•  
  •  
  •  
  •  
Index   ವಚನ - 294    Search  
 
ಭಕ್ತನ ಭಕ್ತಸ್ಥಲ - ಉದರಪೋಷಣೆ
ಬಸಿರ ಬಾಳುವೆಗೆ ನಿಮ್ಮಲ್ಲಿ- ಮಸಿಯ ಹೂಸಿ ನೇರಿಲ ಹಣ್ಣ ಮಾರುವಂತೆ- ಕಾಲ ಸಾಲ ದಾರಿದ್ರ್ಯಕ್ಕಂಜಿ ನಿಮ್ಮ ಮರೆಹೊಕ್ಕೆನಯ್ಯಾ. ಆವುದು ಹುಸಿಯೆಂಬೆ? ಆವುದು ಕಿರಿದೆಂಬೆ? ಇದ ನೀನೇ ಬಲ್ಲೆಯಯ್ಯಾ. ಕೂಡಲಸಂಗಮದೇವಾ, ಆನು ಉದರಪೋಷಕನಯ್ಯಾ!
Transliteration Basira bāḷuvege nim'malli- masiya hūsi nērila haṇṇa māruvante- kāla sāla dāridryakkan̄ji nim'ma marehokkenayyā. Āvudu husiyembe? Āvudu kiridembe? Ida nīnē balleyayya. Kūḍalasaṅgamadēvā, ānu udarapōṣakanayyā!
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 In dread of death, of debt and penury, I sought refuge in Thee: I sought it for my belly's sake, As one who sells the Jambu fruit Besmeared with Purple dye How shall I say What part of me is false, What part is base? Thou only know'st it, Lord! O Kūḍala Saṅgama Lord, I am but one who lives To fill my belly, Lord! Translated by: L M A Menezes, S M Angadi
Hindi Translation स्वामी, उदरार्थ तुम्हारे यहाँ मसि लेपकर जामुन बेचनेवाले की भाँती, काल, ऋण, दरिद्रता से डरकर तव शरण आया हूँ। किसे झूठ कहता हूँ? किसे छोटा कहता हूँ? तुम ही जानते हो कूडलसंगमदेव, मैं उदर पोषक हूँ ॥ Translated by: Banakara K Gowdappa
Telugu Translation పొట్టకూటికి నీ కడ బడితి మసిబూసి నేరేడుపండ్ల మ్ము రీతి , కట్టడి దారిద్య్రమునకు వెఱచి నీ మఱుగు జొచ్చితి సరి యేదో! కొఱయేదో యేదీ తెలియనయ్యా ఇది నీకే తెలియు కూడల సంగమదేవా ఉదర పోషకుడ నేనయ్యా ! Translated by: Dr. Badala Ramaiah
Tamil Translation உயிர்வாழ்வதற்கு நும்மோர் கரியைப்பூசி, நாவற்பழம் விற்பதனைய காலம், கடன், வறுமைக்கஞ்சி உம் தஞ்சம் புக்கேனையனே. எதனைப் பொய்யென்பே, னெதனைப் புல்லென்பேன்? இதனை நீயே யறிவாயையனே கூடல சங்கம தேவனே, நான் வயிறு வளர்ப்போனையனே. Translated by: Smt. Kalyani Venkataraman, Chennai
Marathi Translation उदर पोषणासाठी काळा रंग जांभळाला लावून विकणाऱ्यासम तुमच्याशी माझे वर्तन आहे. काळ-ऋण-दारिद्र्य यांना भिवून तुम्हाला शरण आलो. काय खोटे आहे, काय लहान आहे? हे आपणच जाणता कूडलसंगमदेवा मी उदर पोषक. Translated by Shalini Sreeshaila Doddamani
ಶಬ್ದಾರ್ಥಗಳು ಉದರ = ಹೊಟ್ಟೆ; ದಾರಿದ್ರ್ಯ = ಬಡತನ; ಬಾಳುವೆ = ಬದುಕು; ಹುಸಿ = ಸುಳ್ಳು; ಹೂಸಿ = ಲೇಪಿಸು;
ಕನ್ನಡ ವ್ಯಾಖ್ಯಾನ ನೇರಳೇ ಕೆಂಗಾಯಿಗೆ ಮಸಿಯನ್ನು ಬಳಿದು ಹಣ್ಣೆಂದು ಆಕರ್ಷಿಸಿ ನಂಬಿಸಿ-ಅದನ್ನು ಶಿವಾಲಯದ ಬಳಿಯೇ ಮಾರುವರು-ಆ ರೀತಿ ಮಾರುವುದು ಹೊಟ್ಟೆಪಾಡಿಗಾಗಿಯೇ ! ನಾನೂ ಮೈಗೆಲ್ಲ ವಿಭೂತಿಯನ್ನು ಬಳಿದು, ನನ್ನ ಮನದ ಕಸುಗಾಯಿತನವನ್ನೆಲ್ಲಾ ಮರೆಮಾಡಿರುವುದೂ-ಈ ಹೊಟ್ಟೆಪಾಡಿಗಾಗಿಯೇ ಅಲ್ಲವೆ ? ಸುಲಭಜೀವನಕ್ಕಾಗಿ ಅಲ್ಲವೆ ? ವೇಷವಿಲ್ಲದಿದ್ದರೆ ಪಡಬೇಕಾಗಿದ್ದ ಬವಣೆಯಿಂದ ಪಾರಾಗಲಿಕ್ಕಾಗಿ ಅಲ್ಲವೆ ? ದಾರಿದ್ರ್ಯದಿಂದ ಸಾಲಮಾಡಿ, ಅದನ್ನು ತೀರಿಸಲಾರದೆ-ಬರಬಹುದಾದ ಅವಮಾನಕ್ಕೆ ದಂಡಕ್ಕೆ ಅಂಜಿ ಭಕ್ತನ ವೇಷ ಹಾಕಿದವನಿಗಿಂತ ನಾನು ಭಿನ್ನ ಹೇಗೆ ? ನಾನು ಭಕ್ತನಲ್ಲ, ಭಕ್ತನ ವೇಷ ಹಾಕಿದವನು, ಆ ಮೂಲಕ ಜೀವನ ಸಾಗಿಸುತ್ತಿರುವವನು. ಆದರೆ ನನ್ನ ನಿಜವನ್ನು ನಾನೇ ಭೇದಿಸಲಾಗದಷ್ಟು ಆ ಕಪಟ ವೇಷ ನನಗೆ ಹೊಂದಿಕೊಂಡಿದೆ-ಎಂಬ ಬಸವಣ್ಣನವರ ಮಾತು ಸಲ್ಲುವುದು ಅವರಿಗೋ ನಮಗೋ ?

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು