ಭಕ್ತನ ಭಕ್ತಸ್ಥಲ - ದುರ್ವ್ಯಸನ
ಧೃತಿಗೆಟ್ಟು ಅನ್ಯರ ಬೇಡದಂತೆ,
ಮತಿಗೆಟ್ಟು ಪರರ ಹೊಗಳದಂತೆ,
ಪರಸತಿಯರ ರತಿಗೆ ಮನ ಹಾರದಂತೆ,
ಶಿವಪಥವೊಲ್ಲದವರೊಡನಾಡದಂತೆ,
ಅನ್ಯಜಾತಿಯ ಸಂಗವ ಮಾಡದಂತೆ,
ಎನ್ನ ಪ್ರತಿಪಾದಿಸು, ಕೂಡಲಸಂಗಮದೇವಾ.
Transliteration Dhr̥tigeṭṭu an'yara bēḍadante,
matigeṭṭu parara hogaḷadante,
parasatiyara ratige mana hāradante,
śivapathavolladavaroḍanāḍadante,
an'yajātiya saṅgava māḍadante,
enna pratipādisu, kūḍalasaṅgamadēvā.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Teach me, Kūḍala Saṅgama Lord,
That I should never beg
Of others with faint heart;
That I should never praise
Others too foolishly;
That I shouldn't covet in my heart
Another's wife to lust;
That I should never mix
With such as turn their backs
Upon the Śiva path;
That I should never seek
The friendship of such men
As boast another caste.
Translated by: L M A Menezes, S M Angadi
Hindi Translation मेरी रक्षा करो कूडलसंगमदेव,
जिससे धृतिहीन होकर औरों से नहीं माँगू,
मतिहीन होकर पर स्तुति न करुँ,
मन को परस्त्रियों पर अनुरक्त न होने दूँ
शिवपथ के अनिच्छुक के संग न रहूँ,
भिन्न संप्रदयियों का संग न करुँ ॥
Translated by: Banakara K Gowdappa
Telugu Translation ధృతి చెడి పరుల పొగడనట్లు;
మతి చెడి పరుల పొగడనట్లు;
పరసతీ రతికి మది పారనటు
శివ పథ మొల్లని వారితో బల్కనట్లు;
పరజాతి సంసర్గమందనట్లు;
నను శాసింపుమో కూడల సంగమదేవా!
Translated by: Dr. Badala Ramaiah
Tamil Translation உறுதியற்றுப் பிறரைக் கேளாது,
அறிவிழந்து பிறரைப் புகழாது,
பிறபெண்களின் உறவினை மனம் நாடாது,
சிவபதமறியாரொடு சொல்லாடாது
வேற்றினத்திலே உறவு கொள்ளாது,
எனைப் பேணுவாய் கூடல சங்கம தேவனே.
Translated by: Smt. Kalyani Venkataraman, Chennai
Marathi Translation
धैर्य सोडून दुसऱ्यांना मागू नये असे,
मतीभ्रष्ट होऊन दुसऱ्यांची स्तुती करु नये असे,
परसतीची इच्छा करु नये असे,
शिवपथभ्रष्टांच्या संगात राहू नये असे,
अन्यपथावर चालू नये असे,
माझी रक्षा करावी कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಧೃತಿ = ಧೈರ್ಯ; ಪಥ = ದಾರಿ; ಪಾಲಿಸು = ಆಚರಿಸು; ಮತಿ = ಬುದ್ದಿ; ರತಿ = ಶೃಂಗಾರದ ಅಧಿ ದೇವತೆ; ಸಂಗ = ಸ್ನೇಹ;
ಕನ್ನಡ ವ್ಯಾಖ್ಯಾನ ಅನ್ಯ ಜಾತಿಯ ಸಂಗವ ಮಾಡದಂತೆ” ಇತ್ಯಾದಿಯಾಗಿ ಅನ್ಯಧರ್ಮೀಯರೊಡನೆ ಎಲ್ಲ ಸಂಬಂಧವನ್ನೂ ಕತ್ತರಿಸಿಕೊಂಡು ಬಾಳಬೇಕೆಂಬಂಥ ಪ್ರತ್ಯೇಕತಾಭಾವನೆ ಬಸವಣ್ಣನವರದಲ್ಲವಾಗಿ-ಈ ವಚನ ಪ್ರಕ್ಷಿಪ್ತ. ಭವಿಗಳ ಬಗ್ಗೆ ಬಸವಣ್ಣನವರಿಗೆ ವೈಷಮ್ಯವಿರಲಿಲ್ಲ-ನೋಡಿ ವಚನ 712.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು