ಭಕ್ತನ ಭಕ್ತಸ್ಥಲ - ದುರ್ವ್ಯಸನ
ಮತ್ತೊಂದ ಕಾಣದಂತೆ, ಮತ್ತೊಂದ ಕೇಳದಂತೆ,
ನಿಮ್ಮ ಶರಣರ ಪಾದವಲ್ಲದೆ ಅನ್ಯವಿಷಯಕ್ಕೆಳಸದಂತೆ
ಇರಿಸಯ್ಯಾ, ಕೂಡಲಸಂಗಮದೇವಾ.
Transliteration Mattonda kāṇadante, mattonda kēḷadante,
nim'ma śaraṇara pādavallade an'yaviṣayakkeḷasadante
irisayyā, kūḍalasaṅgamadēvā.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Make me to be
O Kūḍala Saṅgama Lord,
As not to see aught else,
As not to hear aught else,
As not to feel the lure
Of any other thing
Expcept your Śaraṇās' feet.
Translated by: L M A Menezes, S M Angadi
Hindi Translation कूडलसंगमदेव, मुझे ऐसे रखो
कि मैं कुछ और न देखूँ,
कुछ और न सुनूँ,
तव शरण-चरणों के
अतिरिक्त अन्य विषय न-चाहूँ ॥
Translated by: Banakara K Gowdappa
Telugu Translation ఇక వొఱొకటి చూడనట్లు
ఇక వేఱొకటి విననట్లు;
నీ శరణుల పాదముల దప్ప
అన్య విషయముల పై కీడ్వనట్లు
నిలుపుమయ్యా కూడల సంగయ్యా!
Translated by: Dr. Badala Ramaiah
Tamil Translation பிறிதொன்றைக் காணாது, பிறிதொன்றைக் கேளாது
உம்மடியார் தாளிணையன்றி, வேற்றுச் செயலி லீடுபடாது
எனை இடுமையனே கூடல சங்கம தேவனே.
Translated by: Smt. Kalyani Venkataraman, Chennai
Marathi Translation
दुसरे काही पाहू नये, दुसरे काही ऐकू नये.
तुमच्या शरणांच्या चरणाविना
दुसऱ्या कशाचेही आकर्षण होऊ नये
अशी कृपा करा कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ವಿಷಯ = ವಸ್ತು;
ಕನ್ನಡ ವ್ಯಾಖ್ಯಾನ ಶರಣರ ಪಾದವನ್ನು ನನ್ನ ಕಣ್ಣು ಸದಾ ಕಾಣುತ್ತಿರಲಿ, ಶರಣರ ವಿಚಾರವನ್ನು ನನ್ನ ಕಿವಿ ಸದಾ ಆಲಿಸುತ್ತಿರಲಿ-ಅನ್ಯವಾದುದೊಂದನ್ನೂ ನನ್ನ ಕಣ್ಣು ಕಿವಿ ಬಯಸದಿರಲಿ. (ಸದಾ ಶಿವಶರಣರ ಪಾದ ಪ್ರಾಂತದಲ್ಲಿ ನನ್ನನ್ನು ಸೇವಕನನ್ನಾಗಿ ಇರಿಸು)-ಎಂದು ಬಸವಣ್ಣನವರು ದೇವರನ್ನು ಮೂರು ವರ ಕೇಳುತ್ತಿರುವರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು