ಭಕ್ತನ ಭಕ್ತಸ್ಥಲ - ಲಿಂಗನಿಷ್ಠೆ
ಮುನ್ನೂರರವತ್ತು ದಿನ ಶ್ರವವ ಮಾಡಿ,
ಕಳನೇರಿ ಕೈಮರೆದಂತಾಯಿತ್ತೆನ್ನ ಭಕ್ತಿ!
ಎನಿಸು ಕಾಲ ಲಿಂಗಾರ್ಚನೆಯ ಮಾಡಿ ಏವೆನಯ್ಯಾ
ಮನದಲ್ಲಿ ದೃಢವಿಲ್ಲದನ್ನಕ್ಕ?
ಕೊಡನ ತುಂಬಿದ ಹಾಲ ಕೆಡಹಿ,
ಉಡುಗಲೆನ್ನಳವೆ ಕೂಡಲಸಂಗಮದೇವಾ?
Transliteration Munnūraravattu dina śravava māḍi,
kaḷanēri kaimaredantāyittenna bhakti!
Enisu kāla liṅgārcaneya māḍi ēvenayyā
manadalli dr̥ḍhavilladannakka?
Koḍana tumbida hāla keḍahi,
uḍugalennaḷave kūḍalasaṅgamadēvā?
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 My piety has been as one
Who has practiced
Three hundred and sixty days
And, when he must enter the ring,
Forgotten all his holds!
What did it help to do
The Liṅga-rites for many a day,
If there was no steadfastness
Within my mind?
Can I, O Kūḍala Saṅgama Lord,
Spill a bucket full of milk
And mop it back again?
Translated by: L M A Menezes, S M Angadi
Hindi Translation तीन सौ साठ दिन अभ्यास कर
रणक्षेत्र में हस्त-लाघव भूलने की भाँति है मेरी भक्ति,
मन में दृढता न हो, तो कितने ही काल तक
लिंगार्चन कर क्या करूँगा?
भरे घडे का दूध गिराकर
उसे बटोर सकता हूँ कूडलसंगमदेव?
Translated by: Banakara K Gowdappa
Telugu Translation మున్నూటఱవై దినములు సాముచేసి
రణముజొచ్చి చేయి మరచినట్లయ్యె నా భక్తి
ఎంత కాలము లింగార్చనచేసి ఏమి ఫలమయ్యా,
మనసున దృఢము లేనంతదాక?
కుండనిండిన పాలు సెరచి
ఆరగింపగ నా తరమే కూడలసంగమదేవా!
Translated by: Dr. Badala Ramaiah
Tamil Translation முந்நூற்றறுபது நாளும் சிலம்பம் பழகிக்
களனேறிக் கைமறந்ததனையதாம் என்பக்தி,
எத்துணைக்காலம் இலிங்கத்தைத் தூவித் தொழுது
என்செய்வேனையனே, மனத்திலே உரனற்றவரையிலே?
குடம் நிறைந்த பாலைக் கவிழ்த்துருட்டி
ஒன்று சேர்க்கவியலுமோ கூடல சங்கம தேவனே?
Translated by: Smt. Kalyani Venkataraman, Chennai
Marathi Translation
तिनसे साठ दिवस गेले साधनेत
विसरला युध्दात, कौशल्य ते
बहूत दिवस केली लिंर्गाचना
परी दृढ होईना, मन त्यात
घागर दुधाची, भरलेली सांडली
नाही घेता आली , भरोनिया
कूडलसंगम देवा ! व्यर्थ सारे गेले
भाव ना ठेविले तुम्हावरी
अर्थ - कित्येक दिवस नित्य नेमाने लिंगार्चना करुनही मन दृढ होत नसेल, चित्त एकाग्र होत नसेल, मनाची चंचलता दूर होत नसेल तर त्याची लिंगार्चना व्यर्थ होय. ती वाया गेली असे समजावे. जसे अनेक दिवस सतत साधना, कवायत व युद्धाचे सर्व डाव पेच शिकवून ऐन युद्धाचे वेळी आपल्यातील कौशल्यच विसरावे तसे हे ठरेल. दुरहून आणलेले घागरीतील दूध ऐनवेळी जमिनीवर सांडत्यास जसे वाया जाते. किंवा ते पुन्हा भरून घेता येत नाही. त्याप्रमाणे जाणावे. पुन्हा जन्मभर पुण्यरूपी दूध शरीररूपी घागरीत भरण्यासाठी पूर्ण हयात घालवावी लागेल.
Translated by Rajendra Jirobe, Published by V B Patil, Hirabaug, Chembur, Mumbai, 1983
तीनशे साठ दिवस साधना केल्यानंतर
रणांगणात शस्त्र विसरल्यासम माझी भक्ती.
अनेक दिवस लिंगार्चना करुनही
मन दृढ झाले नाही तर काय प्रयोजन ?
दूधाने भरलेली घागर सांडल्यावर पुन्हा
ते दूध भरता येईल कूडलसंगमदेवा?
Translated by Shalini Sreeshaila Doddamani
ಶಬ್ದಾರ್ಥಗಳು ಅರ್ಚನೆ = ಪೂಜೆ; ಅಳವೆ = ; ಕಳ = ; ಶ್ರವ = ಸಾಧನ;
ಕನ್ನಡ ವ್ಯಾಖ್ಯಾನ ಮಿಂಚಿನಂತೆ ಕರ್ಮ ನಮ್ಮೆದುರಿಗೆ ಸುಳಿದು ಸಿಡಿಲಿನಂತೆರಗಿದಾಗ-ಆ ಕರ್ಮದೊಡನೆ ಹೋರಾಡಲೆಂದೇ ಮುನ್ನೂರ ಅರವತ್ತು ದಿನವೂ ಲಿಂಗಾರ್ಚನೆಯ ಶಸ್ತ್ರಾಭ್ಯಾಸ ಮಾಡಿದ ನಾವು-ಮಾಡಿ ನೀಡುವ ದಾಸೋಹ ಸಮರಕಾಲದಲ್ಲಿ ಕೈಮರೆಯಬಾರದು, ಆಂದರೆ ಲಿಂಗಾರ್ಚನೆಯೆಂಬುದು ಗರುಡಿಯ ಸಾಧನೆಯಂತೆ ಒಂದು ಬರಿಯ ತರಬೇತಿ-ಜಯದ ಫಲಿತಾಂಶವಿರುವುದು ಮಾಡುವ ದಾಸೋಹದ ಮನೋದಾರ್ಢ್ಯದಲ್ಲಿ.
ಈ ಮನೋದಾರ್ಢ್ಯ ಒಂದು ಕ್ಷಣ ತಪ್ಪಿದರೂ ಅನುಗಾಲ ಲಿಂಗಕ್ಕೆರೆದು ಹೃದಯಕಲಶದಲ್ಲಿ ತುಂಬಿಟ್ಟುಕೊಂಡಿದ್ದ ಭಕ್ತಿರಸಾಮೃತ ಕ್ಷಣಾರ್ಧದಲ್ಲಿ ಚೆಲ್ಲಿ ಹೋಗುವುದು. ಹಾಲು ತುಂಬಿದ ಕೊಡವನ್ನು ಕ್ಷಣ ಕೈಮರೆತರೂ ಬಿದ್ದು ಹಾಲು ಚೆಲ್ಲಿ ಹೋಗುವುದು-ಮರಳಿ ಅದನ್ನು ಬಳಿದು ತುಂಬಿಕೊಂಡವರುಂಟೆ ?
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು