ಲಿಂಗದಲ್ಲಿ ಕಠಿಣವುಂಟೆ? ಜಂಗಮದಲ್ಲಿ ಕುಲವುಂಟೆ?
ಪ್ರಸಾದದಲ್ಲಿ ಅನುರುಚಿಯುಂಟೆ?
ಈ ತ್ರಿವಿಧದಲ್ಲಿ ಭಾವಭೇದವನರಸುವೆನು,
ಕೂಡಲಸಂಗಮದೇವಾ, ಧಾರೆವಟ್ಟಲೆನ್ನ ಭಕ್ತಿ.
Transliteration Liṅgadalli kaṭhiṇavuṇṭe? Jaṅgamadalli kulavuṇṭe?
Prasādadalli anuruciyuṇṭe?
Ī trividhadalli bhāvabhēdavanarasuvenu,
kūḍalasaṅgamadēvā, dhārevaṭṭalenna bhakti.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Is there in Liṅga a hard and soft?
In Jaṅgama , a high and low?
And in Prasāda, a choice of tastes?
I see, among these three,
A difference of sencse:
O Kūḍala Saṅgama Lord,
My piety is as
A leaking bowl!
Translated by: L M A Menezes, S M Angadi
Hindi Translation लिंग में काठिन्य है?
जंगम में जाति-भेद है?
प्रसाद में अरुचि है?
इन त्रिविधों में भेद-भाव खोजता हूँ;
कूडलसंगमदेव मेरी भक्ति धारा-पात्र है॥
Translated by: Banakara K Gowdappa
Telugu Translation లింగమున కటువు కలదే! జంగమున కులము కలదే?
ప్రసాదమున అరుచి కలదే? ఈ మూడిట
భావ భేదము చూప నా భక్తి ధారాపాత్రయగు
కూడల సంగమదేవా!
Translated by: Dr. Badala Ramaiah
Tamil Translation இலிங்கத்திலே வன்மையுளதோ? அடியாரிலே குலமுளதோ?
திருவமுதிலே சுவையின்மை யுளதோ?
இம்மூன்று முறையிலும் வேறுபாடுறுவேன்
கூடல சங்கம தேவனே பயனற்ற தென்பக்தி.
Translated by: Smt. Kalyani Venkataraman, Chennai
Marathi Translation
लिंगात कठिणता आहे ? जंगमात कुल आहे?
प्रसादात अरुची आहे?
या त्रिविधात भेदभाव करतो. कूडलसंगमदेवा,
जलधारेसम माझी भक्ती आहे.
Translated by Shalini Sreeshaila Doddamani
ಶಬ್ದಾರ್ಥಗಳು ಅರಸು = ಹುಡುಕು; ಜಂಗಮ = ನಡೆದಾಡುವ ಜೀವವಿರುವ; ಧಾರೆವಟ್ಟಲು = ಶಿವಾಲಯಗಳಲ್ಲಿ ಲಿಂಗದ ಮೇಲೆ ಕಟ್ಟಿದ ತೂತುಳ್ಳ ಅಭಿಷೇಕದ ಪಾತ್ರೆ ; ಪ್ರಸಾದ = ಸೇವೆ;
ಕನ್ನಡ ವ್ಯಾಖ್ಯಾನ ಲಿಂಗದಲ್ಲಿ ಕಾಠಿಣ್ಯ (ಇದು ಬಳಪದಕಲ್ಲು,ಇದು ಕಗ್ಗಲ್ಲು ಎಂಬ ಶಿಲಾಭಾವ)ವನ್ನು, ಜಂಗಮದಲ್ಲಿ ಕುಲ(ಇವನು ಗೌಡ, ಇವನು ನೊಣಬ ಎಂಬ ಮಾನವಭಾವ)ವನ್ನು, ಪ್ರಸಾದದಲ್ಲಿ ರುಚಿ (ಇದು ಅಂಬಲಿ, ಇದು ಅನ್ನ, ಇದು ಪರಮಾನ್ನವೆಂಬ) ರುಚಿಭಾವವನ್ನು ತ್ಯಜಿಸಬೇಕು, ಲಿಂಗವನ್ನು ಪರಾತ್ವರ ತತ್ತ್ವಸ್ವರೂಪವೆಂದು, ಜಂಗಮವನ್ನು ಆ ಲಿಂಗದ ಉತ್ಸವಮೂರ್ತಿಯೆಂದು, ಪ್ರಸಾದವನ್ನು ಆ ಎರಡರ ಕರುಣಾರಸವೆಂದು ಸ್ವೀಕರಿಸಬೇಕು. ಈ ತ್ರಿವಿಧ ಭಾವವನ್ನು ಎಷ್ಟು ಒತ್ತಿ ಹೇಳಿದರೂ ಅಷ್ಟೇ ಸುಲಭವಾಗಿ ಅವನ್ನು ತಮ್ಮ ಮನಸ್ಸು ಸೋರಬಿಡುತ್ತದೆಂಬ ಅರ್ಥದಲ್ಲಿ ಬಸವಣ್ಣನವರು “ಧಾರವಟಲೆನ್ನ ಭಕ್ತಿ” ಎಂದು ಹೇಳುತ್ತಿರುವರು. ಈ ಲಿಂಗ-ಜಂಗಮ-ಪ್ರಸಾದವೆಂಬ ತ್ರಿವಿಧದಲ್ಲಿ ಭಕ್ತಿ ಸೋರಿಹೋಗದೆ ನಿಲ್ಲಬೇಕೆಂದುದಭಿಪ್ರಾಯ. ಧಾರೆ ಬಟ್ಟಲಿಗೆ ತುಂಬಿದ ನೀರು ಸೋರಿಹೋಗುವುದನ್ನು ನಾವೆಲ್ಲ ಕಂಡಿದ್ದೇವೆ.
ವಿ : ಪ್ರಸಾದದ ವಿಚಾರ : ಪ್ರಸಾದದಲ್ಲಿ ರುಚಿಯನ್ನೇ ಅರಸುತ್ತ ಹೋದರೆ ನಿರ್ಧನಿಕರ ಮನೆಯಲ್ಲಿ ಬಡಿಸುವ ಅಂಬಲಿ ಯಾರಿಗೂ ಬೇಡವಾದೀತು ಹೀಗೆ ಬಡಭಕ್ತರನ್ನು ಪ್ರೀತಿಸಲು ಈ ಪ್ರಸಾದ ಅಡ್ಡಿಯಾಗಬಾರದು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು