ಹೃದಯದ ಕತ್ತರಿ: ತುದಿನಾಲಗೆಯ ಬೆಲ್ಲೇಂ ಬೋ!
ಆಡಿಹೆನು ಏಂ ಬೋ, ಹಾಡಿಹೆನು ಏಂ ಬೋ!
ನಿಚ್ಚ ನಿಚ್ಚ ಶಿವರಾತ್ರಿಯ ಮಾಡಿಹೆ[ನೇಂ] ಬೋ!
ಆನು ಎನ್ನಂತೆ, ಮನ ಮನದಂತೆ,
ಕೂಡಲಸಂಗಮದೇವ: ತಾನು ತನ್ನಂತೆ!
Transliteration Hr̥dayada kattari: Tudinālageya bellēṁ bhō!
Āḍ'̔ihenu ēṁ bhō, hāḍ'̔ihenu ēṁ bhō!
Nicca nicca śivarātriya māḍ'̔ihenu ēṁ bhō!
Ānu ennante, mana manadante,
kūḍalasaṅgamadēva: Tānu tannante!
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 A dagger in the heart, and honey on the tongue
What can this mean?
And this, too, that I sing and dance?
And that I celebrate
The Night of Śiva day after day?
I am but what I am; the heart
Is as the heart; and Lord Kūḍala Saṅgama
Is what He is!
Translated by: L M A Menezes, S M Angadi
Hindi Translation हृदय में छुरी, जिह्वा पर मधु,
मैं नाचता हूँ, गाता हूँ,
प्रति नित्य शिवरात्रि मनाता हूँ,
मैं अपनी भाँती हूँ, मन, मन की भाँती है
कूडलसंगमदेव स्वयं अपनी भाँती है ॥
Translated by: Banakara K Gowdappa
Telugu Translation ఎదలో కత్తెర నాలుక పై చక్కెర:
ఆడిననేమీ పాడిననేమీ!
దినదినము శివరాత్రి చేసిన నేమీ!
నేను నేనే! మనసు మనసే!
సంగయ్య తాను తానే
Translated by: Dr. Badala Ramaiah
Tamil Translation இதயம் கத்தரி, நுனிதா வெல்லம் என்பதோ!
ஆடுவேனென்பதோ, பாடுவேனென்பதோ!
நாடோறும் இலிங்கத்துட னொன்றினே னென்பதோ!
நான் என்னைப் போல மனம் மனத்தைப் போல
கூடல சங்கம தேவனும் தன்னைப் போல.
Translated by: Smt. Kalyani Venkataraman, Chennai
Marathi Translation
हृदयात कातरी, गोडवे तोंडात
बेभान होण्यात, व्यर्थ होय
शिवरात्री व्रत, कासयासि धरणे
गुणगान करणे, व्यर्थ होय
'मनापरी मन', माझ्यापरी मीच'
तुझ्यापरी तूच, व्यर्थ अन्य
कूडलसंगमदेवा! यासि साक्ष तूच
नको अन्य उपाय, व्यर्थ होय
अर्थ - हृदयात कात्री ठेवून तोंडाने मधुरभाष्य qaकरणे याचा काय उपयोग? अशांनी परमेश्वराचे नामस्मरण व गुणगान करून, गाऊन, देहभान विसरुन काही उपयोग नाही. अशांनी नित्य नित्य शिवरात्र व्रत करुनहीं सारखेच न करूनही सारखेच. उलट हे सर्व त्यांचे दंभाचार समजावे. कारण 'मन' मनच आहे. त्यातील 'मी' मीच आहे. म्हणून माझ्यातला 'मी' काढून 'मन' निर्विकार केल्यास तुझ्यातला 'तू' शी ते एकरूप होऊ शकेल. नाहीतर हे सर्व वेगवेगळे राहतील. शेवटपर्यंतही व शेवटी देखील एकत्र येऊ शकणार नाहीत.
Translated by Rajendra Jirobe, Published by V B Patil, Hirabaug, Chembur, Mumbai, 1983
हृदयात कात्री, बोलणे गोड, नाचले तरी काय?
गायले तरी काय होणार?
प्रति दिनी शिवरात्री केल्याने काय होणार?
मी `मी` आहे मन `मनासारखे` आहे.
कूडलसंगमदेवा तुम्ही `तुम्हासारखे`.
Translated by Shalini Sreeshaila Doddamani
ಶಬ್ದಾರ್ಥಗಳು ಏಂಭೋ = ; ಕತ್ತರಿ = ಬೇರ್ಪಡಿಸುವ ಸಾಧನ;
ಕನ್ನಡ ವ್ಯಾಖ್ಯಾನ ಶಿವನ ಮುಂದೆ ಗೀತ ಹಾಡಿ ಏನು ಮಾಡಿದಂತಾಯಿತು, ನೃತ್ಯ ಮಾಡಿಯೂ ಏನು ಮಾಡಿದಂತಾಯಿತು, ನಿತ್ಯ ಶಿವರಾತ್ರಿ ಮಾಡಿ ತಾನೇ ಏನು ಸಾಧಿಸಿದಂತಾಯಿತು. ಈ ಗೀತ-ನೃತ್ಯಗಳಿಂದ ಅಹೋರಾತ್ರಿ ಶಿವಪೂಜೆಯನ್ನು ಮಾಡಿದರೇನಾಯಿತು-ನನ್ನ ಮನಸ್ಸು ಜಂಗಮದ್ರೋಹವನ್ನೇ ಚಿಂತಿಸುತ್ತಿದೆ, ಹೀಗೆ ಹೃದಯದಲ್ಲಿ ಕತ್ತರಿಯನ್ನು ಬಚ್ಚಿಟ್ಟುಕೊಂಡು-ಹೊರಗೆ ಸಿಹಿಯಾದ ಮಾತುಗಳನ್ನಾಡುವ ಠಕ್ಕನಂತಾದೆ ನಾನು ನನ್ನ ಪಾಡಿಗೆ ನಾನು, ಮನದ ಪಾಡಿಗೆ ಮನವಾದರೆ-ಶಿವ ತನ್ನ ಪಾಡಿಗೆ ತಾನಿರುವನು-ಒಲಿಯನು,
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು