•  
  •  
  •  
  •  
Index   ವಚನ - 292    Search  
 
ಭಕ್ತನ ಭಕ್ತಸ್ಥಲ - ಆತ್ಮಶುದ್ಧಿ
ಜನ್ಮ ಹೊಲ್ಲೆಂಬೆನೆ: ಜನ್ಮವ ಬಿಡಲಹೆನು; ಭಕ್ತರೊಲವ ಪಡೆವೆನೆ: ಭಕ್ತಿಯ ಪಥವನರಿವೆನು; ಲಿಂಗವೆಂದು ಬಲ್ಲೆನೆ: ಜಂಗಮವೆಂದು ಕಾಣ್ಬೆನು: ನಿಚ್ಚ ನಿಚ್ಚ ಶಿವರಾತ್ರಿಯ ಮಾಡಬಲ್ಲೆನೆ: ಕೈಲಾಸವ ಕಾಣಬಲ್ಲೆನು! ಎನ್ನಲ್ಲಿ ನಡೆಯಿಲ್ಲವಾಗಿ, ನಾನು ಭಕ್ತನೆಂತೆಪ್ಪೆನಯ್ಯಾ, ಕೂಡಲಸಂಗಮದೇವಾ?
Transliteration Janma hollembene: Janmava biḍalahenu; bhaktarolava paḍevene: Bhaktiya pathavanarivenu; liṅgavendu ballene: Jaṅgamavendu kāṇbenu: Nicca nicca śivarātriya māḍaballene: Kailāsava kāṇaballenu! Ennalli naḍeyuttilla, nānu bhaktanenteppenayyā, kūḍalasaṅgamadēvā?
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 My parents gave me birth In the spirit of the Montor: Like a chameleon’s is my life, Like that of a flying- fox! Even as the sunset overtakes The blind man at the village gate Although he woke at break of day, Would it be well To merely wish for piety, O KudalaSangama Lord ? Translated by: L M A Menezes, S M Angadi
Hindi Translation जन्म को निःसार मानूँ, तो उसे त्याग सकता हूँ; भक्तों का अनुग्रह पाऊँ, तो भक्ति-पथ जान सकता हूँ; लिंग को जान पाऊँ, तो जंगम को देख सकता हूँ; नित्यप्रति शिवरात्रि मनाऊँ, तो कैलास देख सकता हूँ मेरा ऐसा आचरण नहीं है, अतः मैं भक्त कैसे हो सकता हूँ कूडलसंगमदेव ? Translated by: Banakara K Gowdappa
Telugu Translation జన్మపొల్లంచు జన్మను విడలేను భక్తుల ప్రీతి పడయ భ క్తిపథము చూతు లింగమెపుడో తెలియుట జంగమ మెపుడో చూచుట దినదినము శివరాత్రి సేయకల్గన కైలాస మందగలను నడత లేదేని నా యందు భక్తుడెట్లగుదునయ్యా నేను కూడల సంగమదేవా! Translated by: Dr. Badala Ramaiah
Tamil Translation பிறவி புன்மை யென்பேன், பிறவியை விடேன், அடியாரன்பு பெறுவேன் பக்திநெறியறிவேன், இலிங்கத்தை உணர்வேன் மெய்யடியாரைக் காண்பேன், நாடோறும் இலிங்கத்திலொன்றி கைலாசம் காண்பேன் என்னிடத்து நன்னெறியிலை நான் எங்ஙனம் பக்த நாவேனையனே கூடல சங்கம தேவனே. Translated by: Smt. Kalyani Venkataraman, Chennai
Marathi Translation जन्माला निरर्थक म्हणालो तर जन्म सोडू शकत नाही. भक्ताचे प्रेम मिळविले तर भक्तीपथ समजू शकतो. जंगमाला जाणले तर लिंगाला जाणू शकतो. नित्य नित्य शिवरात्री केली तर कैलास पाहू शकतो. माझ्यात आचार नाही, मी `भक्त कसा होईन कूडलसंगमदेवा? Translated by Shalini Sreeshaila Doddamani
ಶಬ್ದಾರ್ಥಗಳು ಕಾಣ್ಬೆ = ಕಾಣುವೆನು; ಜಂಗಮ = ನಡೆದಾಡುವ ಜೀವವಿರುವ; ಪಥ = ದಾರಿ;
ಕನ್ನಡ ವ್ಯಾಖ್ಯಾನ ಈ ಹುಟ್ಟು(ಸಾವು) ಹೇಯವೆಂದು ಮನಗಂಡೆನೇ-ಪುಣ್ಯ ಪಾಪಗಳಿಗೆ ದಾರಿಮಾಡುವ ಕರ್ಮವನ್ನು ಬಿಡುತ್ತೇನೆ, ಭಕ್ತರ ಒಲವನ್ನು ಸಂಪಾದಿಸಲಿಚ್ಛಿಸಿದೆನೇ-ಭಕ್ತಿಮಾರ್ಗವನ್ನು ಹಿಡಿಯುತ್ತೇನೆ, ಲಿಂಗ ತತ್ತ್ವವನ್ನು ತಿಳಿದೆನೆ, ಜಂಗಮದಾಸೋಹಿಯಾಗುತ್ತೇನೆ. ನಿತ್ಯನಿತ್ಯ ಶಿವರಾತ್ರಿಯನ್ನು ಮಾಡಿದೆನೇ-ಕೈಲಾಸ(ಕೇವಲ ಸುಖ)ವನ್ನು ಕಾಣುತ್ತೇನೆ. ಹೀಗೆ ಜನ್ಮಕ್ಕೆ ಹೇಸದೆ, ಭಕ್ತರೊಲವನ್ನು ಸಂಪಾದಿಸದೆ, ಜಂಗಮದಾಸೋಹವನ್ನು ಮಾಡದೆ, ನಿತ್ಯಶಿವರಾತ್ರಿಯನ್ನು ಆಚರಿಸದೆ-ಈ ಎಲ್ಲ ನಡೆವಳಿಯಿಲ್ಲದೆ-ಯಾವನಾಗಲಿ “ಭಕ್ತ” ಎನಿಸಲಾರನು. ಭಕ್ತನೆಂದರೆ ಕರ್ಮವನ್ನು ಬಿಟ್ಟವನು, ಭಕ್ತಿಮಾರ್ಗವನ್ನು ಹಿಡಿದವನು, ಜಂಗಮದಾಸೋಹ ಮಾಡಿದವನು, ನಿತ್ಯಲಿಂಗಾರ್ಚನಾವ್ರತವನ್ನು ಹಿಡಿದವನು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು