•  
  •  
  •  
  •  
Index   ವಚನ - 278    Search  
 
ಭಕ್ತನ ಭಕ್ತಸ್ಥಲ - ರಕ್ಷಕ
ಸುರರ ಬೇಡಿದಡಿಲ್ಲ, ನರರ ಬೇಡಿದಡಿಲ್ಲ, ಬರಿದೆ ಧೃತಿಗೆಡಬೇಡ, ಮನವೇ; ಆರನಾದಡೆಯೂ ಬೇಡಿ ಬೇಡಿ ಬರಿದೆ ಧೃತಿಗೆಡಬೇಡ ಮನವೇ. ಕೂಡಲಸಂಗಮದೇವನಲ್ಲದೆ, ಆರ ಬೇಡಿದಡಿಲ್ಲ, ಮನವೇ.
Transliteration Surara bēḍidaḍilla, narara bēḍidaḍilla, baride dhr̥tigeḍabēḍa, manavē; āranādaḍeyū bēḍi bēḍi baride dhr̥tigeḍabēḍa manavē. Kūḍalasaṅgamadēvanallade, āra bēḍidaḍilla, manavē.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Should you beg of the gods, It is no use; Should you of mortals beg, It is no use; Do not, begging of one or other, lose Your courage, heart! To beg of any but Lord Kūḍala Saṅgama, It is no use, O heart Translated by: L M A Menezes, S M Angadi
Hindi Translation देवों से माँगने से नहीं, मानवों से माँगने से नहीं, व्यर्थ धृतिहीन मत हो, रे मन, जिस किसी से माँग माँग कर व्यर्थ धृतिहीन मत हो, रे मन, कूडलसंगमदेव के अतिरिक्त किसीसे माँगने पर भी नहीं ॥ Translated by: Banakara K Gowdappa
Telugu Translation సురల వేడిన లేదు నరులు వేడిన రాదు రిక్తధృతి చెఱచుకొనకుమో మనసా వేడకు వేడకు మెవరినీ! ధృతి వీడకుమో మనసా; సంగమదేవుని తప్ప, ఎవరి నడిగినా ఏమీరాదు మనసా! Translated by: Dr. Badala Ramaiah
Tamil Translation உம்பரை வேண்டினுமிலை, மாந்தரை வேண்டினுமிலை வரிதே உறுதி கெடற்க மனமே. யாரையாயினும் வேண்டி வேண்டி வரிதே உறுதி கெடற்க மனமே கூடல சங்கம தேவனை யன்றி யாரை வேண்டினு மில்லை மனமே. Translated by: Smt. Kalyani Venkataraman, Chennai
Marathi Translation मिळणार नाही, मागुनी देवासी मागूनी नरासी , न मिळे ते अन्य कोणासही, व्यर्थ मागोनीया धैर्य रक्चावया एैसे होय कूडलसंगमदेवा! कोण तुजविण मिळते न जाण, मागुनिया अर्थ - मानवाला मागितल्याने मिळणार नाही. वा देवीदेवतांनाही काही मागून मिळणार नाही. नर-नारी, देव-देवता वा कोणीही असो त्याना मागूनही मिळाले नाही म्हणून हिम्मत खचू देवू नकोस परमेश्वराशिवाय अन्य कोणालाही काही मागू नका. स्वाभिमान सोडू नको . ज्यांचा स्वतःवर विश्वास आहे तोच परमेश्वरावर विश्वास ठेऊ शकेल. Translated by Rajendra Jirobe, Published by V B Patil, Hirabaug, Chembur, Mumbai, 1983 देवातांकडे मागून मिळत नाही. मानवाकडे मागून मिळत नाही. व्यर्थ धैर्य गमावू नको रे मना ! त्यांच्याकडे मागून मागून धैर्य सोडू नको रे मना ! कूडलसंगमदेवाविना कोणा कडूनही मागून मिळणार नाही रे मना ! Translated by Shalini Sreeshaila Doddamani
ಶಬ್ದಾರ್ಥಗಳು ಧೃತಿ = ಧೈರ್ಯ; ನರ = ಮನುಷ್ಯ; ಸುರ = ದೇವತೆ;
ಕನ್ನಡ ವ್ಯಾಖ್ಯಾನ ನರರು ಲೌಕಿಕ ಮಾನ-ವರಮಾನಗಳನ್ನು, ದೇವತೆಗಳು ಪಾರಲೌಕಿಕ ಫಲಪದವಿಗಳನ್ನು ಕೊಡಬಲ್ಲರು ಸಾವು ಇದನ್ನೆಲ್ಲ ಒಂದು ಕ್ಲುಪ್ತವಾದ ಕಾಲದಲ್ಲಿ ಇಲ್ಲವೆನಿಸಿಬಿಡುವುದು. ಆದ್ದರಿಂದ ಇಂದಿಗೆಂತೆಂದು ನಾಳೆಗೆಂತೆಂದು ನರರನ್ನಾಗಲಿ ದೇವತೆಗಳನ್ನಾಗಲಿ ಬೇಡಿ ಬೇಡಿ ಹತಾಶನಾಗಬೇಡ. ನರರಿಗೂ ದೇವತೆಗಳಿಗೂ ಸಾವಿಗೂ ಮೀರಿದ ಜಗನ್ನಾಥನನ್ನು ದೇವಾಧಿದೇವನನ್ನು ಕಾಲಸಂಹರ ಶಿವನನ್ನು ಬೇಡು-ಹುಟ್ಟಿಲ್ಲ ಹಲವರಿಕೆಯಿಲ್ಲ ಸಾವಿಲ್ಲ ಭಯವಿಲ್ಲ.ಮತ್ತೆ ಯಾರನ್ನು ಬೇಡಿದರೂ ಈ ಆತ್ಮಾನಂದದ ಲಭ್ಯವಿಲ್ಲ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು