಅರ್ಥ. ಹೀಗೆ ‘ಧರ್ಮ’ ಸ್ವರೂಪವಾದ ಯಾಗಗಳು ಅನೇಕ. ಅವುಗಳಲ್ಲಿ ‘ಜ್ಯೋತಿಷ್ಟೋಮ’ ಎಂಬ ಹೆಸರಿನ ಒಂದು ಯಾಗವಿದೆ. ಈ ಯಾಗವನ್ನು ಸ್ವರ್ಗದ ಅಭಿಲಾಷೆಯುಳ್ಳವರು ಮಾಡಬೇಕೆಂದು ವೇದವು ವಿಧಿಸುತ್ತದೆ. ‘ಜ್ಯೋತಿಷ್ಟೋಮೇನ ಸ್ವರ್ಗ ಕಾಮೋಯಜೇತ’. ಹೀಗೆ ಸ್ವರ್ಗ ಸಾಧನವಾದ ಜ್ಯೋತಿಷ್ಟೋಮ ಯಾಗವನ್ನು ಮಾಡುವ ವಿಧಾನವನ್ನೂ ಅದೇ ವೇದವು ತಿಳಿಸುತ್ತಾ ಈ ಯಾಗ ನಡೆಯುವ ಮೂರು ದಿನಗಳೂ ಮೂರು ಪಶುಗಳನ್ನು ಬಲಿಕೊಡಬೇಕೆನ್ನುತ್ತದೆ. ಒಂದು ಕಡೆ ‘ಮಾ ಹಿಂಸಾತ್ ಸರ್ವ ಭೂತಾನಿ’ ಎಂದು ಪ್ರಾಣಿ ಹಿಂಸೆಯನ್ನು ಮಾಡಬಾರದೆಂದು ನಿಷೇಧಿಸುವ ವೇದವೇ ಮತ್ತೊದೆಡೆ ‘ಪಶುಮಾಲಭತೆ’ ಎಂದು ಈ ಯಾಗದಲ್ಲಿ ಪ್ರಾಣಿಗಳನ್ನು ಬಲಿಕೊಡಬೇಕೆಂದು ವಿಧಿಸುತ್ತದೆ. ಇದೆಂತಹ ವಿಪರ್ಯಾಸ! ಆದರೆ ವೇದದಲ್ಲಿ ಯಾವುದೇ ವಿಪ್ರತಿಪತ್ತಿಯಿದೆಯೆಂದು ಒಪ್ಪದ ಯಾವುದೇ ವೇದ ವಾಕ್ಯವನ್ನು ನಿರರ್ಥಕವೆಂದು ಕೈಬಿಡದ ವೈದಿಕರು ಹೀಗೆ ಯಜ್ಞ ಕಾಲದಲ್ಲಿ ಮಾಡುವ ಪ್ರಾಣಿ ಹಿಂಸೆಯ ವೇದ ವಿಹಿತವಾದ್ದರಿಂದ (ವೇದವೇ ವಿಧಿಸುವುದರಿಂದ) ಹಿಂಸೆಯಲ್ಲವೆಂದೂ, ವೇದವು ನಿಯಮಿಸದೆ ಯಾಗವನ್ನು ಬಿಟ್ಟು ಬೇರೆಡೆಗೆ ಮಾಡುವ ಪ್ರಾಣಿಹಿಂಸೆಯು ಹಿಂಸೆಯೆಂದೂ ಕುಂಟು ಕಾರಣವನ್ನು ಕೊಡುತ್ತಾರೆ. ಇನ್ನು ಕೆಲವರು ಹೀಗೆ ಯಾಗದಲ್ಲಿ ಮಾಡುವ ಪ್ರಾಣಿ ಹಿಂಸೆಯನ್ನು ಹಿಂಸೆಯೆಂದು ಒಪ್ಪಿಕೊಂಡರೂ ಅದರಿಂದ ಬರುವ ಪಾಪವನ್ನು ಪ್ರಾಯಶ್ಚಿತ್ತದಿಂದ ಪರಿಹರಿಸಿಕೊಳ್ಳಬಹುದೆನ್ನುತ್ತಾರೆ, ಮತ್ತೆ ಕೆಲವರು ಯಾಗದಲ್ಲಿ ಬಲಿಯಾಗುವ ಪಶುಗಳೂ ಸ್ವರ್ಗಕ್ಕೆ ಹೊಗುತ್ತವೆಯೆನ್ನುತ್ತಾರೆ! ಆದ್ದರಿಂದಲೇ ಚಾರ್ವಾಕರು, “ಪಶುಶ್ಚೇನ್ನಿಹತಃ ಸ್ವರ್ಗಂ ಜ್ಯೋತಿಷ್ಟೋಮೇ ಗಮಿಶೃತಿ! ಸ್ವಪಿತಾ ಯಜಮಾನೇನ ತತ್ರ ಕಸ್ಮಾನ್ನಹಿಂಸ್ಯತೆ?” ಜ್ಯೋತಿಷ್ಟೋಮಯಾಗದಲ್ಲಿ ಕೊಂದ ಪಶುವು ಸ್ವರ್ಗಕ್ಕೆ ಹೋಗುವುದಾದರೆ ಆ ಪಶುವಿನ ಬದಲು ತನ್ನ ತಂದೆಯನ್ನೇ ಏಕೆ ಬಲಿ ಕೊಡುವುದಿಲ್ಲ? ಎಂದು ವ್ಯಂಗವಾಗಿ ನುಡಿದಿದ್ದಾರೆ. ಇಂತು ಪ್ರಾಣಿಗಳನ್ನು ಕೊಂದು ಸ್ವರ್ಗವನ್ನೇರಲು ಕಾತುರರಾಗಿ ಯಜ್ಞಯಾಗಾದಿಗಳನ್ನು ಮಾಡುವುದೇ ‘ಧರ್ಮ’ವೆಂದು ಭಾವಿಸಿರುವವರನ್ನು ಕಂಡೇ ಬಸವಣ್ಣನವರು ‘ದಯವಿಲ್ಲದ ಧರ್ಮವದೇವುದಯ್ಯಾ’ ಎಂದು ಕೇಳುತ್ತಾರೆ. ದಯೆ ಎಂದರೆ ಅನುಕಂಪ, ಅದು ಇಲ್ಲದ ಧರ್ಮವು ‘ಏವುದು’ ಏನನ್ನು ಮಾಡಬಲ್ಲದು? ಅಂದರೆ ಅದು ಎಂದಾದರು ಸ್ವರ್ಗವನ್ನು ನೀಡಬಲ್ಲುದೇ? ಆದ್ದರಿಂದ ಧರ್ಮವು ಯಜ್ಞ ಯಾಗಾದಿ ಕರ್ಮಗಳನ್ನು ಮಾಡುವುದರಲ್ಲಿಲ್ಲ; ಸಕಲ ಪ್ರಾಣಿಗಳನ್ನು ದಯೆಯಿಂದ ಕಾಣುವುದರಲ್ಲಿದೆ, ಅನುಕಂಪೆಯಿಂದ ಮರುಗುವುದಲ್ಲದೆ. ಈ ಕಾರಣದಿಂದಲೇ ಯಾಗಾದಿಗಳನ್ನು ಮಾಡುವುದು ಧರ್ಮವೆಂದು ಭಾವಿಸಿ ‘ವೇದೋ ಧರ್ಮ ಮೂಲಮ್’ ವೇದವೇ ಆ ಧರ್ಮದ ಮೂಲ (ಆಧಾರ) ವೆಂದು ಹೇಳಿದ ಗೌತಮ ಧರ್ಮ ಸೂತ್ರದ ಮಾತನ್ನೇ ಅಣ್ಣನವರು ಪರಿಷ್ಕರಿಸಿ ‘ದಯವೇ ಧರ್ಮದ ಮೂಲವಯ್ಯಾ’ ಎಂದು ಧರ್ಮಕ್ಕೆ ದಯೆಯುಆಧಾರಭೂತವಾಗಿರಬೇಕೆಂದು ಅತ್ಯಂತ ಮಾರ್ಮಿಕವಾಗಿ ನುಡಿದಿದ್ದಾರೆ. ಅಂತೆಯೇ ಯಜ್ಞ ಯಾಗಾದಿಗಳಲ್ಲಿ ವೈದಿಕರು ಕೊಲ್ಲುವ ಪ್ರಾಣಿಗಳನ್ನು ಕಂಡ ಹೃದಯವೂ ಅತ್ಯಂತ ಅನುಕಂಪೆಯಿಂದ ಈ ರೀತಿ ಮಿಡಿದಿದೆ. “ಮಾತಿನ ಮಾತಿಂಗೆ ನಿನ್ನ ಕೊಂದಿಹರೆಂದು ಎಲೆ ಹೋತೇ, ಆಳು, ಕಂಡಾ! ವೇದವನೋದಿದವರ ಮುಂದೆ ಅಳು, ಕಂಡಾ!! ಶಾಸ್ತ್ರವ ಕೇಳಿದವರ ಮುಂದೆ ಅಳು, ಕಂಡಾ!! ನೀನತ್ತುದಕ್ಕೆ ತಕ್ಕುದ ಮಾಡುವ ಕೂಡಲಸಂಗಮದೇವ” - ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.