ಕಾಣದುದನೆಲ್ಲವ ಕಾಣಲಾರೆನಯ್ಯಾ
ಕೇಳದುದನೆಲ್ಲವ ಕೇಳಲಾರೆನಯ್ಯಾ
ದ್ರೋಹವಿಲ್ಲ ಎಮ್ಮ ಶಿವನಲ್ಲಿ, ಸೀಮೆಯಯ್ಯಾ!
ಒಲೆಯ ಮುಂದಿದ್ದು ಮಾಡದ ಕನಸ ಕಾಣ್ಬವರನೊಲ್ಲನಯ್ಯಾ
ಕೂಡಲಸಂಗಮದೇವ.
Transliteration Kāṇadudanellava kāṇalārenayyā
kēḷadudanellava kēḷalārenayyā
drōhavilla em'ma śivanalli, sīmeyayyā!
Oleya mundiddu māḍada kanasa kāṇbavaranollanayyā
kūḍalasaṅgamadēva.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 All that cannot be seen
I cannot see,O Lord!
All that cannot be heard
I cannothear,O Lord !
In my Śiva there's no flaw:
He is the absolute height!
Lord KudalaSangama
Shuns those who idly sir
Before the hearth, and dream of the upstairs.
Translated by: L M A Menezes, S M Angadi
Hindi Translation जो कुछ अदृश्य है वह सब मैं देख नहीं सकता ।
जो कुछ अश्राव्य है वह सब मैं सुन नहीं सकता
मम शिव में द्रोह नहीं, वह सीमा है
चूल्हे के पास बैठकर, मंजिल का स्वप्न देखनेवालों को
कूडलसंगमदेव नहीं चाहते ॥
Translated by: Banakara K Gowdappa
Telugu Translation ప్రత్యక్ష మెల్లా పరికింపలేను;
శ్రవ్యమెల్లా వినలేను;
ద్రోహములేదు నా స్వామి శివునిలో! అతడే నా సీమ!
కుంపటికడ కూర్చొని పగటి కలలు
కనువారి నొల్ల డయ్యా! మా కూడల సంగయ్య:
Translated by: Dr. Badala Ramaiah
Tamil Translation காணக் கூடாததை காணேன் ஐயனே!
கேட்கக் கூடாததைக் கேளேன் ஐயனே!
தீங்கில்லை எம் சிவனிடத்தே, எல்லையற்றோ னையனே!
உலையின் முன்னமர்ந்து காணலாகாத கனவினைக்
காண்போற்கு அருளான் ஐயனே
கூடல சங்கம தேவன்.
Translated by: Smt. Kalyani Venkataraman, Chennai
Marathi Translation
जे पाहू नये ते पाहण्याची इच्छा नाही.
जे ऐकू नये ते ऐकण्याची इच्छा नाही.
शिवात द्रोह नाही. शिव हेच प्रमाण आहे.
चुलीसमोर बसून राजवाड्याची
स्वप्ने पाहणाऱ्याला जवळ घेत नाही
कूडलसंगमदेव.
Translated by Shalini Sreeshaila Doddamani
ಶಬ್ದಾರ್ಥಗಳು ದ್ರೋಪ = ; ನೀಮೆ = ;
ಕನ್ನಡ ವ್ಯಾಖ್ಯಾನ ಕಾಣದುದನ್ನೆಲ್ಲ ಕಂಡೆನೆನ್ನಲಾರೆ-ಜಂಗಮಲಿಂಗವೇ ಪ್ರತ್ಯಕ್ಷಪ್ರಮಾಣ ನನಗೆ, ಕೇಳದುದನ್ನೆಲ್ಲ ಕೇಳಿದೆನೆನ್ನಲಾರೆ-ಶಿವಾನುಭವವೇ ಶಬ್ದಪ್ರಮಾಣ ನನಗೆ. ಇವಕ್ಕೆ ದ್ರೋಹವನ್ನೆಂದಿಗೂ ಬಗೆಯಲಾರೆ. ನನ್ನ ವ್ಯವಹಾರವೆಲ್ಲಕ್ಕೆ ಶಿವನೇ ಸೀಮಾರೇಖೆ-ಅದನ್ನು ಮೀರಿ ನಾನು ಚರಿಸಲೊಲ್ಲೆ ಆಚರಿಸಲೊಲ್ಲೆ.
ಒಲೆಯ ಮುಂದೆ ಕುಳಿತ ಹಸಿದವನಿಗೆ-ಬೇಯುವ ಅನ್ನದ ಕಡೆಗೇ ಗಮನವಿರಬೇಕು-ಬೆಂದಮೇಲೆ ತಿನ್ನಬೇಕು, ಕ್ಷುದ್ಬಾಧೆಯಿಂದ ಬಿಡುಗಡೆ ಪಡೆಯಬೇಕು. ಅದನ್ನು ಬಿಟ್ಟು-ಅಲ್ಲಿಂದಲೇ ಕರುಮಾಡದ ಕನ್ನೆ ಮಾಡದ ಕಲ್ಪನಾವಿಲಾಸದ ಬಳ್ಳಿ ತಿದ್ದುವುದರಲ್ಲಿ ನನಗೆ ಆಸಕ್ತಿಯಿಲ್ಲ.
ಸ್ಥೂಲ-ಸೂಕ್ಷ್ಮ-ಕಾರಣವೆಂಬ ಮೂರು ಶರೀರವನ್ನೇ ಮೂರು ಕಲ್ಲುಮಾಡಿ, ಒಲೆಹೂಡಿ, ಭಕ್ತಿಯೆಂಬ ಬೆಂಕಿಯನ್ನು ಪಟುಮಾಡಿ, ಅಂಗಗುಣವನ್ನೆಲ್ಲ ಲಿಂಗಗುಣವಾಗಿ ಪಕ್ವಮಾಡಿ-ಆ ಸಮರಸವನ್ನು ಆರೋಗಿಸಿ ಭವಬಾಧೆಯಿಂದ ಬಿಡುಗಡೆ ಪಡೆಯುವುದೇ ನನ್ನ ತುರ್ತಿನ ಕರ್ತವ್ಯ. ಉಳಿದುದೆಲ್ಲ ಅಲಸಿಯ ಹಗಲುಗನಸಿನ ವ್ಯರ್ಥ ಕನವರಿಕೆ. ಅಂಥವರನ್ನು ಶಿವನು ಸ್ವೀಕರಿಸನು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು