ಕಾಣಬಹುದೆ ಪರುಷದ ಗಿರಿಯಂಧಕಂಗೆ?
ಅರಿಯಬಹುದೆ ರಸದ ಬಾವಿ ನಿರ್ಭಾಗ್ಯಂಗೆ?
ತೆಗೆಯಬಹುದೆ ಕಡವರವು ದರಿದ್ರಂಗೆ?
ಕರೆಯಬಹುದೆ ಕಾಮಧೇನುವಶುದ್ಧಂಗೆ?
ಹೊನ್ನ ಹುಳುವ ಕಂಡು ನರಿ ತನ್ನ ಬಾಲವ
ಹುಣ್ಣು ಮಾಡಿಕೊಂಡರೆ ಹೋಲಬಹುದೆ?
ಎನ್ನೊಡೆಯ ಕೂಡಲಸಂಗನ ಶರಣರನು
ಪುಣ್ಯವಿಲ್ಲದೆ ಕಾಣಬಹುದೇ?
Transliteration Kāṇabahude paruṣada giri andhakaṅge?
Ariyabahude rasada bāvi nirbhāgyaṅge?
Tegeyabahude kaḍavaravu daridryaṅge?
Kareyabahude kāmadhēnu aśud'dhaṅge?
Honna huḷuva kaṇḍu nari tanna bālava
huṇṇu māḍikoṇḍare hōlabahude?
Ennoḍeya kūḍalasaṅgana śaraṇaranu
puṇyavillade kāṇabahudē?
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Can a blind man see
The alchemic mount ?
Can the hapless see
A nectar well ?
Can a peniless mam
Divine the gold
Can the impure milk
The Celestial Cow?
Can the fox, at sight of a glow- worm,
Resemble it if but he scratch
An ulcer on his tail?
And can you, without merit, see
The Śaraṇaś of my Lord KudalaSangama?
Translated by: L M A Menezes, S M Angadi
Hindi Translation अंधा पुरुष-गिरि देख सकता है?
अभागा अमृत-कूप जान सकता है?
दरिद्र व्यक्ति स्वर्ण – निधि पा सकता है?
अपवित्र व्यक्ति कामधेनु को दुह सकता है?
खद्योत देख श्रृगाल अपनी पूँछ घायल कर ले,
तो उसके समान हो सकता है?
मेरे स्वामी कूडलसंगमेश के शरण
पुण्य बिना दर्शन दे सकते हैं?
Translated by: Banakara K Gowdappa
Telugu Translation మేరుగిరి చూడనగునే అంధునకు?
అమృత సరసి చూడనగునే దౌర్భాగ్యునకు?
లిబ్బి నెత్తనగునే దరిద్రునకు?
కామధేనువును పితుకవచ్చునే అపవిత్రునకు?
మిణుగురుల చూచి నక్క తన తోకకు
నిప్పు పెట్టుకొన్నచో పోలునే?
నా స్వామి సంగయ్య దయలేక
శరణులనే చూడనగునే?
Translated by: Dr. Badala Ramaiah
Tamil Translation காணவியலுமோ பரிசவேதி மலையினைக் குருடனுக்கு?
முகக்கவியலுமோ இரசவாவியினை நற்பேறற்றோனுக்கு?
எடுக்க வியலுமோ புதையலை வறியோனுக்கு?
கறக்கவியலுமோ காமதேனுவைத் தூய்மையற்றோனுக்கு?
மின்மினியைக் கண்டு நரி தன் வாலைப்
புண் செய்து கொளின் சரியாமோ?
நம் உடையன் கூடல சங்கனின் மெய்யடியாரை
நல்வினையின்றி காணவியலுமோ?
Translated by: Smt. Kalyani Venkataraman, Chennai
Marathi Translation
परीस ना पाही कधी ते आंधळे
दारिद्र न जाणिले, पाहू जाता
भाग्यहीन सुवर्ण शोधू न शकले
पान्हा न सोडिले, कामधेनु
कोल्हयाने शेपुट जाळून घेतले
परि ना झाले, काजवा तो
पुण्याई लागते शरणांना जाणणे
करंटा काय जाणे, सत्संग
कूडलसंगमदेवा! शरणांना दर्शन
तेचि परीस जाण, लाभल्यास
अर्थ – जसे आंधळे आपल्या जीवनात कधीही परीस पाहू शकत नाहीत. ज्यांच्या भाग्यातच नाही असे दरिद्र परीस जवळ असताही त्यास जाणू शकत नाही. अष्टदरिद्री माणसाने रात्रंदिवस जमीन खोदली, शेवटी थकून गेले तरी आपल्या पायाखाली दडलेले सुवर्ण शोधू शकले नाहीत. कामधेनू उपलब्ध असूनही काय उपयोग? ती अशूद्ध वातावरणात येणार नाही किंवा ती दूधाची धार सोडणार नाही. कोल्ह्याने काजव्याप्रमाणे व्हावे म्हणून आपले शेपूट जाळून घेतले व जखम करून घेतली तरी काजवे चकमकतात त्याप्रमाणे तो चमकू शकणार नाही. त्याप्रमाणे पुण्य न केलेले, दुर्भागी लोक शिवशरण जवळ आले असतानाही त्यांना जाणू शकणार नाही. किंवा त्याचे दर्शन घडणार नाही. शरणांचा सत्संग लाभण्यासाठी जीवनात सत्कर्म करावी लागतात. पुण्य पदरी असल्याशिवाय व आचरण उत्तम असल्याशिवाय शरणांची सेवाही घडणार नाही. शरणांचा सत्संग जर घडला तर परीस स्पर्शाप्रमाणे जीवन सार्थकी लागेल.
Translated by Rajendra Jirobe, Published by V B Patil, Hirabaug, Chembur, Mumbai, 1983
दिसेल का परिसाचा पर्वत आंधळ्याला ?
मिळे का रसाची विहिर निर्भाग्याला ?
मिळे का सुवर्णाची खाण गरीबाला?
दूध देईल का कामधेनू अशुध्दाला?
काजव्याला पाहून कोल्ह्याने आपले शेपूट जाळून घेतले तर
त्याची शेपूट सोन्याची होईल का?
माझे मालिक कूडलसंगाच्या शरणांचे दर्शन पुण्याविना घडेल ?
Translated by Shalini Sreeshaila Doddamani
ಶಬ್ದಾರ್ಥಗಳು ಅಂಧಕ = ಕುರುಡ; ಕಡವರ = ಚಿನ್ನ; ಕಾಮಧೇನು = ಹಸು; ಗಿರಿ = ಬೆಟ್ಟ; ದಾರಿದ್ರ = ಬಡತನ; ನಿರ್ಭಾಗ್ಯ = ಭಾಗ್ಯ ಇಲ್ಲದವನು; ಪರುಷ = ; ರಸ = ದ್ರವ; ಹುಣ್ಣು = ಗಾಯ;
ಕನ್ನಡ ವ್ಯಾಖ್ಯಾನ ಶರಣರ ಕೃಪೆಗೆ ಪಾತ್ರವಾಗುವುದೆಂದರೆ ಸುಲಭವಲ್ಲ. ಅವರನ್ನು ಕಾಣಬೇಕು, ಕಂಡು ಶರಣೆಂದು ಗುರುತಿಸಬೇಕು, ಕಾಲಿಗೆ ಬಿದ್ದು ಕರೆತರಬೇಕು, ಅವರು ನಮ್ಮ ಮೇಲೆ ತಾವಾಗಿಯೇ ಕರುಣೆಗರೆಯಬೇಕು-ಆಗ ಅವರ ಆ ಆಶೀರ್ವಾದಬಲದಿಂದ ನಮ್ಮ ಆತ್ಮದೀವಿಗೆ ಮಿನುಗಿ ನಾವು ಕೃತಾರ್ಥರಾಗುವೆವು.
ಇದೆಲ್ಲ ಆದ್ಯಂತವಾಗಿ ನಡೆಯಲು ನಾವು ಪಡೆದು ಬಂದಿರಬೇಕು ಎಂಬುದಿರಲಿ-ಮೊದಲನೆಯದಾಗಿ ಆ ಶರಣರನ್ನು ಕಣ್ಣಿಂದ ಕಾಣುವುದೆಂಬುದೂ ನಮಗೆ ಅಪಾರವಾದ ಪುಣ್ಯವಿಲ್ಲದಾಗದು-(ಹೇಗೆಂದರೆ) : ಪರುಷವು-ಮಣಿಯಾಕಾರದಲ್ಲಿಯಲ್ಲ-ಗಿರಿಯಾಕಾರದಲ್ಲಿ ದಿಗಂತವಿಸ್ತಾರವಾಗಿ ಅಂಬರಚುಂಬಿಯಾಗಿ ನಿಂತಿದ್ದರೂ-ಕಣ್ಣಿಲ್ಲವಾಗಿ ಕುರುಡನಿಗೆ ಅದು ಕಾಣುವುದೇ ಇಲ್ಲ.
ಶರಣರನ್ನು ಕಂಡರೂ-ಅವರನ್ನು ಶರಣರೆಂದು ಗುರುತಿಸಲಾಗದಿರಬಹುದು-(ಹೇಗೆಂದರೆ) : ರಸವು ಒಂದು ಬಿಂದುವಾಗಿಯಲ್ಲ-ಭಾವಿಯಾಗಿ ಸೆಲೆ ಒಡೆದಿದ್ದರೂ ಅದನ್ನು ನಿರ್ಭಾಗ್ಯನೊಬ್ಬನಿಗೆ-ಕಣ್ಣಿರುವುದರಿಂದ ಕಾಣಬಹುದಾದರೂ-ಭಾಗ್ಯವಿಲ್ಲವಾಗಿ-ಅದು ರಸದ ಭಾವಿಯೆಂದು ಗುರುತಿಸಲಾಗುವುದೇ ಇಲ್ಲ.
ಶರಣರನ್ನು ಗುರುತಿಸಿದರೂ-ನಮಗೆ ಲಭ್ಯವಿಲ್ಲದಿದ್ದರೆ ಕರೆತರಲಾಗದಿರಬಹುದು-ಹೇಗೆಂದರೆ : ದರಿದ್ರನು ಕಡವರ(ನಿಕ್ಷೇಪ) ವನ್ನು ಇಂಥಲ್ಲಿ ಅವಿತಿಟ್ಟಿದೆಯೆಂದು ಬೆರಳಿಟ್ಟು ತೋರಿಸುವನಾದರೂ ಅವನು ಅದೃಷ್ಟಹೀನನಾಗಿ ಅದನ್ನು ಅಗೆದು ತೆಗೆಯಲಾಗುವುದಿಲ್ಲ.
ಶರಣರನ್ನು ಮನೆಗೆ ಕರೆತಂದರೂ ನಾವು ಸದಾಚಾರಿಗಳಲ್ಲದಿದ್ದರೆ ಅವರು ನಮಗೆ ಪ್ರಸನ್ನರಾಗದಿರಲೂಬಹುದು-(ಹೇಗೆಂದರೆ) : ಅಶುದ್ದನಾದವನಿಗೆ ಕಾಮಧೇನು ಕಣ್ಣಿಗೆ ಕಾಣಬಹುದು, ಅದು ಕಾಮಧೇನುವೆಂದು ಬುದ್ಧಿಗೆ ತಿಳಿಯಲೂ ಬಹುದು, ಬಲವಿದ್ದರೆ ಅದನ್ನು ಎಳೆತರಲೂ ಬಹುದು-ಆದರೆ ಅದು ಅವನಿಗೆ ಸ್ವರಬಿಟ್ಟು ಅಮೃತದ ಹಾಲನ್ನು ಕರೆಯುವುದಿಲ್ಲ-ಅವನಿಗೆ ಶುದ್ಧಿಯಿಲ್ಲವಾಗಿ.
ಆದ್ದರಿಂದ ಶರಣರನ್ನು ಕಂಡು ಅವರ ಕೃಪೆಯನ್ನು ಸಂಪಾದಿಸುವುದು ಆತ್ಮತೇಜೋಬಲದಿಂದ ಮಾತ್ರ ಸಾಧ್ಯವೇ ಹೊರತು ಮತ್ತೇತರಿಂದಲೂ ಅಲ್ಲ-(ಹೇಗೆಂದರೆ) : ಅಂಡಿನ ಭಾಗ ಹೊಳೆಯುವ ಮಿಣುಕುಹುಳುವನ್ನು ಕಂಡು ನರಿಯು ತಾನೂ ಹಾಗೆ ಮಿನುಗಬೇಕೆಂದು ತನ್ನ ಬಾಲವನ್ನು ಕಚ್ಚಿ ಹುಣ್ಣು ಮಾಡಿಕೊಂಡರೆ-ನೊಂದು ಊಳಿಡುವುದೇ ಹೊರತು ಮಿಂಚುಹುಳುವಿನಂತೆ ಮಿಂಚುವುದಿಲ್ಲ. ಹಾಗೆಯೇ ಪುಣ್ಯವಿಲ್ಲದವನಿಗೆ ಏನೇ ಮಾಡಿಯೂ-ಶರಣರನ್ನು ಗುರುತಿಸುವುದಿರಲಿ, ಕರೆತರುವುದಿರಲಿ,ಕೃಪಾಪಾತ್ರ ನಾಗುವುದಿರಲಿ-ಮೊದಲಿಗೆ ಅವರನ್ನು ಕಣ್ಣಿಂದ ಕಾಣುವುದೂ ಸಾಧ್ಯವಾಗುವುದಿಲ್ಲ-ಅವನ ಕಣ್ಣಿಗೆ ಪಾಪದ ಪೊರೆ ಮುಚ್ಚಿರುತ್ತದೆ.
ಆದ್ದರಿಂದ ಶರಣರ ದರ್ಶನ ಪಡೆದವನು ಪುಣ್ಯವಂತ. ಮುಂದೆ ಮುಂದೆ ಅವನ ಕೃಪೆಗೆ ಪಾತ್ರ ನಾಗಲು ನಾನಾ ರೀತಿಯಲ್ಲಿ ಸಜ್ಜಾಗಬೇಕು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು