•  
  •  
  •  
  •  
Index   ವಚನ - 261    Search  
 
ಭಕ್ತನ ಭಕ್ತಸ್ಥಲ - ಅವಗುಣ
ಕಾಮಧೇನು ನಿಮ್ಮ ಸಾರಿರಲು ಪರರ ಬೇಡಲಾರೆನಯ್ಯಾ. ನಿಮ್ಮುವ ಪೂಜಿಸಿ ಭವಬಂಧನ ಬಿಡದೇಕಯ್ಯಾ? ಹಿಂದಣ ಜನ್ಮದ ಚಿಹ್ನೆ ಬಿಡದನ್ನಕ್ಕ ನಿಮ್ಮುವ ಪೂಜಿಸಿ ಏವೆನಯ್ಯಾ? ಎನ್ನ ಮನದ ಅವಗುಣವ ಕಳೆದು ನಿಮ್ಮ ಶರಣರಿಗೆ ಶರಣೆಂಬುದ ಕರುಣಿಸು, ಕೂಡಸಂಗಮದೇವಾ.
Transliteration Kāmadhēnu nim'ma sāriralu parara bēḍalārenayyā. Nim'muva pūjisi bhavabandhana biḍadēkayyā? Hindaṇa janmada cihne biḍadannakka nim'muva pūjisi ēvenayyā? Enna manada avaguṇava kaḷedu nim'ma śaraṇarige śaraṇembuda karuṇisu, kūḍasaṅgamadēvā.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 I cannot beg of others, when The Cow Celestial is with you... When I have worshipped you, Why shouldn't it break-this bond of birth? What use to worship you, unless The signs of bygone births have ceased? Root out the vices of my heart, And let me, from your grace, Say Hail O hail! To your Śaraṇās O Lord Kūḍala Saṅgama ! Translated by: L M A Menezes, S M Angadi
Hindi Translation कामधेनु के पास रहते मैं औरों से माँग नहीं सकता । तव पूजा से भव-बंधन क्यों नहीं छूटता? पूर्व जन्मों के चिह्न तक तव पूजा कर क्या करूँगा? कूडलसंगमदेव, ऐसी कृपा करो जिससे मेरे मन के अवगुण दूर हों और तव शरणों को ‘शरणु’ कह सकूँ ॥ Translated by: Banakara K Gowdappa
Telugu Translation కామధేనువు చెంతనుండ పరుల గింజ నేలయ్యా భక్తిని పూజింపని భవబంధమేటికో విడదయ్యా తొలిజన్మపు మచ్చ తొలగనందాక నినుగొల్చి ఫలమేమి? నా మనః కల్మషము తొలగించి నీ శరణులకు శరణనుట కరుణింపుమో సంగమ దేవా! Translated by: Dr. Badala Ramaiah
Tamil Translation காமதேனு உமைச்சார்தர, பிறரை வேண்டேனையனே, உம்மைத் தொழுது, பிறவிக்கட்டு நீங்காததேனையனே? முற்பிறவிச் சின்னம் நீங்காதிருக்க உம்மைத் தொழுதென் செய்வேனையனே? என் மனத்தின் தீயியல்பையகற்றி, உன் அடியார்க்குத் தஞ்சமென்பற்கு அருளாய் கூடல சங்கம தேவனே. Translated by: Smt. Kalyani Venkataraman, Chennai
Marathi Translation तूच कामधेनू असता माझ्यापुढे कासया दुजाकडे, मागू काय ? तुझिया पूजन, तुझे नामस्मरण करीत राहीन, सदा काळ प्रभो एक शंका, सांगतो मनाची पूर्व संचिताचे, काय करू? केली जरी पूजा, संचित पापाचे क्षालन तयाचे, होई कैसे ? तुझिया शरणांचे होताचि शरण तुटताती बंधन, सर्व काही कूडलसंगमदेवा! तोडी भवबंधन शरणांचे शरण, झालियाने अर्थ - हे प्रभो! तूच कामधेनू आहेस असे अनेक काळापासून लोक मानीत आले आहेत. म्हणून का मी तुझीच पूजा, ध्यान व नामस्मरण करीत राहू का? पण या बाबतीत माझ्या मनात एक शंका निर्माण होऊ पाहत आहे की जोपर्यंत पूर्व जन्माचे पाप किंवा पूर्वसंचित धुवून पुसून जाणार नाही तोपर्यंत तुझी पूजा करुन देखील भव बंधनातून माझी सुटका कशी होईल ? आणि खऱ्या अर्थाने मी तुला पूजण्यास पात्र कसा होईन? म्हणून माझ्या मनातील शंका दूर करण्यासाठी व तुला पूजण्याला पात्र ठरण्यासाठी शरणांचे शरण होईन. शिवशरणाचा सेवक होताच माझी भवबंधनातून सुटका होईल व पूर्व संचित धुतले जातील, याची मला खात्री वाटते आहे. Translated by Rajendra Jirobe, Published by V B Patil, Hirabaug, Chembur, Mumbai, 1983 कामधेनू तुम्ही असताना दुसऱ्यांना मागणार नाही देवा. तुमची पूजा, साधना करुन भवबंधन तुटले पाहिजे. पूर्वजन्मीचे पाप मिटेपर्यंत तुमची पूजा कशी होणार? माझ्या मनीचे अवगुण दूर करावे. तव शरणांना शरण म्हणावे अशी कृपा करावी कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಅವಗುಣ = ಕೆಟ್ಟಗುಣ; ಕಾಮಧೇನು = ಹಸು; ಚಿಹ್ನೆ = ಗುರುತು; ಭವಬಂಧನ = ಲೌಕಿಕ ಜೀವನ;
ಕನ್ನಡ ವ್ಯಾಖ್ಯಾನ ಎಲೆ ಶಿವನೆ, ನಾನು ಕೇಳಿದ್ದನ್ನೆಲ್ಲ ಕೊಡುವ ಶಕ್ತಿ ನಿನಗಿರುವಾಗ-ನಾನೇಕೆ ಇನ್ನೊಬ್ಬರನ್ನು ಒಲಿಸಿ ಬೇಡಲಿ? ನಿನ್ನನ್ನೇ ಪ್ರಶ್ನಿಸುತ್ತಿದ್ದೇನೆ-ನಿನ್ನನ್ನು ಪೂಜಿಸಿಯೂ ನನಗೇಕೆ ಭವಬಂಧನ ಬಿಡದಾಗಿದೆ ಹೇಳು ನೋಡೋಣ-ಎನ್ನುತ್ತ ಬಸವಣ್ಣನವರು ತಮ್ಮ ಆ ಪ್ರಶ್ನೆಗೆ ತಾವೇ ಉತ್ತರವನ್ನೂ ಕೊಡುತ್ತಿರುವರು : ಈ ಭವಬಂಧನ ನನಗಾಗಿರುವುದಕ್ಕೆ ಕಾರಣ-ನನ್ನ ಪೂರ್ವಜನ್ಮದ-ಅಂದರೆ ನಾನು ಬ್ರಾಹ್ಮಣನಾಗಿದ್ದಾಗಿನ ಯಜ್ಞೋಪವೀತ ಚಿಹ್ನವನ್ನು ನಾನಿನ್ನೂ ತ್ಯಜಿಸಲಾಗಿಲ್ಲ, ಮತ್ತು ಆ ಯಜ್ಞೋಪವೀತವನ್ನು ಧರಿಸಿಯೇ ನಿನ್ನನ್ನು(ಶಿವನನ್ನು) ಪೂಜಿಸುವಂತಾಗಿದೆ, ನಾನೇನು ಮಾಡಲಿ ಎಂದು ತಮ್ಮನ್ನು ತಾವೇ ಹಳಿದು ಕೊಳ್ಳುತ್ತಲೂ ಇರುವರು. ಹೀಗೆ ಬಸವಣ್ಣನವರು ಶಿವಧರ್ಮಪಂಥಕ್ಕೆ ಸೇರಿ ಶಿವೋಪಾಸನೆಗೆ ತೊಡಗಿದ ಮೇಲೂ-ಬ್ರಾಹ್ಮಣಾವರಣದ ತಮ್ಮ ತಂದೆಯ ಮನೆಯಲ್ಲಿ ಆ ಬ್ರಾಹ್ಮಣ್ಯದ ಕುರುಹಾದ ಯಜ್ಞೋಪವೀತ ಸಹಿತವಾಗಿಯೇ ಸ್ವಲ್ಪಕಾಲ ಇದ್ದ ಇಕ್ಕಟ್ಟಿನ ಸಂದರ್ಭವನ್ನು ಕುರಿತಂತಿದೆ ಈ ವಚನ. ಹರಿಹರನ ಪ್ರಕಾರ ಬಸವಣ್ಣನವರು ತಮ್ಮ ಹದಿನಾರನೇ ವಯಸ್ಸಿನಲ್ಲಿ ಯಜ್ಞೋಪವೀತವನ್ನು ಹರಿದು ಬಿಸುಟು ಬಾಗೇವಾಡಿಯನ್ನು ಬಿಟ್ಟು ಕೂಡಲಸಂಗಮಕ್ಕೆ ಹೋದರೆಂಬುದು ಪ್ರಸಿದ್ಧವೇ ಇದೆ. ಮತ್ತು ಉಪನಯನವಾದಾಗಲೇ ಜನಿವಾರವನ್ನು ಕಿತ್ತೊಗೆಯಲು ಬಸವಣ್ಣನವರು ಪ್ರಯತ್ನಿಸಿದರೆಂದೂ-ಅವರನ್ನು ಹಿರಿಯರು ತಡೆದರೆಂದೂ-ಆಗ ಬಸವಣ್ಣನವರು ದಾಕ್ಷಿಣ್ಯಕ್ಕೆ ಸಿಕ್ಕಿ ಆ ಜನಿವಾರವನ್ನು ಹರಿದೆಸೆಯದೆ ಸ್ವಲ್ಪಕಾಲ ತಟಸ್ಥರಾಗಿದ್ದರೆಂದೂ ಸಿಂಗಿರಾಜನ ಬಸವ ಪುರಾಣದಲ್ಲಿ ಹೇಳಿರುವುದನ್ನೂ ಇಲ್ಲಿ ನೆನೆಯಬಹುದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು