Transcription of Tamil Mss in the Paris National Libray (1780 AD)Discovered and Transcribed by Dr Shivamurthy Shivacharya Mahaswamiji, Sirigere, in the year 1985
MusicCourtesy:Album Name - Vachana Dhare Vol -1 Singer : B.S.Mallikarjuna, B.R.Chaya Music : M.S. Maruthi Label : Ashwini audio
English Translation 2Why, Sir, be angry with those
Who're angry with you?
What does it mean to you,
Or what their loss?
To show one's anger means
A loss of dignity
To feel it, loss of sense!
The conflagration in your home
Unless it burns your house-
Does not burn your neighbour's house,
O Kūḍala Saṅgama Lord?
Translated by: L M A Menezes, S M Angadi
Hindi Translationतुम से क्रोध करनेवालों पर
तुम क्यों क्रोध करते हो?
तुम्हारा क्या लाभ होगा?
उनकी क्या हानि होगी?
तन के कोप से तुम्हारी प्रतिष्टा की हानि।
मन के कोप से तुम्हारी प्रज्ञा की हानि।
घर की आग घर न जलायेगी,
तो पडोस का घर जलायेगी कूडलसंगमदेव?
Translated by: Banakara K Gowdappa
Telugu Translationకినియ నేలయ్య తనపై కినియువారల;
తనకైన గుణ మేమి వారల కగు చేదేమి?
తన కోపము తన పెద్దఱికమునకు చేటు;
ఇంటి చిచ్చు ఇంటిని గాల్పక పొరుగిల్లు
కాల్పదు కూడల సంగమదేవా!
Translated by: Dr. Badala Ramaiah
Tamil Translationதன்னைக் காய்வோனைத் தாய் காய்வதேன் ஐயனே?
தனக்கான நன்மை என்ன? அவனுக்கான இழப்பென்ன?
உடலின் சினம் தன் பெருந்தகைக்குக் கேடு,
மனத்தின் சினம் தன் அறிவின் கேடு,
வீட்டிலுள்ள தீ வீட்டைச் சுடுமன்று
அயல்வீட்டைச் சுடாது கூடல சங்கம தேவனே.
Translated by: Smt. Kalyani Venkataraman, Chennai
Marathi Translationआपल्यावर रागावणारावर आपण का रागवावे ?
यात आपला काय लाभ? त्याची काय हानी?
देहराग आपल्याच मोठेपणाची हानी करतो.
मनाचा राग आपल्याच ज्ञानाची हानी करतो.
घराची आग घरालाच जाळेल विना शेजाऱ्याचे घर जाळत नाही
कूडलसंगमदेवा.
Translated by Shalini Sreeshaila Doddamani
Urdu Translationکیوںجواباً کرے کوئی غصّہ
جبکہ دونوں کو فائدہ ہی نہیں
جب بھی ہوتا ہےغصّہ کا اظہار
آدمی کا بھرم ہی کُھلتا ہے
اوردل میں اگر رہےغصّہ
آدمی کوگُھٹن سی ہوتی ہے
فہم وادراک بجھ سےجاتے ہیں
سچ تویہ ہےکہ اپنے گھرکی آگ
خود کے دیوار و درجَلاتی ہے
پھر پرائے مکاں میں جاتی ہے
سچ تویہ ہےکہ کوڈلا سنگم!
دل نہ ٹوٹے کسی کا اچّھا ہے
ہم نہ غصّہ کریں تو بہترہے
Translated by: Hameed Almas
ಕನ್ನಡ ವ್ಯಾಖ್ಯಾನಕೋಪದಿಂದ ಹಾನಿ
ಅಣ್ಣನು ಬೋಧಿಸಿದ ಸಪ್ತಶೀಲಗಳಲ್ಲಿ ಮತ್ತೊಬ್ಬರ ಮೇಲೆ ಮುನಿಸ ತಾಳಬಾರದೆಂಬುದೂ ಒಂದು. ಹೀಗೆ ‘ಮುನಿಯಬೇಡ’ಎಂಬ ನಿಷೇಧಕ್ಕೆ ಕಾರಣವಿಲ್ಲದಿಲ್ಲ, ಆ ಕಾರನವೇನೆಂಬುದನ್ನೇ ಇಲ್ಲಿ ಹೇಳಲಾಗಿದೆ. ‘ತನಗೆ ಮುನಿವರಿಗೆ ತಾ ಮುನಿಯಲೇಕಯ್ಯಾ?’ ‘ತನಗಾದ ಆಗೇನು, ಅವರಿಗಾದ ಚೇಗೇನು?’ ಅಂದರೆ ನಮ್ಮ ಮೇಲೆ ಯಾರಾದರೂ ಕೋಪಿಸಿಕೊಂಡರೆ ಅದಕ್ಕೆ ಪ್ರತಿಯಾಗಿ ನಾವು ಅವರ ಮೇಲೇಕೆ ಕೋಪಗೊಳ್ಳಬೇಕು? ಒಂದು ಪಕ್ಷ ಅವರ ಮೇಲೆ ಕೋಪಗೊಂಡರೆ ಅದರಿಂದ ನಮಗಾಗುವ ಲಾಭವಾದರೂ ಏನು? ಅಥವಾ ಅವರಿಗಾಗುವ ಕೇಡಾದರೂ ಏನು? ವಿಚಾರ ಮಾಡಿ ನೋಡಿದರೆ ಹಾಗೆ ನಾವು ಕೋಪಗೊಳ್ಳುವುದು ನಮಗೇ ಹಾನಿಕರ. ‘...... ತನುವಿನ ಕೋಪ ತನ್ನ ಹಿರಿಯತನದ ಕೇಡು. ಮನದ ಕೋಪ ತನ್ನರುವಿನ ಕೇಡು......’ ಯಾರ ಮೇಲೆ ಕೋಪವಿದೆಯೋ ಆ ವ್ಯಕ್ತಿಗೆ ನಮ್ಮ ಶರೀರದಿಂದ (ತನುವಿನಿಂದ) ಉಂಟಾಗುವ ಪ್ರತಿಕ್ರಿಯೆಯೇ ...... ಹೊಡೆಯುವುದೋ ಅಥವಾ ಇನ್ನೇನಾದರೂ ಮಾಡುವುದೋ ತನುವಿನ ಕೋಪವೆನಿಸಿಕೊಳ್ಳುತ್ತದೆ. ಇದರಿಂದ ಪೆಟ್ಟುತಿಂದ ವ್ಯಕ್ತಿಯ ದೋಷದತ್ತ ಲೋಕದ ದೃಷ್ಟಿ ಬೀಳದೆ ತಿಳಿದವರಾಗಿ (ಹಿರಿಯರಾಗಿ) ಹಾಗೆ ಹೊಡೆಯಬಹುದೇ ಎಂದು ನಮ್ಮ ಪ್ರತಿಕ್ರಿಯೆಯ ಮೇಲೆಯೇ ಲೋಕದ ಕಣ್ಣು ಬೀಳುತ್ತದೆ. ಆದ್ದರಿಂದ ನಮ್ಮ ತನುವಿನ ಕೋಪ ನಮ್ಮನ್ನೇ ಆಕ್ಷೇಪಣೆಗೆ ಗುರಿ ಮಾಡುತ್ತದೆ. ಇನ್ನು ಮನದ ಕೋಪವೆಂದರೆ ಕೋಪ ಬಂದಾಗ ತಕ್ಷಣಬೇ ಯಾವ ಪ್ರತಿಕ್ರಿಯೆಯನ್ನೂ ಮಾಡದೆ ಅದನ್ನು ಮನಸ್ಸಿನಲ್ಲಿಯೇ ಉಳಿಸಿಕೊಳ್ಳುವುದು. ಇದರಿಂದ ಯಾವ ವ್ಯಕ್ತಿಯ ಮೇಲೆ ಕೋಪವಿದೆಯೋ ಅವನಿಗೆ ‘ಯಾವ ರೀತಿಯಲ್ಲಿ ತೊಂದರೆ ಕೊಡಲಿ, ಯಾವ ಬಗೆಯಲ್ಲಿ ಅವನು ಹಾಳಾಗುವಂತೆ ಮಾಡಲಿ’ ಇತ್ಯಾದಿ ಕೆಟ್ಟ ಕೆಟ್ಟ ಯೋಚನೆಗಳೇ ನಮ್ಮ ಮನಸ್ಸಲ್ಲಿ ಇಣುಕುತ್ತಾ ಒಳ್ಳೆಯ ವಿಚಾರಗಳೇ ಬಾರದಂತಾಗುತ್ತವೆ. ಹೀಗೆ ಮನದ ಕೋಪದಿಂದ ನಮ್ಮ ಅರುವಿಗೆ ಅಂದರೆ ಜ್ಞಾನಕ್ಕೆ ಕೇಡುಂಟಾಗುತ್ತದೆ. ‘......ಮನೆಯೊಳಗಣ ಕಿಚ್ಚು ಮನೆ ಸುಟ್ಟಲ್ಲದೆ ನೆರಮನೆಯ ಸುಡುವುದೇ ಕೂಡಲಸಂಗಮದೇವಾ?’ ನಮ್ಮ ಮನೆಯಲ್ಲಿರುವ ಬೆಂಕಿಯು ನಮ್ಮ ಮನೆಯನ್ನು ಮೊದಲು ಸುಟ್ಟೇ ನೆರೆಮನೆಯನ್ನು ಸುಡುವುದು. ಹಾಗೆಯೇ ನಮ್ಮ ಕೋಪದಿಂದ ಇತರೆಯವರಿಗೇನಾದರೂ ಕೇಡು ಉಂಟಾಗುವುದೇ. ಆದರೆ ಮೇಲೆ ಹೇಳಿರುವಂತೆ ಮೊದಲು ನಮಗೆ ಕೇಡು ಉಂಟಾಗುವುದು. ಹೀಗೆ ನಮ್ಮ ಕೋಪ ನಮಗೇ ಅಪಾಯಕಾರಿ. ಈ ಬಗ್ಗೆ ಸರ್ವಜ್ಞನ ನುಡಿಯೂ ಈ ರೀತಿ ಇದೆ. ‘ಕೋಪವೆಂಬುದು ಕೇಳು ಪಾಪದ ನೆಲೆಗಟ್ಟು! ಕೂಪದೊಳು ನೇಣು ಹರಿದಂತೆ ನರಕದೊಳು! ಕೋಪಿ ತಾನಳಿವ ಸರ್ವಜ್ಞ!!’
- ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.
ವಚನಕಾರ ಮಾಹಿತಿ
ಬಸವಣ್ಣ
ಅಂಕಿತನಾಮ:
ಕೂಡಲಸಂಗಮದೇವ
ವಚನಗಳು:
1409
ಕಾಲ:
12ನೆಯ ಶತಮಾನ
ಕಾಯಕ:
ಪ್ರಧಾನಮಂತ್ರಿ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಇಂಗಳೇಶ್ವರ-ಬಾಗೇವಾಡಿ, ವಿಜಯಪುರ ಜಿಲ್ಲೆ.
ಕಾರ್ಯಕ್ಷೇತ್ರ:
ಕೂಡಲಸಂಗಮ-ಮಂಗಳವೇಢೆ-ಕಲ್ಯಾಣ
ತಂದೆ:
ಮಾದರಸ
ತಾಯಿ:
ಮಾದಲಾಂಬಿಕೆ
ಸತಿ/ಪತಿ:
ಗಂಗಾಂಬಿಕೆ ಮತ್ತು ನೀಲಾಂಬಿಕೆ
ಐಕ್ಯ ಸ್ಥಳ:
ಕೂಡಲಸಂಗಮ, ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಪೂರ್ವಾಶ್ರಮ:
ಆಗಮಿಕ ಶೈವಬ್ರಾಹ್ಮಣ
ಸಂಕ್ಷಿಪ್ತ ಪರಿಚಯ:
ಬಸವಣ್ಣ ಭಾರತದ 12 ನೇ ಶತಮಾನದ ಧಾರ್ಮಿಕ ಕ್ರಾಂತಿ ಪುರುಷ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.