•  
  •  
  •  
  •  
Index   ವಚನ - 273    Search  
 
ಭಕ್ತನ ಭಕ್ತಸ್ಥಲ - ಮನಸ್ಸು
ಏನಿದ್ದರೇನಿದ್ದರೊಲ್ಲದು ನಿಮ್ಮನುಭಾವಕ್ಕೆನ್ನ ಮನವು: ಡಂಬಕನೆಂಬವ ನಾನು ಕಂಡಯ್ಯಾ, ಕೂಡಲಸಂಗನ ಪೂಜಿಸಿ ಮಾನವರಾಸೆ ಬಿಡದಾಗಿ.
Transliteration Ēniddarēniddarolladu nim'manubhāvakkenna manavu: Ḍambakanembava nānu kaṇḍayyā, kūḍalasaṅgana pūjisi mānavarāse biḍadāgi.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Whatever the cause, my heart Avoids to know thy face: Look, Lord, what'an impostor I, That greed should not have left my heart For all the worship I have done Of Kūḍala Saṅg ! Translated by: L M A Menezes, S M Angadi
Hindi Translation चाहे सब कुछ हो, तव अनुभाव नहीं चाहता मेरा मन देखो स्वामी, मैं दंभी हूँ कूडलसंगमदेव को पूजने पर मानव आशा नहीं छूटती ॥ Translated by: Banakara K Gowdappa
Telugu Translation ఏమున్న నేమున్న నొల్లదు నా మది నీ యనుభావమునకు సంగని పూజించి మర్త్యపుటాశ విడని డాంబికుడ నేనయ్యా! Translated by: Dr. Badala Ramaiah
Tamil Translation என்னவிருந்துமென்ன, உம்மை உணரச் செய்யுமோ, இம்மனம் நான் பகட்டினன் கண்டாய் ஐயனே கூடல சங்கம தேவனை வணங்க, உலகப்பற்று விடுமோ, ஐயனே. Translated by: Smt. Kalyani Venkataraman, Chennai
Marathi Translation काही झाले तरी, तुमचा अनुभाव मन मानत नाही. मी दांभिक आहे देवा. कूडलसंगमदेवा, उपासने नंतरही संसाराची आशा सुटत नाही. Translated by Shalini Sreeshaila Doddamani
ಶಬ್ದಾರ್ಥಗಳು ಅನುಭಾವ = ನಿಜದ ಅಥವಾ ಪರಮಾತ್ಮನ ಅನುಭವ ಅಥವಾ ಸಾಕ್ಷತ್ಕಾರ; ಡಂಬಕ = ತೋರಿಕೆಯ ವ್ಯಕ್ತಿ;
ಕನ್ನಡ ವ್ಯಾಖ್ಯಾನ ವ್ಯಕ್ತಿಗತ ಪ್ರತೀಕ್ಷೆಗಳ ಆಧಾರದ ಮೇಲೆ ಮಾನವಸಂಬಂಧಗಳನ್ನು ಕಟ್ಟಿಕೊಳ್ಳಲು ಹೆಣಗುತ್ತ ಶರಣರೊಡನೆ ಶಿವಾನುಭಾವ ಮಾಡುವುದು ಒಂದು ಡಂಬಾಚಾರವಷ್ಟೆ. ಮಾನವರಿಂದ ಪಡೆಯಬಹುದಾದ ಲೌಕಿಕವಾದ ಕೀರ್ತಿ-ಪ್ರತಿಷ್ಠೆ-ಲಾಭಗಳಿಗೂ ಮಿಗಿಲಾದ ಶ್ರೇಯಸ್ಸು-ವ್ಯಕ್ತಿಗೌರವ-ಮುಕ್ತಿಲಾಭಗಳನ್ನು ಶಿವಶರಣರೊಡನೆ ಕಲೆತು ಮಾಡುವ ಶಿವಾನುಭಾವದಿಂದ ಸುಲಭವಾಗಿಯೇ ಪಡೆಯಬಹುದಾದರೂ-ಆ ಮಾರ್ಗದಲ್ಲಿ ಉತ್ಸಾಹಿಸದೆ ಕ್ಷಣಿಕಕ್ಕೆ ಕ್ಷುದ್ರಕ್ಕೆ ಮುಗಿಬೀಳುತ್ತಿರುವ ತಮ್ಮ ಮನೋದೌರ್ಬಲ್ಯವನ್ನು ಬಸವಣ್ಣನವರು ಖಂಡಿಸುತ್ತಿರುವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು