•  
  •  
  •  
  •  
Index   ವಚನ - 285    Search  
 
ಭಕ್ತನ ಭಕ್ತಸ್ಥಲ - ಭವಿ-ಭಕ್ತ
ಕುಲಮದಕ್ಕೆ ಹೋರಿ ಜಂಗಮ ಭೇದವ ಮಾಡುವೆ: ಫಲವೇನು? ನಿತ್ಯ ಲಿಂಗಾರ್ಚನೆ ಪ್ರಾಯಶ್ಚಿತ್ತ! ಛಲಮದಕ್ಕೆ ಹೋರಿ ಲಿಂಗಭೇದವ ಮಾಡುವೆ: ಜಂಗುಳಿಯ ಕಾವ ಗೋವ ಹಲವು ಹಸುವ ನಿವಾರಿಸುವಂತೆ! ತನು ಭಕ್ತನಾಯಿತ್ತು; ಎನ್ನ ಮನ ಭವಿ, ಕೂಡಲಸಂಗಮದೇವಾ.
Transliteration Kulamadakke hōri jaṅgamabhēdava māḍuve: Phalavēnu? Nityaliṅgārcane prāyaścitta! Chalamadakke hōri liṅgabhēdava māḍuve: Jaṅguḷiya kāva gōva halavu paśuva nivārisuvante! Tanu bhaktanāyittu; enna mana bhavi, kūḍalasaṅgamadēvā.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Fighting for pride of clan, I make a difference Between Jaṅgama and Jaṅgama. What is the fruit? My dialy Liṅga-worship has become An expaiting rite! Fighting for stubborn pride, I make a difference Between Liṅga and Liṅga : Even as a herdsman tending his herd Picks out among the several cows! My body has become a bhakta; but My mind's a miscreant still O Kūḍala Saṅgama Lord! Translated by: L M A Menezes, S M Angadi
Hindi Translation जाति-मद हेतु लड़कर जंगम भेद करता हूँ क्या प्रयोजन है? नित्य का लिंगार्चन प्रायश्चित्त है! दुर्दांत मद हेतु लडकर लिंग भेद करता हूँ, जैसे चरवाहा पशु-समूह में कुछ गायों को पृथक रखता है! मेरा तन भक्त है, मन भवि ,कूडलसंगमदेव ॥ Translated by: Banakara K Gowdappa
Telugu Translation కులమదమున బోరి జంగమ భేదము సేతు ఫలమేమి? నిత్యలింగార్చన ప్రాయశ్చిత్తమగు,! ఛలమదమున బోరి లింగభేదము సేతు మందనుగాయు గొల్లడు పశువుల కొన్ని నివాళించినట్లే! తనువు భక్తుడై పోవ! మనసు భవియయ్యె! కూడల సంగమదేవా! Translated by: Dr. Badala Ramaiah
Tamil Translation குலம் கொள்கைக்குப் போராடி அடியார் வேறுபாடு செய்வேன் பயனென்ன? நாடோறும் தூவித்தொழுவது கழுவாய் வேற்று நெறிக்குப் போராடி இலிங்க வேறுபாடு செய்வேன் ஆனிரைமேய்க்கு மிடையன் மேய்த்தலிற் விகற்பமுறுவதோ? உடல் பக்தனாக, மனம் வாழ்விலுழல்கிறது கூடல சங்கம தேவனே. Translated by: Smt. Kalyani Venkataraman, Chennai
Marathi Translation कुलमदग्रस्त होऊन जंगमभेद करता फल काय त्याचे ? नित्य लिंगार्चन प्रायश्चित आहे. दुराग्रही होऊन लिंगभेद करतात. गुराख्याने गायीच्या कळपातून काही गायी वेगळ्या केल्यासम माझी तनु भक्त झाली पण मन संसारी कूडलसंगमदेवा. Translated by Shalini Sreeshaila Doddamani
Urdu Translation تم جنم لےکےاونچےطبقےمیں نازکیوں کررہےہوہستی پر اورکیوں امتیازکرتے ہو اس جہاں کے ہرایک جنگم میں تم کواس کی خَبرنہیں شاید نازسےفخرسےتکبّرسے تم جوکرتےہولِنگ کی پُوجا اس کوہوتی ہےبس پشیمانی لِنگ اورلِنگ میںتمیزنہ ہو کبھی دیکھا ہےتم نےچرواہا بھولتا ہے کسی مویشی کو تن بھگت ہوں تودل بھوئی نہ رہیں کوڈلا سنگمیش کہتے ہیں Translated by: Hameed Almas
ಶಬ್ದಾರ್ಥಗಳು ಅರ್ಚನೆ = ಪೂಜೆ; ಕಾವ = ; ಜಂಗಮ = ನಡೆದಾಡುವ ಜೀವವಿರುವ; ಜಂಗುಳಿ = ಸಮೂಹ; ಪ್ರಾಯಶ್ಚಿತ್ತ = ತಪ್ಪಿನಿಂದಾದ ಶಿಕ್ಷೆ; ಮದ = ಸೊಕ್ಕು;
ಕನ್ನಡ ವ್ಯಾಖ್ಯಾನ ಬಸವಣ್ಣನವರು ವೈದಿಕ ಧರ್ಮದಲ್ಲಿದ್ದ ಬ್ರಾಹ್ಮಣಾದಿ ವರ್ಣವ್ಯವಸ್ಥೆಯನ್ನು ಧಿಕ್ಕರಿಸಿ ಬಂದು ಶಿವ ಧರ್ಮಪಂಥಕ್ಕೆ ಸೇರಿದವರು. ಅಂಥವರು ಮರಳಿ ಉಚ್ಚಜಾತಿಯಿಂದ ಜಂಗಮವನ್ನು ಗುರುತಿಸುವ ತಪ್ಪು ಮಾಡಬಯಸಲಿಲ್ಲ. ಬದಲಾಗಿ-ಯಾರು ತಮ್ಮ ಆಧ್ಯಾತ್ಮಿಕ ಮಹಂತಿಕೆಯಿಂದ ಪರಮಪೂಜ್ಯವಾಗಿರುವರೋ ಅಂಥ ಪರಿವ್ರಾಜಕ ಸಾಧು ಸಂತ ಮಹನೀಯರೆಲ್ಲಾ ಜಂಗಮರೆಂದು ಘೋಷಿಸಿದರು. ಈ ಘೋಷಣೆಗೆ ವಿರುದ್ಧವಾದ ಆಚರಣೆಯುಳ್ಳವರು ಮಾಡುವ ಲಿಂಗಾರ್ಚನೆ-ಅವರು ಮಾಡುವ ಜಂಗಮದ್ರೋಹಕ್ಕೆ ಕೇವಲ ಪ್ರಾಯಶ್ಚಿತ್ತರೂಪವಾಗುವುದೆಂದು ಎಚ್ಚರಿಸಿದರು. ಮತ್ತು ಲಿಂಗವನ್ನು ಎದೆಯ ಮೇಲಿರುವ ಇಷ್ಟಲಿಂಗವೆಂದು, ದೇವಾಲಯದಲ್ಲಿರುವ ಶಿವಲಿಂಗವೆಂದು ತರತಮ ಮಾಡುವ ಸಂಪ್ರದಾಯವನ್ನು ಅಧಿಕಪ್ರಸಂಗವೆಂದು ಅಲ್ಲಗಳೆದರು-ದನಗಾಹಿಯು ತಾನು ಕಾಯುವ ದನಗಳನ್ನು-ಇವು ಸಾಮಾನ್ಯರದೆಂದು, ಇದು ವಿಶಿಷ್ಟರದೆಂದು ಬಗೆಯುವುದು ಅಧಿಕಪ್ರಸಂಗವಲ್ಲದೆ ಮತ್ತೇನು ? ಹೀಗೆ ಜಂಗಮದ ಬಗ್ಗೆ ಲಿಂಗದ ಬಗ್ಗೆ ಅನುಸರಿಸುವ ಭೇದನೀತಿಯಿಂದ ಯಾವನಾಗಲಿ ಹೊರಗೆ ಶಿವಭಕ್ತನಾದರೂ, ಒಳಗೆ ಭವಿಯಾಗಿಯೇ ಉಳಿಯುವನು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು