ಮನವೇ, ನಿನ್ನ ಜನ್ಮದ ಪರಿಭವವ ಮರೆದೆಯಲ್ಲಾ, ಮನವೇ!
ಲಿಂಗವ ನಂಬು ಕಂಡಾ, ಮನವೇ;
ಜಂಗಮವ ನಂಬು ಕಂಡಾ, ಮನವೇ;
ಕೂಡಲಸಂಗಮದೇವರ ಬಿಡದೆ ಬೆಂಬತ್ತು, ಕಂಡಾ, ಮನವೇ.
Transliteration Manavē, ninna janmada paribhavava maredeyallā, manavē!
Liṅgava nambu kaṇḍā, manavē;
jaṅgamava nambu kaṇḍā, manavē;
kūḍalasaṅgamadēvara biḍade bembattu, kaṇḍā, manavē.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 O heart, you have forgot, my heart,
The cycle of your births!
Look you, O heart, believe in Liṅga :
Look you, believe in Jaṅgama;
Incessantly pursue
Lord Kūḍala Saṅgama, O heart
Translated by: L M A Menezes, S M Angadi
Hindi Translation रे मन, तू अपने जन्मों का परिभव भूल बैठा !
रे मन, लिंगदेव पर श्रद्धा रख।
रे मन, जंगम पर विश्वास रख!
रे मन, कूडलसंगमदेव का सदा अनुसरण कर ॥
Translated by: Banakara K Gowdappa
Telugu Translation మనసా! జన్మావమానమపు డేమఱచితివే,
స్వామిని నమ్ముమో మనసా నీ
స్వామి భక్తుల నమ్ము మో మనసా;
సంగమదేవుని విడక వెన్నంటిచనుమో మనసా!
Translated by: Dr. Badala Ramaiah
Tamil Translation மனமே உன்பிறப்பின் இன்னலை மறந்தாயன்றோ -- மனமே!
இலிங்கத்தை நம்பு, கண்டாய் மனமே!
மெய்யடியாரை நம்பு கண்டாய் மனமே
கூடல சங்கம தேவனை இடையறா தெண்ணுவாய் மனமே.
Translated by: Smt. Kalyani Venkataraman, Chennai
Marathi Translation
विसरलास मना, मान भंग सारे
जन्म जन्म फेरे, कासयासि ?
लिंगावरी ठेव, एक तो विश्वास
तसे जंगमास, वंद्य मानी
कूडलसंगम देवा! चित्ती सदोदीत
त्यात तुझे हीत साठियले
अर्थ – पूर्व जन्म सफल होऊ शकला नाही. मोक्ष मिळू शकला नाही. म्हणून आपला पराभव झाला. हे मना! तु हे विसरुन गेलास का ? आता या जन्मात तरी न विसरता जीवन मुक्त होण्यासाठी, भवचक्र चुकविण्यासाठी परमेश्वर चरणी शरण जा. नित्य नेमाने इष्टलिंग पूजा कर. जंगमसेवेत आपली धनसंपत्ती वेचून टाक. असे महात्मा बसवेश्वर लोककल्याणार्थ जाहिररित्या आपल्याच मनाला सांगत आहेत.
Translated by Rajendra Jirobe, Published by V B Patil, Hirabaug, Chembur, Mumbai, 1983
अरे मना, तुझ्या जन्माचा भवचक्र विसरला मना ?
लिंगदेवावर विश्वास ठेव रे मना !
जंगमावर विश्वास ठेव रे मना !
कूडलसंगमदेवाच्या नियमीत मागे रहा रे मना !
Translated by Shalini Sreeshaila Doddamani
ಶಬ್ದಾರ್ಥಗಳು ಜಂಗಮ = ನಡೆದಾಡುವ ಜೀವವಿರುವ; ಪರಿಭವ = ಸೋಲು;
ಕನ್ನಡ ವ್ಯಾಖ್ಯಾನ ಬಸವಣ್ಣನವರು ತಾವು ಹಿಂದಿನ ಜನ್ಮಗಳಲ್ಲಿ ತಿಳಿಯದೆ ಪಾಪಮಾಡಿ ಪಟ್ಟ ಭಂಗವನ್ನು ಈ ವಚನದಲ್ಲಿ ಸ್ಮರಣೆಗೆ ತಂದುಕೊಂಡು-ಅದರಿಂದ ಪಾರಾಗಬೇಕಾದರೆ ಈಗ ಈ ಜನ್ಮದಲ್ಲಿ ಲಿಂಗಜಂಗಮವನ್ನು ನಂಬಬೇಕೆಂದು ತಮ್ಮ ಮನಸ್ಸಿಗೆ ಬೋಧಿಸುವ ವ್ಯಾಜದಲ್ಲಿ ನಮಗೇ ಬೋಧಿಸುತ್ತಿರುವರು.
ಪ್ರಾಪಂಚಿಕತೆಯ ಕಡೆಗೆ ಮುಖಮಾಡಿ-ಲಿಂಗ ಜಂಗಮಕ್ಕೆ ವಿಮುಖವಾಗಿ-ಯಮನ ಬೆನ್ನು ಹತ್ತುವುದು ಬೇಡ, ಪ್ರಾಪಂಚಿಕತೆಯ ಕಡೆಗೆ ಬೆನ್ನು ತಿರುಗಿಸಿ-ಲಿಂಗಜಂಗಮಕ್ಕೆ ಸಮ್ಮುಖವಾಗಿ-ಇವೆರಡರ ಏಕಮೂರ್ತಿಯಾದ ಶಿವನ ಬೆನ್ನುಹತ್ತು ಎಂದು ರಮಿಸುತ್ತಿರುವರು ತಮ್ಮ ಮನವನ್ನು ಮತ್ತು ನಮ್ಮ ಮನವನ್ನು-ಈ ವಚನ ಹಾಡುತ್ತ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು