•  
  •  
  •  
  •  
Index   ವಚನ - 253    Search  
 
ಭಕ್ತನ ಭಕ್ತಸ್ಥಲ - ಅಹಂಕಾರ
ಅವರಿವರೆನ್ನದೆ ಚರಣಕ್ಕೆರಗಲು ಅಯ್ಯತನವೇರಿ, ಬೆಬ್ಬನೆ ಬೆರಿವೆ ನಾನು: ಕೆಚ್ಚು ಬೆಳೆಯಿತ್ತಯ್ಯಾ! ಆ ಕೆಚ್ಚಿಂಗೆ ಕಿಚ್ಚನಿಕ್ಕಿ ಸುಟ್ಟು ಬೆಳ್ಳುಕನ ಮಾಡಿ ಬೆಳುಗಾರದಂತೆ ಮಾಡು, ಕೂಡಲಸಂಗಮದೇವಾ.
Transliteration Avarivarennade caraṇakkeragalu ayyatanavēri, bebbane berive nānu: Keccu beḷeyittayyā! Ā kecciṅge kiccanikki suṭṭu beḷḷukana māḍi beḷugāradante māḍu, kūḍalasaṅgamadēvā.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 When men of every sort Are prostrate at my feet, I swell as if a Lord; I flush, am puffed with pride; Lo Sir, my fat conceit! Set it on fire, O Lord Kūḍala Saṅgama, And burn it borax-white! Translated by: L M A Menezes, S M Angadi
Hindi Translation सब प्रकार के व्यक्ति जब चरणों पर झुकते हैं तब स्वामित्व पर आरुढ होकर उन्मत्त होता हूँ मेरा अहंकार बढ जाता है! उस अहंकार को जलाकर मुझे स्फटिक सा उज्ज्वल बना दो कूडलसंगमदेव ॥ Translated by: Banakara K Gowdappa
Telugu Translation వారువీరనక యెల్లరూ కాళ్ళకుపడి మ్రొక్క పెద్దఱికము వచ్చి నివ్వెఱ వెఱగై తినయ్యా; ఆ చిచ్చుకు చిచ్చు పెట్టి కాల్చి ఆరని వెలుగు సేయుమో కూడల సంగమదేవా! Translated by: Dr. Badala Ramaiah
Tamil Translation அவரிவரென்னாது தாள் பணிந்துழி அய்யத்தனமேறி இறுமாந்து, செருக்கு மிகுந்த தையனே, அச்செருக்கிற்குத் தீயிட்டுச் சுட்டு வெண்மை செய்து தூய்மையுறச் செய்வாய் கூடல சங்கம தேவனே. Translated by: Smt. Kalyani Venkataraman, Chennai
Marathi Translation सारे पाया पडू लागता अहं चढेल पाहाता पाहाता ! अहंकाराने मदोन्मत होता ताव चढेल पाहाता पहाता ! कूडलसंगमदेवा ! मजला करा टाकणखार पाहता पाहता ! अहंकाराला लावूनी आग उजळा मज, पाहाता पाहाता ! अर्थ - श्रेष्ठ समजून सर्वच लोक पाया पडू लागले तर खरोखरच माझ्या पेक्षा श्रेष्ठ या जगात कोणी नसावा असा भाव मनात निर्माण होईल. आणि पाहाता अहंभाव रक्तात मिळला जाईल. अहंकाराने मनुष्य मदोन्मत होतो तेव्हा त्याच्यात त्याचा अधिक ताप चढू लागतो. वृत्ती तामस बनते म्हणून हे प्रभो! माझ्यातील अहंकाराला जाळून टाकण्यासाठी माझ्या शरीराला तावून सुलाखून स्थावर टाकणखार रुपी भक्ती भावाचा त्या शरीरावर मारा करावा. म्हणजे शरीर जेव्हा तापून लाल होईल तेव्हा शरीराचा परिष्कार होईल व त्यावर पडलेला माझ्यातला मी टाकणखाराने अंतरबाह्य उजळून टाकेल. अशा तऱ्हेने माझ्यातला अहंभाव आणि तापून चढलेला तामसपणा वाया न जाता मला अंतरबाह्य चकचकीत करण्यासाठी म्हणजे परिशुद्ध करण्यासाठी उपयोगी पडेल. अशी महात्मा बसवेश्वर वरील वचनात परमेश्वर चरणी प्रार्थना करीत आहेत. Translated by Rajendra Jirobe, Published by V B Patil, Hirabaug, Chembur, Mumbai, 1983 सर्व चरणस्पर्श करु लागता मद चढतो. अहंकाराने मी मदोन्मत होतो. त्या अहंकाराला जाळून राख कर. एकदाही अहंकार माझ्याजवळ येऊ नये असे करा कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಎರಗು = ನಮಸ್ಕರಿಸು; ಕಿಚ್ಚು = ಬೆಂಕಿ; ಕೆಚ್ಚು = ಧೈರ್ಯ; ಚರಣ = ಪಾದ; ಬಿರಿ = ಬಿಚ್ಚು ಅರಳು; ಬೆಬ್ಬು = ; ಬೆಳುಗಾರ = ಬಳೆಗಾರ ಟಂಕಣ; ಬೆಳ್ಳುಕ = ಬೆಳ್ಳಗಿರುವುದು;
ಕನ್ನಡ ವ್ಯಾಖ್ಯಾನ ಭಕ್ತರು-ವಯಸ್ಸಿನಲ್ಲಿ ಚಿಕ್ಕವರೇ ಅಲ್ಲ ದೊಡ್ಡವರೂ-ಅದೂ ಶರಣರ ನಡುವೆ-ಬಸವಣ್ಣನವರಿಗೆ ನಮಸ್ಕಾರ ಮಾಡಲೆಂದು ಬಾಗಿದರೆಂದರೆ-ಅವರಿಗೆ ಕ್ಷಣಾರ್ಧ ಹೆಮ್ಮೆಯೆನಿಸಿ ತತ್ ಕ್ಷಣವೇ ತಮ್ಮಲ್ಲಿ ಸಂಚರಿಸಿದ ಆ ಅಹಂಕಾರಕ್ಕಾಗಿ ಬಹಳ ಪರಿತಪಿಸುತ್ತಿದ್ದರು-ದೇವರಲ್ಲಿ ಮೊರೆಯಿಡುತ್ತಿದ್ದರು : ನನ್ನ ಎದೆಯಲ್ಲಿ ಅಹಂಕಾರ ಕೆಚ್ಚುಕಟ್ಟುತ್ತಿದೆ-ಅದಕ್ಕೆ ಬೆಂಕಿ ಹಚ್ಚಿ,ಸುಟ್ಟು ಬೆಳುಗಾರದಂತೆ ಬೆಳ್ಳಗೆ ಬೂದಿ ಮಾಡು ಎಂದು ಶಿವನನ್ನು ಪ್ರಾರ್ಥಿಸುತ್ತಿದ್ದರು. ಮರದಲ್ಲಿ ಕೆಚ್ಚು ಬೆಳೆದರೆ ಅದು ಯಾವ ಮರಗೆಲಸಕ್ಕೂ ಬಾರದಾಗುವುದೆಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಬಸವಣ್ಣನವರಿಗೆ ಪ್ರಿಯವಾದ್ದು-ಕೆಚ್ಚು ಬೆಳೆದು ಹೆಮ್ಮರವಾಗಿ ಸೆಟೆದು ನಿಲ್ಲುವುದಲ್ಲ-ಗೊನೆ ಬಿಟ್ಟು ನಸುಬಾಗಿದ ಮತ್ತು ಪೊರೆಯೆತ್ತಿ ನೋಡಿದರೆ ಒಳಗೆ ಕೆಚ್ಚಿಲ್ಲದ ಬಾಳೆಯಂತಿರುವುದು. (ನೋಡಿ ವಚನ 190 ಮತ್ತು 523).

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು