•  
  •  
  •  
  •  
Index   ವಚನ - 276    Search  
 
ಭಕ್ತನ ಭಕ್ತಸ್ಥಲ - ಜಪ
ಕೋ[ಟ್ಯ]ನುಕೋಟಿ ಜಪವನು ಮಾಡಿ ಕೋಟಲೆಗೊಳ್ಳಲದೇಕೆ ಮನವೇ? ಕಿಂಚಿತು ಗೀತವೊಂದನಂತಕೋಟಿ ಜಪ! ಜಪವೆಂಬುದೇಕೆ, ಮನವೇ? ಕೂಡಲಸಂಗನ ಶರಣರ ಕಂಡು, ಆಡಿ ಹಾಡಿ ಬದುಕು ಮನವೇ.
Transliteration Kōṭyanukōṭi japavanu māḍi kōṭalegoḷḷaladēke manave? Kin̄citu gītavondanantakōṭi japa! Japavembudēke, manavē? Kūḍalasaṅgana śaraṇara kaṇḍu, āḍi hāḍi baduku manavē.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
Music Courtesy: Album Name - Vachana Dhare Vol -1 Singer : B.S.Mallikarjuna, B.R.Chaya Music : M.S. Maruthi Label : Ashwini audio
English Translation 2 Why should I tell a billion beads, O heart, and bear a million pains? A single short hymn can be worth A billion rosaries! Why tell these beads at all, O heart? Once you have seen Kūḍala Saṅg's Śaraṇās, you may live, O heart, Dancing and singing ! Translated by: L M A Menezes, S M Angadi
Hindi Translation रे मन, कोटि कोटि जप कर कष्ट क्यों उठाता है? किंचित् कीर्तन अनंत कोटि जप है । रे मन, जप क्यों? कूडसंग के शरणों को देख रे मन, नाचता, गाता जीता रह ॥ Translated by: Banakara K Gowdappa
Telugu Translation మంది కోటానుకోట్ల జపముచేసి కొందల మందెద టేటికో మనసా కించిద్గీత మనంత కోటి జపము జపమను బేటికో మనసా కూడల సంగని శరణుల జూచి ఆడిపాడి బ్రతుకుమో మనసా! Translated by: Dr. Badala Ramaiah
Tamil Translation கோடானு கோடி செபம் செய்து துன்பமுறுவது எதற்கோ ஐயனே? நிறையன்பு கெழுமிய சிறுபா எண்ணற்ற செபமாம்! செபம் என்பது எதற்கோ ஐயனே? கூடல சங்கனின் அடியாரைக் கண்டு ஆடிப்பாடி இன்புறுவாய் மனமே. Translated by: Smt. Kalyani Venkataraman, Chennai
Marathi Translation कोटी कोटी जप, प्रयास ते व्यर्थ एक सान गीत, जप काय ? जप ते कशाला, पाही शरणाला विसरोनी देहाला, गीत गाई कूडलसंगमदेवा ! शरणा पाहुनिया धुंद होऊनिया, गात राही अर्थ - कोट्यान कोटी जप करण्याचे कष्ट कशाला घेत आहेस? वेळ, श्रम व पैसा फुकट वाया जाईल. त्याऐवजी एक छोटेसे गीत देहभान विसरुन, तल्लीन होऊन गात राहा. तुझे गीत त्या कोटीकोटी जपासमान आहे. जप करण्याचा अट्टहास का करीत आहेस हे मना ? त्याने काहीही साधले जाणार नाही. म्हणून कूडलसंगमदेवाचे (परमेश्वराचे) शरण म्हणवून घेणाऱ्या शिवभक्तांना पाहताच आंतरिक ओढीने धुंद होऊन, गात राहा. हेच जीवन मुक्त होण्याचा महामार्ग आहे. असे महात्मा बसवेश्वर आपल्या मनाला सांगत आहेत. Translated by Rajendra Jirobe, Published by V B Patil, Hirabaug, Chembur, Mumbai, 1983 कोट्यानुकोटी जप करुन, भव बंधनाच्या चक्रात का सापडतो मना? एक लहान गीत अनंत कोटी जपासम. जप कशाला हवा आहे मना ? कूडलसंगाच्या शरणाला पाहून बोलत गाऊन खेळत जग रे मना. Translated by Shalini Sreeshaila Doddamani
ಶಬ್ದಾರ್ಥಗಳು ಕೋಟಲೆ = ಕಷ್ಟ; ಗೀತ = ಹಾಡು; ಜಪ = ಮಂತ್ರವನ್ನು ವಿಧಿಪೂರ್ವಕವಾಗಿ ಮತ್ತೆ ಮತ್ತೆ ಮೆಲ್ಲಣೆ ಉಚ್ಚರಿಸುವುದು;
ಕನ್ನಡ ವ್ಯಾಖ್ಯಾನ ಭಕ್ತಿಗೀತೆಯೇ ಅನಂತಕೋಟಿ ಜಪ ನಾವು ಮಾಡುವ ಕಾರ್ಯಗಳು ಎಷ್ಟೋ ವೇಳೆ ಆರಂಭದಲ್ಲಿ ಪ್ರಜ್ಞಾಪೂರ್ವಕವಾಗಿ ನಡೆದರೂ ಕ್ರಮೇಣ ಅವು ನಮಗೆ ಗೊತ್ತಿಲ್ಲದಂತೆಯೇ ಯಾಂತ್ರಿಕವಾಗಿ ನಡೆಯಲಾರಂಭಿಸುತ್ತವೆ. ಉದಾಹರಣೆಗೆ ಸೈಕಲ್ ನಡೆಸುವುದನ್ನೇ ತೆಗೆದುಕೊಳ್ಳಿ. ಪ್ರಾರಂಭದಲ್ಲಿ ಸೈಕಲ್ ಕಲಿಯುತ್ತಿರುವಾಗ ಎಷ್ಟೊಂದು ಗಾಬರಿ! ಎಲ್ಲಿ ಬಿದ್ದೇವೋ ಎಂಬ ಭಯ. ಆಗ ನಮ್ಮ ಗಮನವೆಲ್ಲವೂ ಸಂಪೂರ್ಣ ಸೈಕಲ್ ನಡೆಸುವುದರಲ್ಲಿಯೇ ಇರುತ್ತದೆ. ಹೀಗೆ ಅಭ್ಯಾಸ ಮಾಡುತ್ತಾ ಕ್ರಮೇಣ ನಿಪುಣರಾದಾಗ, ನಿರಾಯಾಸವಾಗಿ ಯಾವ ಆತಂಕವೂ ಇಲ್ಲದೆ ನಡೆಸುತ್ತೇವೆ. ಆಗ ನಮಗೆ ಸೈಕಲ್ ಬಗ್ಗೆ ಪರಿವೆಯೇ ಇರುವುದಿಲ್ಲ. ಯಾಂತ್ರಿಕವಾಗಿ ನಮ್ಮ ಕೈಕಾಲುಗಳು ಅದನ್ನು ನಡೆಸುತ್ತಿರುತ್ತವೆ. ನಾವು ನಮ್ಮ ಪಕ್ಕದ ಸವಾರನೊಂದಿಗೆ ಮಾತುಕತೆ ನಡೆಸುತ್ತಾ ಮುಂದುವರಿಯುತ್ತೇವೆ. ಇದರಂತೆಯೇ ನಿತ್ಯವೂ ನಾವು ಮಾಡುವ ಪೂಜೆಯು ಮೊದಮೊದಲು ಶ್ರದ್ಧೆ, ಭಕ್ತಿಗಳಿಂದ ಕೂಡಿದ್ದರೂ ಕ್ರಮೇಣ ಅವೆಲ್ಲಾ ಮಾಯವಾಗುತ್ತವೆ. ‘ಬರಬರ ಭಕ್ತಿಯರೆಯಾಯಿತ್ತು ಕಾಣಿರಣ್ಣಾ; ಮೊದಲ ದಿನ ಹಣೆಮುಟ್ಟಿ, ಮರುದಿನ ಕೈಮುಟ್ಟಿ ಮೂರೆಂಬ ದಿನಕೆ ತೂಕಡಿಕೆ ಕಾಣಿರಣ್ಣಾ! ....’ ಹೀಗೆ ಶ್ರದ್ಧೆ, ಭಕ್ತಿಗಳಿಂದ ಕೂಡಿರದ ಪೂಜೆಯಲ್ಲಿ ಮಾಡುವ ಮಂತ್ರ ಜಪವೂ ಒಂದು ಯಾಂತ್ರಿಕ ಕಾರ್ಯದಂತೆಯೇ ಆಗುತ್ತದೆ. ಬಾಯಿ, ನಾಲಿಗೆಗಳು ಯಾಂತ್ರಿಕವಾಗಿ ಮಂತ್ರ ಜಪಿಸುವ ಕೆಲಸ ಮಾಡುತ್ತಿರುತ್ತವೆ. ಆದರೆ ಮನಸ್ಸು ಮಾತ್ರ ಹಲವು ದಿಕ್ಕುಗಳಿಗೆ ಹಾಯ್ದು ಹಲವು ವಿಷಯಗಳೊಂದಿಗೆ ಹರಿದಾಡುತ್ತಿರುತ್ತದೆ. ಇದನ್ನೇ ಕಬೀರ್ದಾಸರು ಒಂದು ಕಡೆ ಈ ರೀತಿ ಹೇಳಿರುತ್ತಾರೆ. “ಮಾಲಾ ತೋ ಕರ್ ಮೆ ಫಿರೈ, ಜೀಭ್ ಫಿರೈ ಮುಖ್ ಮಾಹಿಂ| ಮನುಆ ತೋ ದಸ್ದಿಸಿ ಫಿರೈ ಯಹ್ ತೊ ಸುಮರಿನ್ ನಾಹಿಂ||” (ಭಾವಾನುವಾದ) ಕರದೊಳು ಮಾಲೆಯು ಮುಖದೊಳು ನಾಲಿಗೆ ತಿರುಗುತಲಿರುವುವು ಕಾಣಾ! ಮನವಾದರೊ ದಶದಿಶಿಗಳ ತಿರುಗುತಲಿರುವುದು ಇದ ಮರೆತಿರುವೆಯೋ ಜಾಣ || ಸರ್ವಜ್ಞ ಕವಿಯೂ ಕೂಡ ಈ ರೀತಿ ನುಡಿದಿರುತ್ತಾನೆ. ಎಣಿಸುತಿರ್ಪುದು ಬಾಯಿ | ಪೋಣಿಸುತಿರ್ಪುದು ಬೆರಳು | ಕ್ಷಣಕೊಮ್ಮೆ ಒಂದನೆಣಸುವನ ಜಪಕೊಂದು ಹಣಿಕೆಯುಂಟೆಂದ ಸರ್ವಜ್ಞ || ಎಣಿಸುತಿರ್ಪುದು ಬೆರಳು | ಗುಣಿಸುತಿರ್ಪುದು ಜಿಹ್ವೆ | ಮನಹೋಗಿ ಹಲವ ನೆನೆದರದು ಹಾಳೂರ | ಶುನಕನಂತಕ್ಕು ಸರ್ವಜ್ಞ || ಈ ಕಾರಣದಿಂದಲೇ ಬಸವಣ್ಣನವರು ‘ಕೋಟ್ಯಾನುಕೋಟಿ ಜಪವನ್ನು ಮಾಡಿ ಕೋಟಲೆಗೊಳ್ಳಲದೇಕೆ ಮನವೇ ....’ ಎನ್ನುತ್ತಿದ್ದಾರೆ. ಜಪದ ಉದ್ದೇಶವಾದರೂ ಮನಸ್ಸನ್ನು ಕೇಂದ್ರೀಕರಿಸುವುದೇ ಆಗಿದೆ. ಕೋಟಿಗಟ್ಟಲೆ ಜಪವನ್ನು ಮಾಡಬೇಕೆಂದೇನೂ ಇಲ್ಲ. ಒಂದು ಪಕ್ಷ ಮಾಡಿದರೂ ಏಕಾಗ್ರಚಿತ್ತದಿಂದ ಮಾಡದೇ ಹೋದರೆ ಅದು ವೃಥಾ ಶ್ರಮ ಹಾಗೂ ಕಾಲಹರಣ. ಇದಕ್ಕೆ ಪರಿಹಾರವೆಂದರೆ ‘ಕಿಂಚಿತ್ತು ಗೀತವೊಂದು ಅನಂತಕೋಟಿ ಜಪ .......’ ಜಪ ಮಾಡುವಾಗ ಹರಿದಾಡುವ ಮನಸ್ಸು ಭಾವ ತುಂಬಿ ಹಾಡುವಾಗ ಬದ್ಧವಾಗಿ ಒಂದು ಕಡೆ ಕೇಂದ್ರಿಕೃತವಾಗುತ್ತದೆ. ಅಂದರೆ ಏಕಾಗ್ರತೆಯನ್ನು ಹೊಂದುತ್ತದೆ. ಈ ಕಾರಣದಿಂದಲೇ ಭಾವಭರಿತರಾಗಿ ಹಾಡುವ ಸಂಗೀತ ಕಲಾಕೋವಿದರಿಗೂ ತನ್ಮಯರಾಗಿ ತದೇಕ ಚಿತ್ತದಿಂದ ಕೇಳುವ ಸಂಗೀತಜ್ಞರಿಗೂ ಹೊರಗಿನ ಪ್ರಪಂಚದ ಅರವೇ ಇರುವುದಿಲ್ಲ. ಸಂಗೀತದ ರಾಗ ಲಯಗಳು ಮನಸ್ಸನ್ನು ಅಷ್ಟೊಂದು ಆಕರ್ಷಿಸುತ್ತವೆ ಹಾಗೂ ಹರ್ಷವನ್ನುಂಟು ಮಾಡುತ್ತವೆ. ಆದ್ದರಿಂದ ದೇವರ ಮುಂದೆ ಭಾವಪೂರ್ಣವಾಗಿ ಭಕ್ತಿಗೆ ಸಂಬಂಧಿಸಿದ ಒಂದು ಹಾಡನ್ನು ಹಾಡುವುದು ಅನಂತ ಕೋಟಿ ಜಪಕ್ಕೆ ಸಮ. - ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.

C-569 

  Mon 06 Jan 2025  

 It seems that this vachan is sung by m venkteshkumar
  Gangadhar Mahajanshetty