•  
  •  
  •  
  •  
Index   ವಚನ - 293    Search  
 
ಭಕ್ತನ ಭಕ್ತಸ್ಥಲ - ಆತ್ಮಶುದ್ಧಿ
ಉಡುವಿನ ಭಾವದಲ್ಲಿ ಹಡೆದರೆಮ್ಮವರು; ಊಸರವಳ್ಳಿಯಂತೆ ಎನ್ನಿರವು- ಬಾವುಲ ಬಾಳುವೆಯ ತೆರನಂತೆ! ಹೊತ್ತಾರೆ ಎದ್ದ ಕುರುಡಂಗೆ ಆಗಸೆಯಲ್ಲಿ ಅಸ್ತಮಾನವಾದಂತೆ; ಆನು ಭಕ್ತಿಯ ಬಯಸಿದರಹುದೆ ಕೂಡಲಸಂಗಮದೇವಾ?
Transliteration Uḍuvina bhāvadalli haḍedarem'mavaru; ūsaravaḷḷiyante enna iravu- bāvula bāḷuveya teranante! Hottāre edda kuruḍaṅge āgaseyalli astamānavante; ānu bhaktiya bayasidarahude kūḍalasaṅgamadēvā?
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 My parents gave birth In the spirt of the Montor: Like that of a flying-fox! Even as the sunset overtakes The blind man at the village gate Although he woke at break of day, Would it be well To merely wish for piety, O Kūḍala Saṅgama Lord? Translated by: L M A Menezes, S M Angadi
Hindi Translation गोह के अर्थ में हमारे स्वजनोंने मुझे जन्म दिया, मेरी स्थिति गिरगिट के समान है, चमगीदड के जीवन के समान है, उषः काल में जागृत अंधे को फाटक पर सूर्यास्त होने की भाँति मेरे चाहने पर भक्ति होती कूडलसंगमदेव? Translated by: Banakara K Gowdappa
Telugu Translation ఉడుముగతి నుండిరయ్యా మా వారు ఊసరవిల్లియట్లు నా యునికి గబ్బిలమువలె నా కాపురము తొలి జాములో లేచు గ్రుడ్డికి మొగసాలలో ప్రొద్దు గ్రుంకినట్లు అడియాసల వచ్చునే భక్తి కూడల సంగమదేవా! Translated by: Dr. Badala Ramaiah
Tamil Translation உடும்பி னியல்பி லிருப்பவர் எம்மவர், பச்சோந்தியனையது என்னிருப்பு, வவ்வாலின் வாழ்வனையதாம், விடியலிலே எழுந்த குருடனுக்குத் தெற்று வாசலிலே இருளானதனைய, நான் பக்தியை விரும்பின் ஆகுமோ கூடல சங்கம தேவனே. Translated by: Smt. Kalyani Venkataraman, Chennai
Marathi Translation क्षणोक्षणी माझे मन ते चंचल स्थिर ना राहील, क्षणभरी जैसा तो सरडा राही, वेलीवरी दावी परोपरी रंग त्याचे धडपडे उठून रात्रीच्या अंधारी वटवाघूळी परी मन माझे चालता चालता संपली ती रात्र तरीही वेशीत, नाही आलो दमून मी गेलो, सूर्य आला वर वेशीच्या बाहेर, नाही आलो कूडलसंगम देवा! श्रद्धा नाही मला म्हणून चूकला, मार्ग माझा अर्थ – वेलीतील गिरगुटाप्रमाणे क्षणाक्षणाला माझे मनाचे रंग बदलत आहेत. वटवाघळाप्रमाने मध्यरात्री उठून चालू लागलो आहे. चालून चालून दमून गेलो. शेवटी दिवसच उगवला तरीही वेशीच्या बाहेर जाऊ शकलो नाही. याचे कारण माझ्यात विश्वास, श्रद्धा व भक्ती नसल्यामुळे मी त्या प्रभूला जाणू शकलो नाही. इत्यर्थ असा की, भक्तीमध्ये धरसोड वृत्ती असु नये. अंधानुकरण करू नये. दृढविश्वासाने भक्ती केली तर आपोआप प्रभूच्या द्वाराकडे चालू लागाल. तेथे शोधण्याची गरज नाही. Translated by Rajendra Jirobe, Published by V B Patil, Hirabaug, Chembur, Mumbai, 1983 घोरपड भावात मातापित्याने जन्म दिला. सरड्याप्रमाणे बदलणारे माझे जीवन वटवाघुळासारखी माझी स्थिती. पहाटे उठून निघालेल्या आंधळ्याला वेशीतच सूर्यास्त होतो तशी मला पाहिजे असलेली `भक्ती लाभेल का कूडलसंगमदेवा ? Translated by Shalini Sreeshaila Doddamani
ಶಬ್ದಾರ್ಥಗಳು ಅಸ್ತಮಾನ = ಸಂಜೆ; ಆಗುಸೆ = ; ಇರವು = ಇರುವಿಕೆ; ಉಡ = ; ಬಾವುಲ = ತೊಗಲ ಬಾಹುಲಿ; ಭಾವ = ಜಿಜಜ ನಿಸ್ಥಿತಿ ಅಕ್ಕನ ಗಂಡ;
ಕನ್ನಡ ವ್ಯಾಖ್ಯಾನ ನಮ್ಮ ಶರಣರು ಉಡುವಿನಂತೆ ಬಿಗಿವಿಡಿದು ಸಾಧನೆ ಮಾಡಿ ಭಕ್ತಿಯನ್ನು ಪಡೆದರು. ನಾನಾದರೋ ಉಸುರುವಳ್ಳಿ(ಗೋಸುಂಬೆ)ಯಂತೆ ಹೊತ್ತಿಗೊಂದು ಪರಿಯಾಗಿ ತತ್ತ್ವದಲ್ಲಿ ನಿಲುಗಡೆಯಿಲ್ಲದೆ ಲೋಕ ವ್ಯವಹಾರದಲ್ಲಿ ತೊಡಗಿದ್ದೇನೆ, ಮತ್ತು ಬಾವುಲನಂತೆ ಬಾಯಲ್ಲಿ ಹೇಯವಾದದನ್ನೇ ಆಡುತ್ತಿದ್ದೇನೆ-ಮತ್ತೆಯೂ ಭಕ್ತಿಯನ್ನು ಬಯಸುತ್ತೇನೆ. ನನ್ನ ಈ ವರ್ತನೆ “ಪರ” ಊರಿಗೆ ಪಯಣಿಸಬೇಕೆಂದು ಬೆಳಗಿನ ಝಾಮದಲ್ಲೇ ಮನೆಯಿಂದ ಹೊರಟ ಕುರುಡನಿಗೆ ಸುತ್ತಿಬಳಸುವ ತಡವರಿಕೆಯಲ್ಲಿ ಹಗಲೆಲ್ಲ ಮುಗಿದುಹೋಗಿ,ತನ್ನೂರಿನ ಅಗುಸೆಯ ಬಾಗಿಲಿಗೆ ಬರುವ ವೇಳೆಗೇ ಸಂಜೆಯಾಗಿ ಕತ್ತಲಾವರಿಸುತ್ತದೆ. ಇನ್ನೆಲ್ಲಿಗೆ ಅವನ ಪಯಣ ? ಮರಳಿ ಮನೆಗೆ ! ಮತ್ತೆ ಕತ್ತಲಲ್ಲಿ ತಡವರಿಕೆ ! ಮರಳಿ ಅಗುಸೆಯ ಬಾಗಿಲವರೆಗೇ ! ತಲುಪಬೇಕಾದ “ ಪರ” ಊರಿನ ಸುದ್ದಿ ಗಾವುದ ಗಾವುದವಾಗಿ ದೂರವೇ ಉಳಿಯಿತು. ಹೀಗೆಂದು ಬಸವಣ್ಣನವರು ಸಂಸಾರದಲ್ಲೇ ಘಾಸಿಪಡುತ್ತಿರುವ ತಮಗೆ ತಾವೇ ಹೇಸುತ್ತಿರುವರು ಕನಿಕರಿಸುತ್ತಿರುವರು. ಕುರುಡುಕರ್ಮಮಾರ್ಗದ ಸುತ್ತುಬಳಸಿನಲ್ಲಿ ಕಾಲಕಳೆಯದೆ, ಜ್ಞಾನನೇತ್ರವನ್ನು ತೆರೆದು ಗುರುಲಿಂಗ ಜಂಗಮದ ಸೇವಾಮಾರ್ಗದಲ್ಲಿ-ಉಂಡಲ್ಲಿ ಉಣ್ಣದೆ, ಬಿಟ್ಟಲ್ಲಿ ಬಿಡದೆ, ನೇರವಾಗಿ ಮತ್ತು ಏಕಪ್ರಕಾರವಾಗಿ ನಡೆದು ಹುಟ್ಟು ಸಾವಿನ ದಾರವಂದವನ್ನು ದಾಟಿ ಹೊರನುಗ್ಗುವವರೆಗೆ ಭಕ್ತಿಯೆಂಬ ಪರಸ್ಥಳವನ್ನು ತಲುಪುವುದಾಗದೆಂಬುದು ಅಭಿಪ್ರಾಯ. ವಿ : ಈ ವಚನದ “ಉಡುವಿನ ಭಾವ” ಎಂಬ ಮಾತನ್ನು ವಚನ 103ರ ಅನುಸಾರವಾಗಿ-“ಭಿನ್ನ ಭಾವ” ಎಂದು ಅರ್ಥೈಸುವುದಾದರೆ-ವಚನದ ವಿನ್ಯಾಸ : “ಉಡುವಿನ ಭಾವದಲ್ಲಿ ಹಡೆದರು-ಎಮ್ಮವರು ಉಸುರುವಳ್ಳಿಯಂತೆ, ಎನ್ನಿರವು ಬಾವುಲ ಬಾಳುವೆಯ ತೆರನಂತೆ” ಎಂದಾಗಿ ಬೇರೆ ಹಿನ್ನೆಲೆಯನ್ನೇ ಪಡೆಯುವುದೆನಿಸುತ್ತದೆ : “ಶಿವನಲ್ಲಿ ಏಕನಿಷ್ಠೆಯಿಲ್ಲದೆ ಉಡುವಿನ ನಾಲಗೆಯಂತೆ ಎರಡಾದವರು, ಮತ್ತು ಅವರು ಇತ್ತ ನನ್ನಂತೆಯೂ, ಅತ್ತ ಬ್ರಾಹ್ಮಣ್ಯದಂತೆಯೂ ಬಹುಬಣ್ಣವಾದವರು, ಅವರ ಮಗನಾಗಿ ಉಪನಯನಗೊಂಡ ನಾನಾದರೋ ಶಿವಧ್ಯಾನವನ್ನು ಸ್ವೀಕರಿಸಿ, ಕರ್ಮಮಂತ್ರವನ್ನು ಬಾಯಲ್ಲಿ ಸೂಸುತ್ತಿದ್ದೇನೆ” ಎಂದು ಮುಂತಾಗಿ ಅರ್ಥೈಸಲೂ ಬೇಕಾಗುತ್ತದೆ. ಈ ವಿಧವಾದೆಲ್ಲ ತೊಡಕಿನಿಂದ ದಿಕ್ಕುಗೆಟ್ಟವನೊಬ್ಬನು ಈ 294 ನೇ ವಚನಪಾಠವನ್ನೇ ತಿದ್ದಿ ಕೆಡಿಸಿ 289ನೇ ವಚನವನ್ನಾಗಿ ಮಾರ್ಪಡಿಸಿರುವನು. ಆ ಮೂಲಕ ಮೂಲವಚನದ ಉಡು-ಉಸುರುವಳ್ಳಿ-ಬಾವುಲ ಎಂಬ ಪದಸರಣಿ ಓತಿ-ಗೋಸುಂಬೆ-ಬಾವುಲ ಎಂದಾಗಿ-ಉಡುವಿಗೆ ಬದಲಾಗಿ ಓತಿಯನ್ನು ಪ್ರತಿನಿಧಾನಿಸಿರುವುದನ್ನು ಗಮನಿಸಿರಿ. ಮತ್ತು ಆ ತಿದ್ದಿದವನು ಕಲ್ಪನಾರಹಿತನೂ ಆದುದರಿಂದ ಹೊತ್ತಾರೆ ಮತ್ತು ಅಸ್ತಮಾನ ಎಂಬುದನ್ನು ನಡುವಿರುಳು ಮತ್ತು ಬೆಳಗಾಗು ಎಂದು ತಿದ್ದಿ ಅಬದ್ಧ ಮಾಡಿರುವುದನ್ನೂ ವಿವೇಚಿಸಿರಿ. ನೋಡಿ 289ನೇ ವಚನದ ವ್ಯಾಖ್ಯಾನವನ್ನು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು