•  
  •  
  •  
  •  
Index   ವಚನ - 267    Search  
 
ಎತ್ತು ತೊತ್ತಾಗಿ, ಭೃತ್ಯನಾಗಿ ಎಂದಿಪ್ಪೆನಯ್ಯಾ. ನಿಮ್ಮವರ ಮನೆಯಲು ಕೂಡಲಸಂಗಮದೇವಾ, ಲಿಂಗಜಂಗಮದ ಲೆಂಗಿಯಾಗಿ.
Transliteration Ettu tottāgi, bhr̥tyanāgi endippenayyā. Nim'mavara maneyalu kūḍalasaṅgamadēvā, liṅgajaṅgamada leṅgiyāgi.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
Tamil Translation நந்தியாகித் தொண்டனாகி அடியானாகி இருப்பே னையனே, உம்மவர் இல்லத்திலே, கூடல சங்கம தேவனே, இலிங்க சிவனடியார் தம் நெறிபிறழா அடியானாக. Translated by: Smt. Kalyani Venkataraman, Chennai
Marathi Translation दास होऊन, सेवक होऊन राहणार. आपल्या शरणांच्या घरात लिंग जंगमाचा सेवक होतो कूडलसंगमदेवा, Translated by Shalini Sreeshaila Doddamani
ಶಬ್ದಾರ್ಥಗಳು ಜಂಗಮ = ಜೀವವಿರುವ, ಚೈತನ್ಯವಿರುವ ಸಕಲ ಜೀವರಾಶಿ; ತಿ<ಗಿ = ; ತೊತ್ತು = ಸೇವೆ; ಭೃತ್ಯ = ಸೇವೆ;
ಕನ್ನಡ ವ್ಯಾಖ್ಯಾನ ಶಿವಶರಣರ ಮನೆಯಲ್ಲಿ ಹೆಗಲುಕೊಟ್ಟು ಎತ್ತಾಗಿ ದುಡಿಯುವ, ತನ್ನ ಮಾನವನ್ನೇ ಮುಡುಪಿಟ್ಟು ಗುಲಾಮನಾಗಿ ಚಾಕರಿಮಾಡುವ, ಸಾಮರ್ಥ್ಯವನ್ನೆಲ್ಲ ಪಣವಾಗಿಟ್ಟು ಭೃತ್ಯನಾಗಿ ಸೇವೆಮಾಡುವ ಹಂಬಲ ಬಸವಣ್ಣನವರಿಗೆ. ಮತ್ತು ಲಿಂಗಸ್ವರೂಪಿಯಾದ ಆ ಜಂಗಮಕ್ಕೆ ಲೆಂಕನಾಗಿ-ಅವರ ಅಭಿಮಾನದ ರಕ್ಷಣೆಯ ಸಲುವಾಗಿ ಪ್ರಾಣವನ್ನೂ ಅರ್ಪಿಸಿಕೊಳ್ಳುವ ರಭಸ ಬಸವಣ್ಣನವರಿಗೆ. ರಾಜ ಬಿಜ್ಜಳನ ಅರಮನೆಯಲ್ಲಿ ಭಂಡಾರಿಯಾಗಿದ್ದಾಗಲೂ-ಅವರಿಗೆ ಶರಣರ ಮನೆಯಲ್ಲಿ ಪೂರ್ಣ ಕಾಲದ ಸೇವಕನಾಗಿದ್ದರೆ ಚೆನ್ನಿತ್ತೆಂಬ ಕಾಮನೆ ಕಾಡುತ್ತಲೇ ಇತ್ತು. ವಿ : ಲೆಂಗಿ ( < ಲೆಂಕ) ಎಂದರೆ ಒಡೆಯನ ರಕ್ಷಣೆಯ ಭಾರ ಹೊತ್ತು-ವಿಫಲನಾದರೆ ತಾನೂ ಪ್ರಾಣಾರ್ಪಣೆ ಮಾಡಿಕೊಂಡು ಸಾಯುವ ಧೀರಯೋಧ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು