ಓತಿ ಬೇಲಿವರಿದಂತೆ ಎನ್ನ ಮನವಯ್ಯಾ,
ಹೊತ್ತಿಗೊಂದು ಪರಿಯಪ್ಪ ಗೋಸುಂಬೆಯಂತೆನ್ನ ಮನವು;
ಬಾವುಲ ಬಾಳುವೆಯಂತೆನ್ನ ಮನವು!
ನಡುವಿರುಳೊಳೆದ್ದ ಕುರುಡಂಗೆ ಆಗಸೆಯಲ್ಲಿ ಬೆಳಗಾದಂತೆ
ನಾನಿಲ್ಲದ ಭಕ್ತಿಯ ಬಯಸಿದರುಂಟೆ,
ಕೂಡಲಸಂಗಮದೇವಾ?
Transliteration Ōti bēlivaridante enna manavayyā,
hottigondu pariyappa gōsumbeyantenna manavu;
bāvula bāḷuveyantenna manavu!
Naḍuviruḷoḷedda kuruḍaṅge āgaseyalli beḷagādante
nānillada bhaktiya bayasidaruṇṭe,
kūḍalasaṅgamadēvā?
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Like a lizard darting about
A hedge, so is my mind, O Lord;
Like a chameleon who appears
One thing each several time,
So is my mind!
Like the condition of a flying-fox,
So is my mind!
Even as dawn breaking at the gate
For the blind man who wakes
At dead of night-
Is there, for the mere wish,
A disinterested piety,
O Kūḍala Saṅgama Lord?
Translated by: L M A Menezes, S M Angadi
Hindi Translation कंटील घेरे पर जैसे गिरगिट है वैसे है मेरा मन है ।
क्षण क्षण में रंग बदलनेवाले गिरगिट सा है मेरा मन
चमगीदड के जीवन सा मेरा मन;
आधी रात में जागनेवाले अंधे को
फाटक पर पौ फटने की भाँति
जो भक्ति मुझमें नहीं है
उसकी आशा करने से मिलेगी कूडलसंगमदेव ॥
Translated by: Banakara K Gowdappa
Telugu Translation కంచెకడ తల నాడిరచు తొండ అయ్యె నా మనసు
ప్రొద్దుకొక రీతి మారు ఊసరవెల్లి అయ్యె నా మనసు!
గబ్బిలము సేయు కాపురమయ్యె నా మనస్సు
నడిరేయి మేల్కొను గ్రుడ్డికి మొగసాల
ప్రొద్దుపొడిచినట్లు, లేని భక్తికి ఆశ
పడ వచ్చునే నాకు? కూడల సంగమదేవా;
Translated by: Dr. Badala Ramaiah
Tamil Translation ஓணான் வேலிமேலே செல்வது போல் என் மனம் ஐயனே
பொழுதுக் கொருபடியான பச்சோந்தி போல் என் மனம்,
வவ்வாலின், வாழ்வினைப் போல் என் மனம்
நள்ளிரவிலே எழுந்த குருடனுக்குத் தெற்று வாசலில் விடிந்தது போல
நான் இல்லாத பக்தியை விரும்பின் வருமோ
கூடல சங்கம தேவனே.
Translated by: Smt. Kalyani Venkataraman, Chennai
Marathi Translation
कुंपनावर फिरणाऱ्या सरड्याप्रमाणे माझे मन,
क्षणा क्षणाला रंग बदलणाऱ्या सरड्याप्रमाणे माझे मन.
वटवाघुळासम जीवन माझे.
जसे आंधळ्याला वेशीत दिवस उगवला.
मी नसलेल्या भक्तीसाठी तळमळून काय उपयोग कूडलसंगमा ?
Translated by Shalini Sreeshaila Doddamani
ಶಬ್ದಾರ್ಥಗಳು ಅಗುಸೆ = ; ಓತಿ = ; ಪರಿ = ಬಗೆ; ಬಾವುಲ = ಹಕ್ಕಿ;
ಕನ್ನಡ ವ್ಯಾಖ್ಯಾನ ಇಲ್ಲಿ ಮನವನ್ನು ಓತಿಗೆ ಗೋಸುಂಬೆಗೆ ಬಾವುಲಕ್ಕೆ ಹೋಲಿಸಲಾಗಿದೆ. ಓತಿಯು ಬೇಲಿಯಿಂದ ಬೇಲಿಗೆ ಹೋಗಿ(ವನಕ್ಕೆ ಕಾಲಿಡದೆ) ಬೇಲಿಯಲ್ಲೇ ತನ್ನ ಜೀವಿತವನ್ನು ಕಳೆಯುವುದು. ಹಾಗೆಯೇ ಈ ಮನಸ್ಸು ಕೂಡ ವಿಷಯದಿಂದ ವಿಷಯಕ್ಕೆ ಸಂಚಲಿಸಿ ಆನಂದಕ್ಕೆ ಕಾಲಿಡದೆ ವಿಷಯಾಂತರದಲ್ಲಿಯೇ ನಿರತವಾಗಿರುವುದು. ಗೋಸುಂಬೆಯು-ಬೆಳಗ್ಗೆ ಮಧ್ಯಾಹ್ನ ಸಂಜೆ-ಹೊತ್ತಿಗೊಂದು ಬಣ್ಣವನ್ನು ಬದಲಿಸುತ್ತ ಬದುಕುವುದು. ಹಾಗೆಯೇ ಈ ಮನಸ್ಸು ಕೂಡ ತನ್ನದೇ ಆದ ಒಂದು ಮೌಲ್ಯವಿಲ್ಲದೆ ಅವರವರಿಗೆ ಅವರಂತಾಗಿ ತನ್ನ ಬಣ್ಣದ ಜೀವನವನ್ನು ಸುಗಮವಾಗಿ ಸಾಗಿಸಿಕೊಂಡು ಹೋಗುವುದು. ಬಾವುಲ ಹಕ್ಕಿ ಕಾಲು ಮೇಲಾಗಿ ತಲೆ ಕೆಳಗಾಗಿ ತೂಗಾಡುತ್ತ ತಿಂದ ಬಾಯಲ್ಲೇ ಹೇಲುವುದು. ಹಾಗೆಯೇ ಈ ಮನಸ್ಸು ಕೂಡ ಗುರುಲಿಂಗಜಂಗಮಪ್ರಸಾದವನ್ನು ಹೊಟ್ಟೆಪಾಡಿಗಾಗಿ ತಿಂದು, ಆ ಪ್ರಸಾದ ತಿಂದ ಬಾಯಲ್ಲೇ ಆ ಗುರು ಲಿಂಗಜಂಗಮವನ್ನು ದೂಷಿಸುವುದು.
ಹೀಗೆ ಏಕಗ್ರಾಹಿಯೋ ಆಶೆಬುರುಕನೋ ದೈವದೂಷಕನೋ ಆಗಿ ತೀವ್ರ ಹೇಯವಾಗಿರುವ ಪ್ರಾಪಂಚಿಕನನ್ನು ಒಬ್ಬ ಕುರುಡನಿಗೂ ಹೋಲಿಸಲಾಗಿದೆ. ಆ ಕುರುಡನು ಊರ ಹೊರಗಿರುವ ನಿಧಿಯನ್ನು ತನಗೆ ತಾನೇ ತನ್ನದಾಗಿಸಿಕೊಳ್ಳಬೇಕೆಂದು ನಡುರಾತ್ರಿಗೇ ಎದ್ದು ಹೊರಟು ಊರಿನ ಕೋಟೆಯ ಗೋಡೆಯ ಗುಂಟ ತಡವರಿಸಿಕೊಂಡು ಅಗುಸೆಬಾಗಿಲ ಬಳಿಗೆ ಬರುವ ವೇಳೆಗಾಗಲೇ ಬೆಳಗಾಗಿ ಹೋಗುತ್ತಿತ್ತು. ಮರಳಿ ಮನೆಗೆ ಹೋಗುತ್ತಿದ್ದ ಪ್ರತಿನಿತ್ಯವೂ ಇದೇ ಬವಣೆ. ಅವನು ನಿಧಿಯನ್ನು ಕೈವಶಮಾಡಿಕೊಳ್ಳಲಾಗಲೇ ಇಲ್ಲ. ಹಾಗೆಯೇ ಜ್ಞಾನನೇತ್ರವಿಲ್ಲದವನು ಪರಾತ್ಪರರಹಸ್ಯವನ್ನು ಜ್ಞಾನಿಗಳ ಸಹಾಯವಿಲ್ಲದೆ ತನಗೆ ತಾನೇ ಸಾಧಿಸಲಸಾಧ್ಯ-ಎಂದು ಮುಂತಾಗಿ (ಈ ಪ್ಯಾರಾದಲ್ಲಿರುವಷ್ಟನ್ನು ಮಾತ್ರ) ಎಳೆದು ತಂದು ಅರ್ಥೈಸಬೇಕಾಗುವುದು. ವಚನದಲ್ಲಿರುವ ಕುರುಡನ ನಿದರ್ಶನದ ಪಾಠಭಾಗ ಕೆಟ್ಟಿದೆ. ವಾಸ್ತವವಾಗಿ ಈ ವಚನವೇ ಇಡಿಯಾಗಿ 294ನೇ ವಚನದ ಅಪಪಾಠವಷ್ಟೆ. ನೋಡಿ 294ನೇ ವಚನವನ್ನು ಮತ್ತು ಅದರ ವಿವರಣ ಭಾಗವನ್ನು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು