ಕಾಣಿಯ ಲೋಭ ಕೋಟಿಯ ಲಾಭವ ಕೆಡಿಸಿದುದ ನಾನರಿಯೆನಯ್ಯಾ.
ಭಕ್ತಿಯ ಕುಳವ ನಾನರಿಯದೆ
ಮತಿಗೆಟ್ಟ ಪರಿಯ ನೋಡಯ್ಯಾ.
ಕೂಡಲಸಂಗನ ಶರಣರ ಸಂಗದಿಂದಲರಿದರೆ
ನಾನು ಬದುಕುವೆನಯ್ಯಾ.
Transliteration Kāṇiya lōbha kōṭiya lābhava keḍisiduda nānariyenayyā.
Bhaktiya kuḷavanānariyade
matigeṭṭa pariya nōḍayya.
Kūḍalasaṅgana śaraṇara saṅgadindalaridare
nānu badukuvenayyā.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 I never noticed how I marred
The profit of a million for
A farthing’s love.
Behold, Lord, how I lost
My senses, from my ignorance
What true devotion is!
I should be saved,O Lord
Kudala Sangama, if but I had
The company of Thy Śaraṇaś!
Translated by: L M A Menezes, S M Angadi
Hindi Translation मैं नहीं जानता, एक पैसे के लोभ ने
करोडों का लाभ नष्ट किया।
मैं नहीं जानता, भक्ति का स्वरुप
न जानने से किस प्रकार मति भ्रष्ट हुई ।
कूडलसंग के शरणों के संग से
जान लूँ, तो मेरी रक्षा होगी ॥
Translated by: Banakara K Gowdappa
Telugu Translation కాసు లాభమున కోటి లాభము
చెఱచుకొనువానిని నే చూడనయ్యా
భక్తులకులంబు చూడక
మతిచెడ్డ నా గతి చూడుమయ్యా !
సంగని శరణుల సంఘము తెలిపిన
బ్రతికెదనయ్యా నే బ్రతికేదనయ్యా !
Translated by: Dr. Badala Ramaiah
Tamil Translation காணியின் பேரவா பெருவரவினை யழித்ததை
நான் அறியேனையனே.
பக்தி நெறியறியாது அறிவிழந்தவழியை
நான் அறியேனையனே
கூடல சங்கனின் மெய்யடியார்
பிணைப்பாலறியின் நான் உய்வேனையனே.
Translated by: Smt. Kalyani Venkataraman, Chennai
Marathi Translation
आण्याचा लोभ कोटीचा फायदा नष्ट करतो हे मी जाणत नाही.
भक्तीकर न दिल्याने मती भ्रष्ट झाली हे जाणत नाही.
कूडलसंगमदेवाच्या शरणाच्या संगाला जाणले तर मी जगतो.
Translated by Shalini Sreeshaila Doddamani
ಶಬ್ದಾರ್ಥಗಳು ಕಾಣಿ = ; ಕುಳ = ; ಪರಿ = ಬಗೆ; ಮತಿ = ಬುದ್ದಿ; ಲೋಭ = ಆಸೆ; ಸಂಗ = ಸ್ನೇಹ;
ಕನ್ನಡ ವ್ಯಾಖ್ಯಾನ ವಿಷಯದ ಕಿಲುಬೆಗೆ ಲೋಭಿಸಿ ಭಕ್ತಿಸಂಪತ್ತನ್ನು ಕಳೆದುಕೊಂಡಿರುವುದಾಗಿ ಬಸವಣ್ಣನವರು ಶೋಕಿಸುತ್ತ-ಆ ತಮ್ಮ ರಿಕ್ತಪರಿಸ್ಥಿತಿಯನ್ನು-ಬಿಡಿಕಾಸಿನ ಮೇಲಣ ಲೋಭದಿಂದ ಕೋಟಿಧನವನ್ನು ಕೈಬಿಟ್ಟು ಕಳೆದುಕೊಂಡುದಕ್ಕೆ ಹೋಲಿಸಿರುವರು. ಮತ್ತು ತಮಗಾಗಿರುವ ಆ ಭಕ್ತಿಯ ನಷ್ಟವನ್ನು ಸರಿತೂಗಿಸಿಕೊಳ್ಳಲು ಶರಣರ ಸಂಗ ಮತ್ತು ಅವರೊಡನೆ ನಡೆಸುವ ಸತ್ಪ್ರಸಂಗವಲ್ಲದೆ ಅನ್ಯಮಾರ್ಗವಿಲ್ಲವೆಂದೂ ನಿಶ್ಚಯಿಸುತ್ತಿರುವರು, ಕುಳವೆಂದರೆ ವಿವರ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು