ಮತಿಮಂದನಾಗಿ ಗತಿಯ ಕಾಣದೆ ಇರ್ದೆನಯ್ಯಾ;
ಹುಟ್ಟುಗುರುಡನ ಕೈಯ್ಯ ಕೋಲ ಕೊಟ್ಟು ನಡೆಸುವಂತೆ
ನಡೆಸಯ್ಯಾ, ಎನ್ನಾ:
ನಿಮ್ಮಚ್ಚ ಶರಣರ ಒಕ್ಕುದ ಮಿಕ್ಕುದ
ನಚ್ಚಿಸು, ಮಚ್ಚಿಸು, ಕೂಡಲಸಂಗಮದೇವಾ.
Transliteration Matimandanāgi gatiya kāṇade irdenayyā;
huṭṭuguruḍana kaiya kōla koṭṭu naḍesuvante
naḍesayyā, ennā:
Nim'macca śaraṇara okkuda mikkuda
naccisu, maccisu, kūḍalasaṅgamadēvā.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Because of my duel-witted mind
I failed to see my way;
Lord, make me walk
As one who, blind from birth,
Is made by placing a staff
Into his hand.
Make me indeed to love
The remnants of the offerings
Of your most favoured Śaraṇās.
Translated by: L M A Menezes, S M Angadi
Hindi Translation मैं मंदमति होकर, मंद गति देख न पाता हूँ स्वामी,
जन्मांध को हाथ की लाठी के सहारे
चलाने की भाँति, चलाओ मुझे।
कूडलसंगमदेव, अपने
सच्चे शरणों के शेष प्रसाद का प्रेमी बनाओ ॥
Translated by: Banakara K Gowdappa
Telugu Translation మందమతినై గతిగానకుంటినయ్యా,
పుట్టు గ్రుడ్డికి ఊతకోలిచ్చి నడిపించునట్లు
నన్ను నడిపింపుమయ్యా నిజమగు నీ
శరణుల యెంగిలి పై ఆశ పుట్టింపుమయ్యా!
కూడల సంగమదేవయ్యా!
Translated by: Dr. Badala Ramaiah
Tamil Translation அறிவுமங்கி வழியினைக் காணாதிருந்தேன் ஐயனே,
பிறவிக்குருடன் கையிலே கோலையீந்து நடத்துதல் போல
நடத்தும் ஐயனே, என்னை,
உம்மடியாரேற்ற திருவமுதினை விரும்புமா ரருள்வாய்,
கூடல சங்கம தேவனே.
Translated by: Smt. Kalyani Venkataraman, Chennai
Marathi Translation
मतीमंद झाल्याने पथभ्रष्ट झालो देवा.
जन्मांधाच्या हाती काठी देवून चालवितात.
तैसे मज चालवावे.
तुमच्या प्रियशरणांकडे आकर्षित व्हावे.
ऐसे करावे कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಒಕ್ಕುದು = ಭೋಗಿಸುವುದು, ಜಂಗಮರಿಗೆ ಕೊಟ್ಟಿದ್ದು; ಗತಿ = ಸ್ಥಿತಿ; ಮತಿ = ಬುದ್ದಿ;
ಕನ್ನಡ ವ್ಯಾಖ್ಯಾನ ಉತ್ತಮ ಜಾತಿಯಿಂದ (ಅಪಾರ ಐಶ್ವರ್ಯದಿಂದ, ಉನ್ನತ ಅಧಿಕಾರದಿಂದ) ಮದವೇರಿ ಬುದ್ಧಿಗೆಟ್ಟು-ಮಹಾ ಶಿವಶರಣರ ಉಚ್ಚಿಷ್ಟ ಪ್ರಸಾದವನ್ನು ಸ್ವೀಕರಿಸುವ ಶಿವಧರ್ಮದ ಸದಾಚಾರಮಾರ್ಗವನ್ನು ಕಾಣದಾಗಿದ್ಧೇನೆ. ನಾನು ಹುಟ್ಟುಗುರುಡ. ನನ್ನ ಕೈಗೆ ಶರಣಾಗತಿಯ ದಂಡವನ್ನು ಕೊಟ್ಟು-ನನ್ನನ್ನು ಆ ಮಾರ್ಗವಾಗಿ ನಡೆಸು. ಅಚ್ಚ ಶರಣರು ಉಂಡು ಚೆಲ್ಲಿದ್ದನ್ನೂ, ಉಂಡು ಬಿಟ್ಟಿದ್ದನ್ನೂ ಮಹಾಪ್ರಸಾದವೆಂದು ನಾನು ಆಯ್ದು ಮೆಚ್ಚಿ ಭುಂಜಿಸುವಂತೆ ಮಾಡು. ಶರಣರ (ಉಂಡೆಲೆ ಎಸೆಯುವ ಪ್ರಸಾದಗುಂಡಿಯ) ಕಡೆ ನನ್ನನ್ನು ಕರೆದುಕೊಂಡು ಹೋಗಿ ಬಿಡು-ನಾನು ಧನ್ಯನಾಗುತ್ತೇನೆ ಎಂದು ಬಸವಣ್ಣನವರು ಶಿವನನ್ನು ಕೇಳಿಕೊಳ್ಳುತ್ತಿರುವರು.
ವಿ : ಬಸವಣ್ಣನವರ ಮಹಾಮನೆಯ ಮುಂದೆಯೇ ಇದ್ದ ಪ್ರಸಾದಗುಂಡಿಯ ಬಳಿ ಗುಪ್ತವಾಗಿ ಶಿವಯೋಗದಲ್ಲಿದ್ದು ಪ್ರಭುದೇವರ ಮೆಚ್ಚುಗೆಗೆ ಪಾತ್ರನಾದ ಮರುಳುಶಂಕರದೇವನೆಂಬ ಮಹಾಶಿವಶರಣನನ್ನು ಇಲ್ಲಿ ನೆನೆಯಬಹುದು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು