ಒಳ್ಳಿಯ ಮೈಲಾರನ ಒಳಗೆಲ್ಲ ಸಣಬು:
ಹೊರಗಣ ಬಣ್ಣ ಕರ ಲೇಸಾಯಿತ್ತಯ್ಯಾ!
ಶ್ವಾನನ ನಿದ್ರೆ; ಅಜ್ಞಾನಿಯ ತಪದಂತೆ
ಆಯಿತ್ತಯ್ಯಾ ಎನ್ನ ಮತಿ, ಕೂಡಲಸಂಗಮದೇವಾ.
Transliteration Oḷḷiya mailārana oḷagella saṇabu:
Horagaṇa baṇṇa kara lēsāyittayyā!
Śvānana nidre; ajñāniya tapadante
āyittayyā enna mati, kūḍalasaṅgamadēvā.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Mailāra is beautiful to see:
But filled with straw within.
How well the outer hue
Becomes him, Lord!
My reason has become
As is a dog's sleep, or
The penance of a fool,
O Kūḍala Saṅgama Lord !
Translated by: L M A Menezes, S M Angadi
Hindi Translation सुंदर मैलार के भीतर
सन् का वेश है,
बाहरी रंग बहुत सुंदर है,
श्वान-निद्रावत अज्ञानी के तप वत
मेरी मति है, कूडलसंगमदेव॥
Translated by: Banakara K Gowdappa
Telugu Translation మైలారుని మేనెల్ల మెరుగు! లోన టొల్లు;
పై పై మెరుగులు కడులేసయ్యా
కుక్కనిద్ర అజ్ఞాని తపమువలె
నా బుద్ది అయ్యెనయ్యా సంగమదేవా!
Translated by: Dr. Badala Ramaiah
Tamil Translation அழகுமிளிரும் மயிலாறு இலிங்கமனைய உள்ளெலாம் நார்,
புறத்திலே வண்ணம் பொலி வுற்றதையனே
நாயின் உறக்கம், அஞ்ஞானியின் தவம் போல
ஆயிற்றையனே என் அறிவு, கூடல சங்கம தேவனே.
Translated by: Smt. Kalyani Venkataraman, Chennai
Marathi Translation
बाहेरुन सुंदर मैलार बाहुलीच्या आत सगळीकडे ताग.
बाहेरचा रंग चमकणारा आहे. कुत्र्याच्या झोपेसम,
अज्ञानीच्या जपासम, झाली माझी
मती कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಒಳ್ಳಿಹ = ; ಕರ = ಕೈ; ಮತಿ = ಬುದ್ದಿ; ಲೇಸು = ಒಳ್ಳೆಯದು; ಶ್ವಾನ = ನಾಯಿ; ಸಣಬು = ;
ಕನ್ನಡ ವ್ಯಾಖ್ಯಾನ ನಾನು ಮೇಲ್ನೋಟಕ್ಕೆ ಧ್ಯಾನಮಗ್ನನಂತೆ ಕಂಡರೂ-ಅಂತರಾಳದಲ್ಲಿ ಸತ್ವವಿಲ್ಲ. ಕಂಗೊಳಿಸುವ ಮೈಲಾರದೇವರ ಡಿಂಬದಂತೆ-ಮೇಲೆ ಬಣ್ಣದ ಡಂಬು, ಒಳಗಿರುವುದೆಲ್ಲಾ ಸಣಬುನಾರು, ನಾಯನಿದ್ರೆಯಲ್ಲಿ ಗಾಢತೆಯಿಲ್ಲ. ಅಜ್ಞಾನಿಯ ತಪಸ್ಸಿನಲ್ಲಿ ಮಹಿಮೆಯಿಲ್ಲ, ನನ್ನ ಭಕ್ತಿಯಲ್ಲಿ ನಿಜವಿಲ್ಲ-ಎಂದು ಬಸವಣ್ಣನವರು ತಮ್ಮ ಅಹಂಕಾರನಿರಸನ ಮಾಡಿಕೊಳ್ಳುತ್ತಿರುವರು.
ಜನರು ತಮ್ಮನ್ನು ಭಕ್ತಿಭಂಡಾರಿ ಎಂದು ಮುಂತಾಗಿ ಏರಿಸಿ ನುಡಿದು ಮನ್ನಿಸಿದ ಹಿನ್ನೆಲೆಯಲ್ಲಿ ತಮ್ಮ ಈ ವಿಧವಾದ ನಿರಾಕರಣೆ ಬಸವಣ್ಣನವರಿಗೆ ಅವಶ್ಯಕವೆನಿಸಿತು ಮೊತ್ತಮೊದಲಿಗೆ ತಾನೊಬ್ಬ ಸಾಮಾನ್ಯ ಭಕ್ತನೂ ಅಲ್ಲ-ತೋರಿಕೆಯ ಭಕ್ತ, ನನಗೇಕೆ ಮನ್ನಣೆಯೆಂದು ತಮ್ಮ ವಿನಯವನ್ನೇ ಈ ವಚನದಲ್ಲಿ ಮೆರೆದಿರುವರು.
ಶಂಕರದಾಸಿಮಯ್ಯನು ಕಲ್ಯಾಣದಿಂದ ನವಿಲೆಗೆ ಮರಳುವ ದಾರಿಯಲ್ಲಿ ಪೆಂಬೇರವೆಂಬ ಊರಿನಲ್ಲಿ ಶಿವನ ಪರಿವಾರದೇವತೆಯಾದ ಮೈಲಾರನ ದೇವಾಲಯವನ್ನು ಕಂಡಂತೆ ಹರಿಹರನು ತನ್ನ ಶಂಕರ ದಾಸಿಮಯ್ಯನ ರಗಳೆಯಲ್ಲಿ ಬರೆದಿರುವನು. ಆ ದೇವರು ಕೊಡೆ ಹಿಡಿದು ನಿಂತಿರುವ ಭಂಗಿಯಲ್ಲಿದ್ದನೆಂದೂ ತಿಳಿಯಬರುವುದು. ಮೈಲಾರನ ಪ್ರಸಿದ್ದಭಕ್ತರಾದ ಗೊರವಯ್ಯಗಳು ಮತ್ತು ಅವರ ಪೂಜಾಕ್ರಮವನ್ನು ಕುರಿತ ಒಂದಂಶ ಬಸವಣ್ಣನವರ 570ನೇ ವಚನದಲ್ಲಿ ಪ್ರಸ್ತಾಪಿಸಲ್ಪಟ್ಟಿದೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು