•  
  •  
  •  
  •  
Index   ವಚನ - 291    Search  
 
ಭಕ್ತನ ಭಕ್ತಸ್ಥಲ - ವಿನಮ್ರತೆ
ಹಾಲ ತೊರೆಗೆ ಬೆಲ್ಲದ ಕೆಸರು, ಸಕ್ಕರೆಯ ಮಳಲು, ತವರಾಜದ ನೊರೆ ತೆರೆಯಂತೆ, ಆದ್ಯರ ವಚನವಿರಲು, ಬೇರೆ ಬಾವಿಯ ತೋಡಿ ಉಪ್ಪನೀರನುಂಬವನ ವಿಧಿಯಂತೆ ಆಯಿತ್ತೆನ್ನ ಮತಿ, ಕೂಡಲಸಂಗಮದೇವಾ.
Transliteration Hāla torege bellada kesaru, sakkareya maḷalu, tavarājada nore tereyante, ādyara vacanaviralu, bēre bāviya tōḍi uppanīranumbavana vidhiyante āyittenna mati, kūḍalasaṅgamadēvā.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
Music Courtesy: Vachana Gaanamruta ℗ 2021 Pebble Productions Released on: 2017-11-09 Music Publisher: Pebble Productions Composer: Revayyaa Vasthramatha
English Translation 2 When the words of the Pioneers Are like a stream of milk, With jaggery for its ooze And sugar for its silt, My reason is as one That digs a well apart, To drink a brackish water, Lord Kūḍala Saṅgama! Translated by: L M A Menezes, S M Angadi
Hindi Translation पये-प्रवाह, गुड का पंक, शक्कर का रेत, ‘तवराज’ की फेनिल-लहरों सा पुरातनों के वचन रहते, पृथक कुआँ खोदकर खारा पानी पीनेवाले के भाग्य सी मेरी मति है कूडलसंगमदेव ॥ Translated by: Banakara K Gowdappa
Telugu Translation పాలేటికి బెల్లము బురద; చక్కెర యిసుక! తవరాజపుటలలు నురుగులై ఆద్యుల వచనమలర; వేరు బావిని త్రవ్వి ఉప్పునీటిని త్రాగువాని గతిjైుపోయె నా బ్రతుకు కూడల సంగమదేవా! Translated by: Dr. Badala Ramaiah
Tamil Translation பாலாற்றுக்கு வெல்லச்சேறு, சருக்கரை மணல் கற்கண்டு நுரைதிரைபோல, ஆன்றோர் ஒருமை செப்பிய அருமையிருக்க, வேறுவாவிதொட்டு, உப்பு நீர் அருந்துவோர் ஊழினைப் போல் ஆயிற்று என் அறிவு கூடல சங்கமதேவனே. Translated by: Smt. Kalyani Venkataraman, Chennai
Marathi Translation दुधाच्या नदीत, चिखल गुळ चा थर साखरेचा, तीच रेती अमृतमय जाण, फेसाचे तरंग वचन अभंग, आद्यांचे ते ऐसे वचनामृत, जवळी वाहता विहिर खोदिता, पाण्यासाठी कूडलसंगमदेवा! ऐसी झाली मती अमृत सोडूनी पिती, खारे पाणी अर्थ - ढोर कक्कय्या, मातंग चन्नय्या, देवर दासिमय्या, चांभार हरळय्या सारख्या आद्यांच्या वचन साहित्याचे महत्व स्पष्ट करण्यासाठी त्यांनी दिलेले निसर्गदत्त नदीचे रुपक येथे समर्पक ठरले आहे. महात्मा बसवेश्वर आद्यांच्या वचन साहित्याचे महत्व सामान्यांना समजावे या दृष्टीने नदीची उपमा देऊन म्हणतात की, दुधाच्या नदीत गुळाचा चिखल, तिच्या आजूबाजूला साखरेची वाळू वाहणाऱ्या दुधावर सायीच्या अमृतमय लाटा, अशा स्वरूपात, आद्यांचे उत्तम वचन साहित्य जवळ उपलब्ध असताना त्याकडे दुर्लक्ष करुन दुसरी विहिर खोदणे म्हणजे परकीयांचे साहित्य शोधून त्याचा खोल अभ्यास करून त्यातील खारट पाणी पिण्यासारखीच गत होईल. स्वाभिमानी बसवेश्वर परकीयांचे साहित्य संस्कृती श्रेष्ठ समजून आपल्या जवळील अमृतमय पाण्यात भेसळ करू इच्छित नाहीत, वा भेसळयुक्त खारट पाणी (साहित्य संस्कृती) पिऊ इच्छित नाही. Translated by Rajendra Jirobe, Published by V B Patil, Hirabaug, Chembur, Mumbai, 1983 दूधाच्या प्रवाहात गुळाचा चिखल, साखरेची रेती, फेसाळ अमृतापरि आद्यांची वचने असता दुसरी विहिर खोदून खारे पाणी पिणाऱ्यासम झाली माझी मती, तुमचे वचन ऐकल्याशिवाय पुराण ऐकून भ्रमित झालो कूडलसंगमदेवा. Translated by Shalini Sreeshaila Doddamani
Urdu Translation جب کہ اسلاف کےاقوال ہیں اک قند کا گِل دودھ کی جوئے رواں تودہ ٔذرّات کی شکر لہرامرت کی ہے ہرلفظ بھی ہے پیارکا جھاگ میںنےکچھ فائدہ حاصل نہ کیا ان سےمگر اب یہ حالت ہے کہ جیسےکوئی دُنیا سےالگ خود کنواں کھودے ، پیےآپ ہی کھارا پانی کوڈلا سنگما دیوا مرے خالق پربھُو Translated by: Hameed Almas
ಶಬ್ದಾರ್ಥಗಳು ಆದ್ಯರ = ಪುರಾತನರ; ತವರಾಜ = ಒಂದು ಬಗೆಯ ಸಕ್ಕರೆ; ತೊರೆ = ಹಳ್ಳ; ಮತಿ = ಬುದ್ದಿ; ವಿಧಿ = ದೈವ;
ಕನ್ನಡ ವ್ಯಾಖ್ಯಾನ ಬಸವಣ್ಣನವರು ತಮ್ಮ ಕಾಲಕ್ಕೆ ಹಿಂದಿನ ಮಾದಾರ ಚೆನ್ನಯ್ಯ, ದೇವರ ದಾಸಿಮಯ್ಯ, ಶಂಕರ ದಾಸಿಮಯ್ಯ ಮುಂತಾದ ಆದ್ಯ ಶಿವಶರಣರ ವಚನಗಳು ಭಕ್ತಿಜ್ಞಾನವೈರಾಗ್ಯವನ್ನು ಮಧುರ ಮನೋಹರವಾಗಿ ಬೋಧಿಸಲು ಸಲೀಲವಾಗಿ ತಮ್ಮ ಮುಂದೆಯೇ ರಾರಾಜಿಸುತ್ತಿರುವಾಗ-ತಾವೇ ಪ್ರತ್ಯೇಕವಾಗಿ ಕೂಡಲಸಂಗ ಎಂಬ ಅಂಕಿತದಿಂದ ವಚನಗಳನ್ನು ರಚಿಸುತ್ತಿರುವ ತಮ್ಮ ವ್ಯರ್ಥಸಾಹಸವನ್ನು ಹಳಿದುಕೊಳ್ಳುತ್ತಿರುವರು. ಬೆಲ್ಲದ ಕೆಸರಿನ, ಸಕ್ಕರೆಯ ಮಳಲಿನ, ತವರಾಜರ ನೊರೆತೆರೆಯ ಹಾಲತೊರೆಯೊಂದು-ತಳದಿಂದ ಅಲೆಯವರೆಗೆ, ತಡಿಯಿಂದ ತಡಿಯವರೆಗೆ, ಉದ್ದಕ್ಕೂ ಮಧುರಾತಿಮಧುರವಾಗಿ ತನ್ನ ಮುಂದೆಯೇ ಹರಿಯುತ್ತಿರುವಾಗ ಆ ಅಮೃತಪ್ರವಾಹವನ್ನು ಬೊಗಸೆಗೈಯಿಂದ ಈಂಟಿ ತಣಿಯಲರಿಯದೆ-ತಾನೇ ಒಂದು ಪ್ರತ್ಯೇಕವಾದ ಭಾವಿಯನ್ನು ಬೆವರು ಸುರಿಸಿ ತೋಡಿ, ಒರೆತ ಉಪ್ಪುನೀರನ್ನು ಕುಡಿಯುವ ನಿರ್ಭಾಗ್ಯನೊಬ್ಬನ ಮತಿಹೀನತೆಗೆ ಸಮವಾಯಿತು ತಮ್ಮ ವಚನ ರಚನೆಯ ವ್ಯರ್ಥಚೇಷ್ಟೆಯೆನ್ನುತ್ತಿರುವರು ಬಸವಣ್ಣನವರು. ಹೀಗೆ ಆದ್ಯರ ವಚನಗಳ ಹರಹಿಗೆ ಆಳಕ್ಕೆ ಓಘಕ್ಕೆ ಮಾಧುರ್ಯಕ್ಕೆ ಮನಸೋತಿದ್ದ ಬಸವಣ್ಣನವರು ತಮ್ಮ ವಚನಗಳನ್ನು ಎಷ್ಟೇ ಹಳಿದುಕೊಂಡಿರುವರಾದರೂ-ಅದು ಅವರ ವಿನಯವೇ ಹೊರತು ಯಥಾರ್ಥವಲ್ಲ. ಅವರ ವಚನಗಳು ಜ್ಞಾನದ ಹರಹಿನಿಂದ ವೈರಾಗ್ಯದ ಸೆಳವಿನಿಂದ ಭಕ್ತಿಯ ಮಾಧುರ್ಯದಿಂದ ವಿಶ್ವ ಸಾಹಿತ್ಯದ ಹೆಗಲೆಣೆಯಾಗಿ ನಿಲ್ಲಬಲ್ಲುವೆಂಬುದನ್ನು ಮರೆಯಬಾರದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು