•  
  •  
  •  
  •  
Index   ವಚನ - 284    Search  
 
ಭಕ್ತನ ಭಕ್ತಸ್ಥಲ - ಭಾವಶುದ್ದಿ
ಕೆಲಕ್ಕೆ ಶುದ್ಧನಾದೆನಲ್ಲದೆ, ಎನ್ನ ಮನಕ್ಕೆ ಶುದ್ಧನಾಗೆನೇಕಯ್ಯಾ? ಕೈಯ ಮುಟ್ಟಿ ಪೂಜಿಸುವರೆ, ಎನ್ನ ಕೈ ಶುದ್ಧವಲ್ಲವಯ್ಯಾ; ಮನಮುಟ್ಟಿ ಪೂಜಿಸುವರೆ; ಎನ್ನ ಮನ ಶುದ್ಧವಲ್ಲವಯ್ಯಾ. ಭಾವ ಶುದ್ಧವಾದೊಡೆ, ಕೂಡಲಸಂಗಯ್ಯನು ʼಇತ್ತ ಬಾʼ ಎಂದೆತ್ತಿಕೊಳ್ಳನೇಕಯ್ಯಾ?
Transliteration Kelakke śud'dhanādenallade, enna manakke śud'dhanāgenēkayyā? Kaiya muṭṭi pūjisuvare, enna kai śud'dhavallavayyā; manamuṭṭi pūjisuvare; enna mana śud'dhavallavayyā. Bhāva śud'dhavādoḍe, kūḍalasaṅgayyanu ʼitta bāʼ endettikoḷḷanēkayyā?
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Pure to the outward view, why am I not Pure in my heart? Worshipping with the hands, My hands are far from pure; Worshipping with my mind, My mind is far from pure. If only my will is pure, will not Kūḍala Saṅg take me up and say, Come hither, Come !' Translated by: L M A Menezes, S M Angadi
Hindi Translation बाहर से शुद्ध हूँ, अपने मन से शुद्ध नहीं हूँ क्यों? हाथ से पूजना चाहूँ, तो मेरा हाथ शुद्ध नहीं, मन से पूजना चाहूँ, तो मेरा मन शुद्ध नहीं, भाव शुद्ध हो, तो कूडलसंगमदेव ‘यहाँ आ’ कहकर क्यों न उठायेंगे? Translated by: Banakara K Gowdappa
Telugu Translation పైకి శుచినే గాని భావము శుచిలేదయ్యా? చేతులార పూజింతు నందునా చేతులు శుచిగావయ్యా! మనసార పూజింపతలతునా మనసు శుచిగాదయ్యా! చిత్తశుద్ధి గల్గిన శివుడె ‘‘రారా’’ యని యెత్తుకొనుండునే Translated by: Dr. Badala Ramaiah
Tamil Translation பிறருக்குத் தூயோனானேனன்றி என் மனத்திற்குத் தூயோனல்ல, ஏனையனே! கைத்தொட்டுத் தூவித் தொழுங்கால் என் கையிலே தூய்மையிலை மனந்தொட்டுத் தூவித் தொழுங்கால், என் மனதிலே தூய்மையிலை மனத்தின் எண்ணங்கள் தூய்மையுறின், கூடல சங்கமன் “இங்கே வா” என ஏன் அழையானையனே? Translated by: Smt. Kalyani Venkataraman, Chennai
Marathi Translation जरी सर्व लोक, म्हणीती सज्जन परी माझे मन शुद्ध नाही स्वहस्ते करावे, म्हणतो पूजन परि हात घाण, काय करू पवित्र मनाने करावे पूजन परी शुद्ध मन, नाही देवा कूडलसंगमदेवा! मिठी मी मारीन शुद्ध माझे मन, करोनिया अर्थ - लोकाच्या दृष्टीनें शुद्ध ठरून चालणार नाही. कारण भक्ती मार्गात लोकासाठी शुद्ध न होता आपले मन शुद्ध व्हावयास हवे. हाताने पूजा करण्यापूर्वी हात शुद्ध असावेत. अर्थात हात दुसऱ्यांचे वाईट करण्यात गुंतलेले नसावेत. अंतर मनाने पूजा करण्यापूर्वी प्रथम मन शुद्ध ठेवावे. त्यात कसलाही हेतू, आशा, इच्छा व अपेक्षा असू नये. निरहंकारी मनानेच खरी पूजा संभवते म्हणून भक्ति मार्गात सर्वप्रथम भाव शुद्ध ठेवावा. तरच आचार विचार शुद्ध होतील. शेवटी परमेश्वराशी ऐक्य साधू शकाल. Translated by Rajendra Jirobe, Published by V B Patil, Hirabaug, Chembur, Mumbai, 1983 दुसऱ्यांच्या दृष्टीने मी शुध्द आहे. माझ्या मनाच्या दृष्टीने मी शुध्द का नाही? हाताने पूजा करावी म्हणतो पण हात शुध्द नाही. मनाने पूजा करावी म्हणतो पण मन शुध्द नाही. भाव शुध्द झाला तर कूडलसंगमदेव जवळ बोलावून घेणार नाही का ? Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಅಕ್ಕಪಕ್ಕದವರು ನೋಡಲು-ತಾನೊಬ್ಬ ಸದಾಚಾರಿಯಂತೆ ಕಲ್ಪನೆ ಹುಟ್ಟಿಸುವನು ಡಂಭಾಚಾರ ದವನು-ತನ್ನ ಪೂಜೆ ಧ್ಯಾನ ಮುಂತಾದ ನಿತ್ಯ ಕರ್ಮಗಳಿಂದ. ಹೀಗೆ ಹೊರನೋಟಕ್ಕೆ ಅವನು ಸ್ನಾನಮಾಡಿ ವಿಭೂತಿ ರುದ್ರಾಕ್ಷಿ ಧರಿಸಿ ಶುದ್ಧನಂತೆ ಕಂಡರೂ-ಮನಸ್ಸಿನಲ್ಲಿ ಕಾಮ ಕ್ರೋಧ ದ್ವೇಷಾಸೂಯಗಳನ್ನಿಟ್ಟುಕೊಂಡು ತುಂಬ ಕೊಳಕಾಗಿರುವನು. ಅವನು ದೇವರನ್ನು ಕೈಯಿಂದ ಪೂಜಿಸಲು ಅವನ ಕೈ ಶುದ್ಧವಿಲ್ಲ-ಯಾಚನೆ ಪರದ್ರವ್ಯಾಪಹರಣ ಹಿಂಸೆಗೆ ಅದು ಪ್ರತಿನಿತ್ಯ ಬಳಕೆಯಾಗುತ್ತಿರುವುದು, ಮಾನಸವಾಗಿ ಪೂಜಿಸಲು ಅವನ ಮನಸ್ಸು ಶುದ್ದವಿಲ್ಲ-ಆಶೆ ಭಯ ಸಂಶಯಗಳ ಕೆಸರಲ್ಲಿ ಅದ್ದಿ ಅದು ಕಲುಷಿತವಾಗಿರುವುದು. ದೇವರನ್ನು ಪೂಜಿಸಿ ಒಲಿಸಿಕೊಳ್ಳಬೇಕೆಂಬವನು ಅಂತರಂಗದ ಆಳದಲ್ಲಿರುವ ಭಾವಸ್ಥಾನದಿಂದ ಹಿಡಿದು ಮಧ್ಯಂತರದ(ಮನ ಮುಂತಾದ) ಅಂತಃಕರಣದಲ್ಲಿ ಮತ್ತು ಬಹಿರಂಗದ ಕೈ ಮುಂತಾದ ಕಮರ್ಮೇಂದ್ರಿಯ ಸ್ಥಾನದಲ್ಲಿ ಶುದ್ಧವಾಗಿರಬೇಕು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು