ತಾಮಸ(ದೆ) ಮುಸುಕಿ ಕಂಗಳ ಕೆಡಿಸಿತ್ತೆನ್ನ ಭಕ್ತಿ;
ಕಾಮವೆಂಬಗ್ನಿಗೆ ಮುರಿದಿಕ್ಕಿತ್ತೆನ್ನ ಭಕ್ತಿ;
ಉದರಕ್ಕೆ ಕುದಿಕುದಿದು ಮುಂದುಗೆಡಿಸಿತ್ತೆನ್ನ ಭಕ್ತಿ,
ಇದಿರನಾಶ್ರಯಿಸಲು ಹೋಯಿತ್ತೆನ್ನ ಭಕ್ತಿ!
ಹೆಣಮೂಳನು ನಾನು ! ಕೂಡಲಸಂಗಮದೇವಾ,
ಕ್ಷಣ ಹದುಳವಿರದೆ ಬಾಯ ಟೊಣೆದೇ ಹೋಯಿತ್ತೆನ್ನ ಭಕ್ತಿ!
Transliteration Tāmasa(de) musuki kaṅgaḷa keḍisittenna bhakti;
kāmavemba agnige muridikkittenna bhakti;
udarakke kudikudidu mundugeḍisittenna bhakti,
idiranāśrayisalu hōyittenna bhakti!
Heṇamūḷanu nānu kūḍalasaṅgamadēvā,
kṣaṇa haduḷavirade bāya ṭoṇedē hōyittenna bhakti!
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 My piety, wrapped up in sloth,
Hath blindfolded my eyes;
Hath broken me like a faggot-stick
And cast me in the fire of lust;
Boiling and boiling for my belly's sake
Hath blocked my onward way;
My piety hath gone
To another for a sheltering roof !
I am as senseless as a corpse!
O Kūḍala Saṅgama Lord,
My piety, not for a moment calm,
Hath cheated with the lips and gone !
Translated by: L M A Menezes, S M Angadi
Hindi Translation नयन नष्ट करती है तामसावृत मेरी भक्ति;
कामाग्नि में तोड़कर रखती है मेरी भक्ति,
उदरार्थ उबल उबलकर पथ भ्रष्ट करती है मेरी भक्ति,
पराश्रय में जाती है मेरी भक्ति,
मैं मूर्ख शव हूँ, कूडलसंगमदेव,
क्षण मात्र शांत न रहकर
मुँह पर थप्पड़ लगाकर गई मेरी भक्ति ॥
Translated by: Banakara K Gowdappa
Telugu Translation తమసమను ముసుగు కన్ను లబడి చెడె నా భక్తి
కామమను నిప్పున చిట్లి విఱిగె నా భక్తి
పొట్టకై కుతకుత ఉడికి మున్నే చెడె నా భక్తి;
ఎదిరి నాశ్రయింపగబోయె నా భక్తి
శవమూర్ఖుడ నేను; కూడల సంగమదేవా;
క్షణము శాంతిలేక నోట వంచన చేసిపోయె నా భక్తి
Translated by: Dr. Badala Ramaiah
Tamil Translation இருள்சூழ்ந்து கண்களை யழித்த தென்பக்தி
காமமெனுந்தீயிலே முறித்திட்டது என் பக்தி
வயிற்றுப்பசி கனன்று ஏற்றத்தை யழித்ததென் பக்தி,
பிறர்தம் தஞ்சமதனை நாடியதென்பக்தி
நடைப்பிணம் நான், கூடல சங்கம தேவனே
கணமும் நலமின்றி முகத்தினிலடித்த தென்பக்தி.
Translated by: Smt. Kalyani Venkataraman, Chennai
Marathi Translation
अंधार पसरवून डोळ्यांना दिसू नये असे
केले माझ्या भक्तीने, कामाग्नीत ढकलून
दिले माझ्या भक्तीने, पोटाच्या चिंतेने
भविष्य बिघडविले माझ्या भक्तीने,
पराश्रीत केले माझ्या भक्तीने,
शवासम झालो मी कूडलसंगमदेवा.
क्षणभरसुध्दा समाधान दिले नाही माझ्या भक्तीने.
Translated by Shalini Sreeshaila Doddamani
ಶಬ್ದಾರ್ಥಗಳು ಕಂಗಳು = ಕಣ್ಣು; ಕಾಮ = ಬಯಕೆ; ಟೊಣೆ = ; ತಾಮಸ = ಕೆಟ್ಟ; ಹದುಳ = ಕ್ಷೇಮ; ಹೆಣಮೂಳ = ;
ಕನ್ನಡ ವ್ಯಾಖ್ಯಾನ ಹಿಂದಿನ ವಚನದಲ್ಲಿ ಪ್ರಸ್ತಾಪಿಸಿರುವ ಪರಾಶ್ರಯದ ನಿರ್ವೇದವೇ ಈ ವಚನದಲ್ಲಿ-ಇನ್ನೂ ಹಲವು ಸಂಗಡಿಗ ಭಾವರಾಗಗಳ ವಿವರಗಳೊಡನೆ ತೀವ್ರತರವಾಗಿಯೇ ನಿರೂಪಗೊಂಡಿದೆ.
ಭಕ್ತಿಯನ್ನು ನೈಜವಾಗಿ ಆಚರಿಸುವಲ್ಲಿ ತಾಮಸ-ಕಾಮ-ಉದರಂಭರಣ-ಪರಾಶ್ರಯಗಳ ಸೋಂಕು ಲವಲೇಶವೂ ಇರುವುದಿಲ್ಲ. ಆದರೆ ಈ ಅವಗುಣಗಳೆಲ್ಲಾ ಭಕ್ತನೆಂದು ಹೇಳಿಕೊಳ್ಳುವ ತಮ್ಮಲ್ಲಿ ಕಳವಳಕಾರಿಯಾಗುವಷ್ಟು ದಟ್ಟವಾಗಿಯೇ ಇದೆಯೆಂದೂ, ಆ ಕಾರಣದಿಂದಾಗಿಯೇ ತಮಗೆ ನೆಮ್ಮದಿಯಿಲ್ಲವಾಗಿದೆಯೆಂದೂ ಬಸವಣ್ಣನವರು ತಮ್ಮ ಭಕ್ತಿ(ಜೀವನ) ವಿಧಾನವನ್ನು ಕಟುವಾಗಿ ವಿಮರ್ಶಿಸಿಕೊಳ್ಳುತ್ತಿರುವರು :
ಭಕ್ತಿಯನ್ನು ಪರಂಜ್ಯೋತಿಯೆನ್ನುವರು-ಆದರೆ ನನ್ನ ಭಕ್ತಿ ಆತ್ಮದರ್ಶನಕ್ಕೆ ಅಡ್ಡಿಪಡಿಸುವ ತಮೋಪಟಲವನ್ನು ಬೀಸಿದೆ. ಭಕ್ತಿಯನ್ನು ನಿಷ್ಕಾಮವೆನ್ನುವರು-ಆದರೆ ನನ್ನ ಭಕ್ತಿ ಸಂಸಾರ ಕಾಮಾಗ್ನಿಗೆ ನನ್ನನ್ನು ಮುರಿದು ಕಟ್ಟಿಗೆಮಾಡಿ ಸುಟ್ಟುರಿಸುತ್ತಿದೆ. ಭಕ್ತಿಯನ್ನು ಚಿದಾನಂದವೆನ್ನುವರು-ಆದರೆ ನನ್ನ ಭಕ್ತಿ ನನ್ನನ್ನು ಹೊಟ್ಟೆಪಾಡಿಗಾಗಿ ದಿಕ್ಕುಗೆಟ್ಟು ತಿಟ್ಟನೆ ತಿರುಗುವಂತೆ ಮಾಡಿದೆ.ಭಕ್ತಿಯನ್ನು ನಿರಾಲಂಬ ಸತ್ಯವೆನ್ನುವರು-ಆದರೆ ನನ್ನ ಭಕ್ತಿ-ಸಾವನ್ನು ಮುಂದಿಟ್ಟು ಬಂದು ಹೆದರಿಸಿ-ನನ್ನನ್ನು ಪರಾವಲಂಬಿ ಮಾಡಿತು ! ಕೈಗೆ ಬಂದ (ಲಿಂಗ) ಭಕ್ತಿ ಮನಸ್ಸಿಗೆ ಬಾರದೆ ಜಾರಿ ಹೋಯಿತಲ್ಲಾ-ಎಂದು ತಾವಾಚರಿಸುವ ಭಕ್ತಿ ತಮಗಿನ್ನೂ ದಕ್ಕಿಲ್ಲವೆನ್ನುತ್ತ ಖಿನ್ನರಾಗಿರುವರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು