ಕುದುರನೇಸು ತೊಳೆದರೆಯೂ ಕೆಸರು ಮಾಣ್ಬುದೆ?
ಎನ್ನ ಕಾಯದೊಳುಳ್ಳ ಅವಗುಣಂಗಳ ಕಳೆದು ಕೃಪೆಯ ಮಾಡಯ್ಯಾ.
ಕಂಬಳಿಯಲ್ಲಿ ಕಣಕವ ನಾದಿದಂತೆ, ಕಾಣರೇ ಎನ್ನ ಮನ!
ಕೂಡಲಸಂಗಮದೇವಾ, ನಿಮಗೆ ಶರಣೆಂದು ಶುದ್ಧ, ಕಾಣಯ್ಯಾ.
Transliteration Kuduranēsu toḷedareyū kesaru māṇbude?
Enna kāyadoḷuḷḷa avaguṇaṅgaḷa kaḷedu kr̥peyamāḍayyā.
Kambaḷiyalli kaṇakava nādidante, kāṇarē enna mana!
Kūḍalasaṅgamadēvā, nimage śaraṇendu śud'dha, kāṇayyā.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Does the mud go if you wash a wall
Over and over again?
Pray, Lord, remove the taints
Inhabiting my flesh.
My- heart-can you not see?-
Is like the dough
That's kneaded in a rug!
Only by making obeisance to you,
Kūḍala Saṅgama Lord,
Can I be pure !
Translated by: L M A Menezes, S M Angadi
Hindi Translation मिट्टी की दीवार को कितना धोने पर भी
कीचड दूर होगी?
स्वामी, मेरे शारीरिक अवगुणों को दूर कर कृपा करो ।
कंबल में आटा सानने के समान है मेरा मन,
कूडलसंगमदेव तव शरण लेने पर वह शुद्ध होगा ॥
Translated by: Banakara K Gowdappa
Telugu Translation మట్టిగోడనెంత కడిగినా పోవునే బురద;
మేని కల్మషము కడిగి దయ చూడుమయ్యా!
కంబడిలో పిండి నాది నట్ల్తెపోయె నా మనసు;
సంగమదేవా నీకు శరణంచు శుచినౌదునయ్యా!
Translated by: Dr. Badala Ramaiah
Tamil Translation மண்சுவற்றி னழுக்கைத் தேய்ப்பின் அழுக்ககலுமோ?
என்னுடலின் தீயியல்பினைக் களைந்தருள்வா யையனே,
ஆடையிலே ஈரமாவினைத்
தேய்த்தல் போல் காணீரென்மனம்,
கூடல சங்கம தேவனே.
Translated by: Smt. Kalyani Venkataraman, Chennai
Marathi Translation
मातीच्या भिंतीला कितीही धुतले
चिखलाने माखले सारे अंग
तैसा माझे मन, अवगुण फार
करावे ते दूर, कृपावंता
कणिक जैसे तिंबीता, घोंगड्यावर
केसाने भरणार, सारी कणिक
तसे माझे मन, अशुद्ध वरचेवर
शरणापरी कर, करूणाकरा
कूडलसंगमदेवा ! आलो मी शरण
शुद्ध करा धुवून, माझं मन
अर्थ:- मातीच्या भिंतीला जस जसे धुतले गेले तस तसा चिखल वाढत जातो. कारण त्या भिंतीत आतून-बाहेरून माती असते. त्याच प्रमाणे षडरिपू सारख्या विकारांना ओतप्रोत भरलेल्या मनाला व्यापून राहिले आहे. ते जस जसे दूर करण्याचा प्रयत्न करू तसे वरचेवर वाढत जातात अति प्रयत्नाने त्यातील काही विकार दूर झाले तरी अस्तित्व कायम राहते, ते मुळासकट कधीही दूर होणार नाहीत. जसे कणिक घोंगड्यावर तिंबली तर ती घोंगड्यातील प्रत्येक छीद्रात रूतून बसते आणि सारी कणिक केसाने भरुन जाते. म्हणून हे प्रभो ! माझे मन धुवून पुसून तुझ्या शरणाप्रमाणे शुद्ध व निर्मळ करावे. अशी महात्मा बसवेश्वर परमेश्वर चरणी मागणी करीत आहेत.
Translated by Rajendra Jirobe, Published by V B Patil, Hirabaug, Chembur, Mumbai, 1983
मातीची भिंत पुन्हा पुन्हा धुतल्याने स्वच्छ होईल?
माझ्या कायेतील अवगुण दूर करण्याची कृपा करा.
घोंगड्यावर पीठ मळल्याप्रमाणे माझे मन आहे.
कूडलसंगमदेवाला शरण गेल्याने मी शुध्द होईन,
Translated by Shalini Sreeshaila Doddamani
ಶಬ್ದಾರ್ಥಗಳು ಅವಗುಣ = ಕೆಟ್ಟಗುಣ; ಕಣಕ = ; ಕಾಯ = ಶರೀರ; ಕೃಪೆ = ದಯೆ; ಮಾಣ್ಬು = ;
ಕನ್ನಡ ವ್ಯಾಖ್ಯಾನ ಮಣ್ಣಿನ ಗೋಡೆಗೆ ನೀರು ಸೋಕಿದರೂ ಕೆಸರೇಳುವುದೆಂದಮೇಲೆ-ಅದನ್ನು ಉಜ್ಜಿ ತೊಳೆದು ಶುಚಿ ಮಾಡಲಾದೀತೇ ? ಈ ದೇಹವಾದರೂ ಅವಗುಣದ ಮಣ್ಣಿನಿಂದಲೇ ಅದುದಲ್ಲಾ ! ಇಂಥ ದೇಹದಲ್ಲಿರುವ ನನ್ನ ಮನಸ್ಸಿನ ಸ್ಥಿತಿಯೂ ಕೈಗೆ ಹತ್ತುತ್ತಿಲ್ಲ. ಕಂಬಳಿಯ ಮೇಲೆ ಕಣಿಕವನ್ನು ನಾದಿದಂತೆ-ಅದು ಮೃದುವೂ ಆಗದೆ ಬನಿಯೂ ಆಗದೆ, ಬಟುವೂ ಆಗದೆ ಹಾಳೆಯೂ ಆಗದೆ-ಯಾವ ಹೂರಣವನ್ನೂ ಒಳಗೊಳ್ಳಲಾಗದೆ ಪಕ್ವವಾಗದೆ ಆ ಕಂಬಳಿಗೇ ಮೆತ್ತಿಕೊಂಡಿರುವಂತೆ-ಅವಗುಣದ ದೇಹಕ್ಕೇ ಈ ನನ್ನ ಮನಸ್ಸು ಮೆತ್ತಿಕೊಂಡಿದೆ, ದೇವರೇ ನನ್ನ ಮೇಲೆ ಕೃಪೆಯಿಟ್ಟು-ನನ್ನೀ ದೇಹದ ಕೆಸರುತನವನ್ನು ಕಳೆದು ಅದನ್ನು ಗಚ್ಚುಗೊಳಿಸು, ನಯಗೊಳಿಸು. ನಾನು ನಿನಗೆ ಶರಣಾಗತನಾಗಿದ್ದೇನೆ-ನನ್ನ ಮನಸ್ಸಿಗೊಂದು ಬನಿಯನ್ನು ತಂದುಕೊಟ್ಟು ಪಕ್ವಗೊಳಿಸು.
ಮನಸ್ಸು ಹದವಾಗುವುದು-ಘಟ್ಟಿಭದ್ರವಾದ ದೇಹವನ್ನು ಅವಲಂಬಿಸಿದೆಯೆಂಬುದು ಬಸವಣ್ಣನವರಿಗೆ ತಿಳಿದಿತ್ತು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು