ಭಕ್ತನ ಜ್ಞಾನಿಸ್ಥಲ - ಭವಿ-ಭಕ್ತ
ಅರ್ಥಕ್ಕೆ ತಪ್ಪಿದರೇನು? ಪ್ರಾಣಕ್ಕೆ ತಪ್ಪಿದರೇನು?
ಅಭಿಮಾನಕ್ಕೆ ತಪ್ಪಿದರೇನು?
ಶರಣರು ಶರಣರಲ್ಲಿ ಗುಣವನರಸುವರೆ?
ಕೂಡಲಸಂಗನ ಶರಣರು ನೊಂದು ಸೈರಿಸಬೇಕು.
Transliteration Arthakke tappidarēnu? Prāṇakke tappidarēnu?
Abhimānakke tappidarēnu?
Śaraṇaru śaraṇaralli guṇavanarasuvare?
Kūḍalasaṅgana śaraṇaru nondu sairisabēku.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 What if one fail
In pecuniary affairs?
What if in matters that concern
Your honour or your life?
Do Śaraṇās look
For virtues in a Śaraṇā ?
The Śaraṇās
Of Kūḍala Saṅgama must,
If hurt, endure in peace.
Translated by: L M A Menezes, S M Angadi
Hindi Translation अर्थ से चूकने पर क्या?
प्राणों से चूकने पर क्या?
अभिमान से चूकने पर क्या?
शरण शरणों में गुण खोजेंगे?
कूडलसंग के शरणों को
दुःख सह लेना चाहिए ॥
Translated by: Banakara K Gowdappa
Telugu Translation అర్ధము తప్పిన నేమి? ప్రాణము తప్పిన నేమి?
అభిమానము తప్పిన నేమి,
శరణులు శరణులందు తప్పు చూతురే?
సంగని శరణులు వ్యధతో సై రింపవలె;
Translated by: Dr. Badala Ramaiah
Tamil Translation செல்வத்திலே பிறழ்ந்தாலென்? உயிரிலே பிறழ்ந்தாலென்?
தொண்டிலே பிறழ்ந்தாலென்?
பக்தர் பக்தரிடத்து நல்லியல்பைத் தேடுவதே?
கூடல சங்கனினடியார் நொந்து பொறுக்க வேணும்.
Translated by: Smt. Kalyani Venkataraman, Chennai
Marathi Translation
तन-मन-धन सेवा करण्यात चूक झाली तर काय.
अभिमानामध्ये चूक झाली तर काय ?
शरण शरणाचे दोष पाहिल काय ?
कूडलसंगमदेवाच्या शरणांनी सहनशील रहावे.
Translated by Shalini Sreeshaila Doddamani
ಶಬ್ದಾರ್ಥಗಳು ಅಭಿಮಾನ = ಸ್ವಾಭಿಮಾನ; ಅರ್ಥ = ಹಣ; ಸೈರಿಸು = ಸಹಿಸು;
ಕನ್ನಡ ವ್ಯಾಖ್ಯಾನ ಶರಣರಲ್ಲಿ ಯಾರಾದರೊಬ್ಬರು ಇನ್ನೊಬ್ಬರ ಧನಹಾನಿಗೆ ಪ್ರಾಣಹಾನಿಗೆ ಮಾನಹಾನಿಗೆ ಪ್ರಯತ್ನಿಸಿದ್ದಾದರೆ-ಅವರ ಮೇಲೆ ದೋಷಾರೋಪಣೆ ಮಾಡಬಾರದು, ಜಿದ್ದಿನಿಂದ ಪ್ರತೀಕಾರಕ್ಕೆ ಮುನ್ನುಗ್ಗಬಾರದು. ನೊಂದ ಶರಣನು ನೋವನ್ನು ಸೈರಿಸಬೇಕು. ತಪ್ಪು ಮಾಡಿದ ಶರಣನು ತನ್ನ ತಪ್ಪನ್ನು ಅರಿತು ತಿದ್ದಿಕೊಳ್ಳುವಂತಾಗಬೇಕು.
ಶಿವಧರ್ಮಸಮಾಜದಲ್ಲಿ ಭಕ್ತ-ಶರಣ-ಜಂಗಮ ಎಂಬ ಶ್ರೇಣಿಗಳಿವೆ. ಜಂಗಮ ಅತ್ಯಂತ ಪೂಜ್ಯನಾದರೆ ಅವನಿಗೆ ದ್ವಿತೀಯ ಸ್ಥಾನದಲ್ಲಿರುವನು ಶರಣ. ಜಂಗಮನು ಸಂನ್ಯಾಸಿಯಾದರೆ- ಶರಣನು ಉನ್ನತ ಆಧ್ಯಾತ್ಮಿಕತೆಯ ಸಂಸಾರಿಯಾಗಿರುವನು. ಇಂಥವನು ತಪ್ಪಿದಾಗ ಆತನನ್ನು ಅಹಿಂಸೆಯಿಂದ ತಿದ್ದುವುದು ಒಳ್ಳೆಯದೆಂದು ಬಸವಣ್ಣನವರು ಅಭಿಪ್ರಾಯಪಟ್ಟಿರುವಂತಿದೆ. (ವಿಧಿನಿಷೇಧಗಳ ಬಲವಾದ ಹೇರಿಕೆಯಿಂದ ಸಮಾಜದಲ್ಲಿ ಅಲ್ಲೋಲಕಲ್ಲೋಲವಾದರೆ-ಧರ್ಮತನ್ನ ಉದ್ದೇಶವನ್ನು ಕಳೆದುಕೊಳ್ಳುತ್ತದೆ).
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು