•  
  •  
  •  
  •  
Index   ವಚನ - 295    Search  
 
ಭಕ್ತನ ಭಕ್ತಸ್ಥಲ - ಭಕ್ತಿ
ಮೂಗ ಕಂಡ ಕನಸಿನಂತಾಯಿತ್ತೆನ್ನ ಭಕ್ತಿ: ಗುಣವ ಹೇಳಬಾರದಾರಿಗೆಯೂ; ಕೇಳಲೆಂತೂ ಬಾರದು! ಎನ್ನ ಹೇಗತನವ ಮಾಣಿಸು, ಕೂಡಲಸಂಗಮದೇವಾ.
Transliteration Mūga kaṇḍa kanasinantāyitenna bhakti: Guṇava hēḷabāradārigeyū; kēḷalentū bāradu! Enna hēgatanava māṇisu, kūḍalasaṅgamadēvā.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 My piety has become Even as a dream as dumb man sees: You can neither tell nor hear What piety it is! Oh, let my foolishness Depart from me, O Lord Kūḍala Saṅgama! Translated by: L M A Menezes, S M Angadi
Hindi Translation गूँगे के स्वप्न सी मेरी भक्ति है । न उसका गुण बता सकता हूँ, न सुन भी सकता हूँ, मेरी मूर्खता दूर करो, कूडलसंगमदेव ॥ Translated by: Banakara K Gowdappa
Telugu Translation మూగవాడు కన్న కలయయ్యె నా భక్తి గుణ మెవ్వరికీ చెప్పకాదు వినిపింపరాదు నా యీ పేదతనము మాన్పుమో సంగమ దేవా! Translated by: Dr. Badala Ramaiah
Tamil Translation ஊமை கண்ட கனவனையதாம் என்பக்தி, இயல்பினை உரைக்கவுமில்லை கேட்கவுமிலை, என் அறியாமையைக் களைவாய் கூடல சங்கம தேவனே. Translated by: Smt. Kalyani Venkataraman, Chennai
Marathi Translation मुक्याच्या स्वप्नाप्रमाणे माझी भक्ती आहे. तो सांगू शकत नाही, ऐकूही शकत नाही. माझा मुर्खपणा दूर करा कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಮಾಣಿಸು = ಬಿಡು; ಹೇಗತನ = ಹುಚ್ಚು ಮೂರ್ಖತನ;
ಕನ್ನಡ ವ್ಯಾಖ್ಯಾನ ಭಕ್ತಿಯ ವಿಚಾರದಲ್ಲಿ ನಾನು ತೀರ ಅಜ್ಞ. ಆ ಬಗ್ಗೆ ನಾನು ಏನೊಂದನ್ನೂ ಮಾತನಾಡದವನಾಗಿರಲು ಕಾರಣ-ಆ ಬಗ್ಗೆ ನನಗೆ ಅನುಭವ ಸುತರಾಂ ಇಲ್ಲದಿರುವುದೇ ಆಗಿದೆ. ಆದರೆ ಜನ ಭಾವಿಸುವುದೇ ಬೇರೆ : ಇದು ತುಂಬಿದ ಕೊಡ ತುಳುಕುತ್ತಿಲ್ಲ, ಮಾತಿಗೂ ಮೀರಿದ ಅನುಭವ ಇವನದು, ಕಂಡ ಕನಸಿನ ಸೊಗಸನ್ನು ಮೂಕನು ಮಾತಿಲ್ಲದೆ ಬರಿಯ ಆನಂದಮುದ್ರೆಯಿಂದ ವ್ಯಕ್ತಪಡಿಸುವಂತೆ-ಇವನ ಶಾಂತ ಭಂಗಿ ಎಷ್ಟು ಸುಂದರವಾಗಿದೆ ಎಂದು ಕೊಂಡಾಡುವರು. ಭಕ್ತಿಯ ಬಗ್ಗೆ ಯಾರನ್ನಾದರೂ ನಾನೇ ಕೇಳಿ ತಿಳಿಯೋಣವೆಂದರೆ ಜನ ನನ್ನನ್ನು ಭಕ್ತಿಭಂಡಾರಿ ಎಂದು ತಿಳಿದ ಮೇಲೆ-ನಾನಿನ್ನಾರನ್ನಾದರೂ ಹೇಗೆ ಕೇಳಿತಿಳಿಯಲಿ-ವಾಸ್ತವವಾಗಿ ಪ್ರಶ್ನೆ ಹಾಕಲೂ ಬಾರದಷ್ಟು ಅಜ್ಞಾನ ನನಗೆ ಮೆತ್ತಿದೆ-ಎನ್ನುತ್ತ ಬಸವಣ್ಣನವರು ತಮ್ಮ ವಿನಯವನ್ನೇ ಮುಂದುಮಾಡಿ-ಭಕ್ತಿಯನ್ನು ಕರುಣಿಸೆಂದು ದೇವರನ್ನು ಪ್ರಾರ್ಥಿಸುತ್ತಿರುವರು. (ವಚನದಲ್ಲಿರುವ ಹೆಗ್ಗತನ ಎಂಬ ಮಾತಿನಿಂದ ಈ ಪ್ರಕಾರವಾಗಿ ವ್ಯಾಖ್ಯಾನಿಸಲಾಯಿತು.)

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು