•  
  •  
  •  
  •  
Index   ವಚನ - 289    Search  
 
ಭಕ್ತನ ಭಕ್ತಸ್ಥಲ - ಭಕ್ತಿ
ಸತ್ಯಸಂಬಂಧ ಸಯವಾದ ಭೃತ್ಯಾಚಾರವೆನಗಿಲ್ಲವಯ್ಯಾ; ಅನುದಿನ ನಿಮ್ಮ ನೆನೆಯಲು ಭಕ್ತಿಯಿಲ್ಲವಯ್ಯಾ ಎನಗೆ ಕೂಡಲಸಂಗಮದೇವಾ, ಕರುಣೀ, ಕೃಪೆಯ ಮಾಡಯ್ಯಾ.
Transliteration Satyasambandha sayavāda bhr̥tyācāravenagillavayyā; anudina nim'ma neneyalu bhaktiyillavayyā enage kūḍalasaṅgamadēvā, karuṇī, kr̥peya māḍayyā.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 There's not in me That humbleness that hath made its own The bond with truth; There's not in me The ardour to remember Thee From day to day. O Lord Kūḍala Saṅgama, Thou the compassionate, Have mercy on me, Lord! Translated by: L M A Menezes, S M Angadi
Hindi Translation स्वामी सत्य-संबंध स्वयंसिद्ध भृत्यवृत्ति मुझ में नहीं है। अनुदिन तव स्मरण करनेवाली भक्ति मुझ में नहीं है, करुणाळु कूडलसंगमदेव कृपा करो॥ Translated by: Banakara K Gowdappa
Telugu Translation సత్స సంసర్గము భృత్యాచారము లేదయ్యా నాకు దినదినము నిను దలచు భక్తి లేదయ్యా నాకు దయామయా! సంగమదేవయ్యా! నను కృప చూడుమయ్యా! Translated by: Dr. Badala Ramaiah
Tamil Translation மெய்த்தொடர்புடைய சீரிய தொண்டு நெறி எனக்கிலை ஐயனே நாடோறுமுமை உள்ளுதற்குப் பக்தியிலை ஐயனே, என்னிடம் கூடல சங்கம தேவனே அருள் கூர்ந்து அருள்வாய் ஐயனே. Translated by: Smt. Kalyani Venkataraman, Chennai
Marathi Translation सत्यसंबंध प्रेरीत भृत्याचार माझ्यात नाही. प्रतिदिन आपले स्मरण करण्याची भक्ती माझ्यात नाही. कूडलसंगमदेवा, करुणा-कृपा करावी मजवर. Translated by Shalini Sreeshaila Doddamani
ಶಬ್ದಾರ್ಥಗಳು ಭೃತ್ಯಾಚಾರ = ಸೇವಕ; ಸಯವಾದ = ;
ಕನ್ನಡ ವ್ಯಾಖ್ಯಾನ ಭೃತ್ಯಾಚಾರವೆಂದರೆ-ಭಕ್ತದೇಹಿಕದೇವನಾದ ಶಿವನು ಸ್ವಾಮಿ-ನಾನು ಸೇವಕನೆಂದು ವಿನಯದಿಂದ ಮಾಡುವ ಕೈಂಕರ್ಯ. ಅಂಥ ಕೈಂಕರ್ಯವೇ ನಮಗೂ ಶಿವನಿಗೂ ಇರುವ ಸತ್ಯಸಂಬಂಧ. ಅದಿಲ್ಲದೇಹೋದರೆ-ದೈವಭಕ್ತಿಯೂ ಇಲ್ಲವಾಗುತ್ತದೆ. ಅದ್ದರಿಂದ ಭಕ್ತಿಗೆ ಮೂಲಸಾಮಗ್ರಿಯಾದ ಭೃತ್ಯಾಚಾರವನ್ನು ದಯಪಾಲಿಸಬೇಕೆಂದು ಬಸವಣ್ಣನವರು ದೇವರನ್ನು ಕೇಳಿಕೊಳ್ಳುತ್ತಿರುವರು. ಸೇವಾಮನೋಭಾವವಿಲ್ಲದವನಿಗೆ ಭಕ್ತಿಯಿಲ್ಲವೆಂಬುದಭಿಪ್ರಾಯ. ನೋಡಿ ವಚನ 247.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು