ಒಡೆಯನ ಕಂಡರೆ ಕಳ್ಳನಾಗದಿರಾ, ಮನವೇ,
ಭವದ ಭಾರಿಯ ತಪ್ಪಿಸಿಕೊಂಬರೆ
ನೀನು ನಿಯತನಾಗಿ, ಭಯಭರಿತನಾಗಿ,
ಅಹಂಕಾರಿಯಾಗದೆ ಶರಣೆನ್ನು, ಮನವೇ
ಕೂಡಲಸಂಗನ ಶರಣರಲ್ಲಿ ಭಕ್ತಿಯನೊಲುವರೆ
ಕಿಂಕಿಲನಾಗಿ ಬದುಕು, ಮನವೇ.
Transliteration Oḍeyara kaṇḍare kaḷḷanāgadirā, manavē,
bhavada bāriya tappisikombare
nīnu niyatanāgi, bhayabharitanāgi,
ahaṅkāriyāgade śaraṇennu, manavē
kūḍalasaṅgana śaraṇaralli bhaktiyanoluvare
kiṅkilanāgi baduku, manavē.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 When you have seen the Lord,
Do not behave, O heart,
Like a thief!
If you'd escape
The burden of this world,
Be self-restrained and full of fear,
And, void of pride, O heart,
Do humbly bow!
If you would cherish piety
In Kūḍala Saṅg's Śaraṇās
Live as a humble slave,
O heart !
Translated by: L M A Menezes, S M Angadi
Hindi Translation रे मन, स्वामी को देख चोर मत बन,
भव-भार से मुक्त होना तो संयमी बन,
भयभीत रह, निरहंकारी होकर
रे मन प्रणाम कर
कूडलसंगमदेव के शरणों में
भक्ति रखना हो, तो
रे मन, किंकर बना रखो ॥
Translated by: Banakara K Gowdappa
Telugu Translation స్వాముల జూడ దొంగవలె తలదాచుకొనకుమో మనసా
భవబంధముల తప్పించుకొన నియతుడవై భయభరితుడవై
అహంకారిగాక శరణనుమో మనసా కూడల
సంగని శరణుల భ క్తియను నోముబట్టి
భటుడవై బ్రతుకుమో మనసా!
Translated by: Dr. Badala Ramaiah
Tamil Translation அடியவரைக் காணின் ஓடி ஒளியாய் மனமே!
பிறப்பு முறைமையினின்று விடுபட விரும்பின்
நெறிபிறழா தூய பக்தி நிறைந்தோனாய்
செருக்கற்றுத் தஞ்சம் என்பாய் மனமே
கூடல சங்கனின் அடியாரிடம் பக்தியை நூற்க
தொண்டனாகி வாழ்வாய் மனமே.
Translated by: Smt. Kalyani Venkataraman, Chennai
Marathi Translation
स्वामीच्या समोरी, चोर नको ठरु
खोटे नको करु, अरे मना
भव पाशातून, सुटावयाचे तरी
नियमाने करी, वंदना ती
अहंभाव रहित, होऊनिया शांत
शरण सेवेत, राही मना
कूडलसंगमदेवा! भक्तिचिये पाई
किंकर होऊनी राही, अरे मना
अर्थ - रे मना! परमपिता परमेश्वर तुझ्यासमोर बसूनही तू नाही म्हणतो आहेस. तुला ती जाणीव असूनही तू लपवितो आहेस. तुझे नाटक त्याला समजत नाही का ? याची तुला भीती वा लाज नाही का वाटत? जीवन मुक्त व्हावे असे वाटत असेल तर परमेश्वराला अहंभाव रहित शरण जाऊन नित्यनेमाने वंदन कर. शिवशरणांची सेवा व भक्ति निः स्वार्थ भावनेने कर. स्वतःला सर्वापेक्षा लहान, पामर समजून नम्रतेने, सेवाभावानें जीवन जगणे शिक नाहीतर जन्मजन्माच्या फेऱ्यातून तुला कधीच मुक्तता लाभणार नाही.
Translated by Rajendra Jirobe, Published by V B Patil, Hirabaug, Chembur, Mumbai, 1983
मालकाच्या समोर लपवा-छपवी करु नको मना.
भवबंधनातून सुटण्यासाठी तू नियमीत भयभक्तीने
अहंकाराविना शरण जारे मना. कूडलसंगमदेवाच्या
शरणाची भक्ती मिळण्यासाठी किंकर होऊन रहा रे मना.
Translated by Shalini Sreeshaila Doddamani
ಶಬ್ದಾರ್ಥಗಳು ಕಿಂಕಿಲ = ; ನಿಯತ = ; ಬಾಧೆ = ಕಷ್ಟ; ಭವ = ಜೀವನ;
ಕನ್ನಡ ವ್ಯಾಖ್ಯಾನ ಎಲೆ ಮನವೇ, ಶಿವಶರಣರು ನಿನ್ನ ಕಣ್ಣಿಗೆ ಬಿದ್ದಾಗ-ಕಂಡೂ ಕಾಣದವನಂತೆ ವಂಚಿಸಿ ಹೋಗಬೇಡ ಶರಣು ಎನ್ನು. ನೀನು ಸಂಸಾರಚಕ್ರಕ್ಕೆ ಸಿಕ್ಕಿ ಹುಟ್ಟುಸಾವಿನಲ್ಲಿ ಭ್ರಮಣೆಗೊಳ್ಳದಿರಬೇಕಾದರೆ ನಿಯತ್ತಿನಿಂದ ಶರಣು ಎನ್ನು. ಅಹಂಕಾರಪಡದೆ ಭಯಭಕ್ತಿಯಿಂದ ವಿನಮ್ರವಾಗಿ ಶರಣು ಎನ್ನು. ನೀನು ಭಕ್ತಿವ್ರತವನ್ನು ಕೈಗೊಳ್ಳುವುದೆಂದರೆ ಅದೇನೂ ಕಷ್ಟವಲ್ಲ-ಹೀಗೆ ಶಿವಶರಣರಿಗೆ ಶರಣೆಂದು ಅವರಿಗೆ ಸೇವಕನಾಗಿದ್ದರೆಸಾಕು.
ಆದ್ದೂರಿಯಾದ ಯಜ್ಞಯಾಗಾದಿಗಳನ್ನು ಮಾಡುವುದಕ್ಕಿಂತ ಶರಣರಿಗೆ ಸೇವೆಮಾಡಿಕೊಂಡಿರುವ ಭಕ್ತಿಯೇ ಆತ್ಮೋದ್ಧಾರಕ್ಕೆ ಸುಲಭಮಾರ್ಗವೆಂಬುದು ಬಸವಣ್ಣನವರ ಅಭಿಪ್ರಾಯ-ಜನಸಾಮಾನ್ಯರಿಗೆ ಅದೇ ಅವರು ಕೊಟ್ಟ ಸಂದೇಶ ಕೂಡ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು