ಅರಿಸಿನವನೆ ಮಿಂದು, ಹೊಂದೊಡಿಗೆಯನೆ ತೊಟ್ಟು,
ಪುರುಷನ ಒಲವಿಲ್ಲದ ಲಲನೆಯಂತಾಗಿರ್ದೆನಯ್ಯಾ!
ವಿಭೂತಿಯನೆ ಹೂಸಿ, ರುದ್ರಾಕ್ಷಿಯನೆ ಕಟ್ಟಿ,
ಶಿವ ನಿಮ್ಮೊಲವಿಲ್ಲದಂತೆ ಆಗಿರ್ದೆನಯ್ಯ!
ಕೆಟ್ಟು ಬಾಳುವರಿಲ್ಲಾ ಎಮ್ಮವರ ಕುಲದಲ್ಲಿ:
ನೀನೊಲಿದಂತೆ ಸಲಹಯ್ಯಾ, ಕೂಡಲಸಂಗಮದೇವಾ.
Transliteration Arisinavane mindu, hondoḍigeyane toṭṭu,
puruṣana olavillada lalaneyante āgirdenayyā!
Vibhūtiyane hūsi, rudrākṣiyane kaṭṭi,
śiva nim'molavilladante āgirdenayya!
Keṭṭu bāḷuvarillā em'mavara kuladalli:
Nīnolidante salahayyā, kūḍalasaṅgamadēvā.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 I’m like a woman bathed in turmeric,
Arrayed all over in gold,
Who’s lost her husband’s love.
I am like one who has
Besmeared himself with ash
And would his neck with beads.
And lost your love,O God!
Within our clan there’s none
Who, falling into sin, yet lives !
Protect me as you will,
O KudalaSangama Lord!
Translated by: L M A Menezes, S M Angadi
Hindi Translation हल्दी से नहाकर, स्वर्णाभरण धारण कर,
पति प्रेम से वंचित ललना जैसा हूँ ।
विभूति लगाकर रुद्राक्ष धारण कर
हे शिव, तव प्रेम से वंचित हूँ ।
हमारे वंश में भ्रष्ट होकर जीनेवाले नहीं हैं।
कूडलसंगमदेव , अपने इच्छानुसार रक्षा करो ॥
Translated by: Banakara K Gowdappa
Telugu Translation ఉదయాస్తమానము లారకమండు
ఉదరంబుకై వేపసుపున స్నానంబుచేసి; పసిడి నగలు పెట్టి,
పురుషుని వలపులేని పొలతివలె నుంటినయ్యా;
అయ్యా, విభూతి దాల్చి రుద్రాక్షలగట్టి
శివా! నీ వలపులేక నిల్చితినయ్యా !
చెడి బ్రతికినవారు లేరు మా కులమున
వలచినట్లేలుకొనుమయ్యా నను
కూడల సంగమదేవా!
గు టేగాని
నినుదలచు వ్యవధి లేదయ్యా!
ఎటులో తండ్రి! నా పూర్వలిఖిత మెట్టిదో!
పిడక లేరుటయేగాని వండి తిను వ్యవధి లేదయ్యా
కరుణింపుమో కూడల సంగమదేవా!
Translated by: Dr. Badala Ramaiah
Tamil Translation மஞ்சள் பூசி பொன்னைப் பூண்டு,
கணவனன்பிலா பெண்ணைப் போல
யானிருந்தேன் ஐயனே,
திருநீறுபூசி கண்மணியணிந்து
சிவனே உம் அருளின்றி யானிருந்தேனையனே,
கெட்டு வாழ்வோரிலை எம் குலத்திலே,
உன் விருப்பம் போல் அருள்வாய்
கூடல சங்கம தேவனே.
Translated by: Smt. Kalyani Venkataraman, Chennai
Marathi Translation
हळद लावून, स्वर्णालंकार घालूनी,
पती प्रेमाविना ललनेसमान मी आहे.
विभूती लावून, रुद्राक्षी बांधून,
शिवकृपे पासून वंचीत मी आहे.
तत्त्वहीन जीवन आपल्या कुळात नाही.
तुझ्या इच्छेप्रमाणे ठेवावे
कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಕುಲ = ಜಾತಿ; ಲಲನೆ = ಹೆಂಗಸು; ಹೂಸಿ = ಲೇಪಿಸು; ಹೊಂದೊಡಿಗೆ = ಆಭರಣ;
ಕನ್ನಡ ವ್ಯಾಖ್ಯಾನ ಕೂಡಲ ಸಂಗನ ವಿರಹ ವೇದನೆ
ಪ್ರಾಪಂಚಿಕ ಜೀವನದಲ್ಲಿಯ ಸತಿ-ಪತಿಯರ ಸುಮಧುರ ಬಾಂಧವ್ಯದಂತೆಯೇ ಪಾರಮಾರ್ಥಿಕ ಜೀವನದಲ್ಲಿ ಭಕ್ತ ಭಗವಂತರ ಬಾಂಧವ್ಯ. ಸತಿಗೆ ಪತಿಯ ಮೇಲಿರುವ ಲೌಕಿಕ ಪ್ರೇಮದಂತೆಯೇ, ಭಕ್ತನಿಗೆ ಪರಮಾತ್ಮನ ಮೇಲಿರುವ ಅಲೌಕಿಕ ಪ್ರೇಮವೇ ಭಕ್ತಿ. ಇಂತಹ ಅಲೌಖಿಕ ಪ್ರೇಮ ಸ್ವರೂಪವಾದ ಭಕ್ತಿಯನ್ನು ಬಸವಣ್ಣ ಕೂಡಲಸಂಗನ ಮೇಲಿರಿಸಿ ಅವನ ಒಲುಮೆಗಾಗಿ ಸದಾ ಹಂಬಲಿಸಿದ್ದಾನೆ. ವಿರಸಗೊಂಡ ಪತಿಯ ಮನವೂಲಿಸಲು ಅವನೊಪುವಂತೆ ಅಲಂಕೃತಳಾಗಿದ್ದರೂ ಪತಿಯ ಸುಳಿವು ಕಾಣದೆ ವಿರಹದೊಳು ಬಳಲುವ ಸತಿಯಂತೆ, ಅಣ್ಣ ವಿಭೂತಿ ರುದ್ರಾಕ್ಷಿಗಳನ್ನು ಧರಿಸಿ ಕೂಡಲಸಂಗನಿಗಾಗಿ ಕಾತರಿಸಿ ಅವನ ವಿರಹದೊಳು ಬೆಂದು ವಿಹ್ವಲನಾಗಿದ್ದಾನೆ. ಪತಿಯ ಪ್ರೇಮವಿಲ್ಲವೆಂದು ಪರಪುರುಷನನ್ನು ಪ್ರೇಮಿಸುವಳೇ ಪತಿವ್ರತಾಸ್ತ್ರೀ? ಕಂಡಕಂಡವರ ಗಂಡರೆಂದೆಂಬ ದುಂಡೆಯನವಳ ಸಜ್ಜನೆಯೆನ್ನಬಹುದೇ?’ ‘ನಂಬಿದ ಹೆಂಡತಿಗೆ ಗಂಡನೊಬ್ಬ, ನಂಬಬಲ್ಲ ಭಕ್ತಂಗೆ ದೇವನೊಬ್ಬ, ಅನ್ಯ ದೈವದ ಸಂಗ ಹಾದರ,’ ಆದ್ದರಿಂದ ‘ಕೆಟ್ಟು ಬಾಳುವರಿಲ್ಲಾ ಎಮ್ಮವರ ಕುಲದಲ್ಲಿ’ ಯೆಂದು ಕುಲದ ಗೌರವವನ್ನುಳಿಸಲು ಕೇಳಿ ಜೀವನಕ್ಕಿಳಿಯದೆ ತನ್ನ ಎಲ್ಲಾ ನೋವನ್ನು ನುಂಗಿ ಪತಿಯ ಬರವನ್ನೇ ಹಾರೈಸುವ ಕುಲಸ್ತ್ರೀಯಂತೆ, ದೈವವೆರಡೆಂದು ಬಗೆಯದೆ ಶಿವಭಕ್ತರ ಕುಲ ಧರ್ಮವನ್ನು ಕಾಪಾಡಿ ಕೂಡಲಸಂಗನ ಒಲುಮೆಗಾಗಿಯೇ ಕಾತರಿಸಿ ಕುಳಿತಿದ್ದಾನೆ ಅಣ್ಣ ಬಸವಣ್ಣ. ‘ನೀನೊಲಿದಂತೆ ಸಲಹಯ್ಯಾ ಕೂಡಲಸಂಗಮದೇವಾ.’
- ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.