ಶಬ್ದಸುಖಕ್ಕೆ ಮಚ್ಚಿ, ಮಾತಿಂಗೆ ಮಾತನೆ ಕೊಟ್ಟು ಕೆಟ್ಟೆನಯ್ಯಾ ;
ಅನುಭಾವ ಅಕ್ಕವೆಯಾಗದೆ, ಬೆಬ್ಬನೆ ಬೆರೆತೆನಯ್ಯಾ !
ಅಮೃತದ ಕೊಡನ ತುಂಬಿ ಒಡೆಯೆ ಹೊಯ್ದು ಅರಸಲುಂಟೆ?
ಸ್ವಾಮಿ-ಭೃತ್ಯಸಂಬಂಧವೆ ಎನ್ನ ಭಕ್ತಿ:
ಪ್ರತ್ಯುತ್ತರ ನಾಯಕನರಕ, ಕೂಡಲಸಂಗಮದೇವಾ.
Transliteration Śabdasukhakke macci, mātige mātane koṭṭu keṭṭenayyā;
anubhāva akkaveyāgade, bebbane beretenayyā!
Amr̥tada koḍana tumbi oḍeya hoydu arasaluṇṭe?
Svāmi-bhr̥tyasambandhave enna bhakti:
Pratyuttara nāyakanaraka, kūḍalasaṅgamadēvā.
Manuscript
English Translation 2 Enamoured of the joy of words
And bandying word for word,
I wrought my ruin, Lord!
Unsteeped in the Experience,
I bloated till I burst!
When you have struck
The pot of necter till it broke,
Must you now gather it?
My piety should be
Even as the bond that binds
A master and his slave:
All answer is arch-hell,
O Kūḍala Saṅgama
Translated by: L M A Menezes, S M Angadi
Hindi Translation शब्दसुख से मोहित होकर
वाद-विवाद कर मैं नष्ट हुआ।
अनुभाव का पाचन न होने से
मैं घमंड में फूल गया ।
अमृत से भरा घडा फोडकर
उसे बटोर सकते हैं?
स्वामी-सेवक संबंध ही मेरी भक्ति है;
प्रत्युत्तर से नायक नरक होगा कूडलसंगमदेव ॥
Translated by: Banakara K Gowdappa
Telugu Translation శబసుఖమునబడి మాటకు మాట పెంచి చెడితినయ్యా
అనుభావ మక్కరకురాక
బెబ్బర బెఱగై తినయ్యా!
అమృతపాత్ర నింపి పగులవై చి
మరల పట్టుకొనవచ్చునే!
స్వామిభృత్య సంబంధమే నా భక్తి
ప్రత్యుత్తరము మహానరకము కూడల సంగమ దేవా
Translated by: Dr. Badala Ramaiah
Tamil Translation சொல்லாடலை நயந்து சொல்லிற்குச்
சொல்லாடிக் கெட்டேனையனே
ஆன்ம உணர்வு வளராது மிக்க செருக்குற்றேனையனே
அமுதத்தைக் குடத்திலே நிறைத்து
உடையவைத்துத் தேடுவாருண்டோ?
சுவாமி தொண்டன் தொடர்பே என்பக்தி
மறுமொழி பகர்தல் கீழ் நரகம்
கூடல சங்கம தேவனே.
Translated by: Smt. Kalyani Venkataraman, Chennai
Marathi Translation
शब्दाच्या सुखाला होऊन मोहित -
वाद प्रतिवादात, जन्म गेला
मदोन्मत झाले, तयाने जीवन
अनुभव पूर्ण, नाही आला
भक्ती भाव स्वामी, सेवका समान
मिळे का फोडून, अमृत कुंभ
कूडलसंगमदेवा! वाईट हा नाद
वाद प्रतिवाद, नरक जाणा
अर्थ – शब्दाच्या कोटी करून वाद प्रतिवाद करून शास्त्रार्थ इत्यादी करून शेवटी काय मिळवाल. पण त्यात जिंकले तर सुख, नाव लौकिक व प्रतिष्ठा मिळवाल. पण त्याने श्रेष्ठ अनुभव आंतरिक अनुभूती, जीवन मुक्ती व शाश्वत समाधान मिळणार नाही. उलट अहंकारी बनून जीवन वाया जाईल. जसे अमृतकुंभात जीवनरस आहे काय? यावर तर्क-वितर्क, वाद-विवाद करून त्यातच जिवन संपवून काय मिळणार? हाती सापडलेले श्रेष्ठ अनुभव व अनुभूतीरूपी अमृतकुंभाचा उपयोग अंतरमुख होऊन घ्यावा. त्याचा बाजार मांडणे योग्य नाही. हाती आलेले जीवनरुपी अमृतकुंभ पुन्हा सापडणार आहे का? माझ्या कूडलसंगमदेवाची भक्ती म्हणजे मालक, सेवक याप्रमाणे होय. मालकाचे विश्वासू न ठरता सेवकांनी भक्तीने आपआपसात भांडण, वाद-प्रतिवाद करू नये. तसे केल्याने ते महानरकसमान जाणावे.
Translated by Rajendra Jirobe, Published by V B Patil, Hirabaug, Chembur, Mumbai, 1983
शब्दसुखावर मोहीत होऊन वाद
विवादात जीवन व्यर्थ घालविले देवा.
अनुभाव पक्व न होता मिरविलो मी.
अमृताने भरलेली घागर फोडून परत ती मिळेल ?
स्वामी-सेवक संबंध जशी नाही
माझी भक्ती प्रत्युत्तर घोर नरक आहे कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಅಕ್ಕವೆ = ಜೀರ್ಣವಾಗುವಿಕೆ, ಪ್ರಯೋಜನ, ಅಜೀರ್ಣ; ಅನುಭಾವ = ಸಾಕ್ಷಾತ್ಕಾರ; ಅರಸು = ಹುಡುಕು; ಒಡೆಯ = ಯಜಮಾನ; ಬಿರಿದು = ಹರಳು; ಭೃತ್ಯ = ಸೇವೆ; ಶಬ್ಥಸುಖ = ;
ಕನ್ನಡ ವ್ಯಾಖ್ಯಾನ ತಮಿಳುನಾಡಿನ ಶೈವಪಂಥದವರು ಭಕ್ತಿಯನ್ನು ದಾಸಮಾರ್ಗ-ಸತ್ಪುತ್ರಮಾರ್ಗ-ಸಖಾಮಾರ್ಗ-ಸನ್ಮಾರ್ಗ ಎಂದು ನಾಲ್ಕು ವಿಧವಾಗಿ ವಿಂಗಡಿಸಿ ಅವನ್ನು ಕ್ರಮವಾಗಿ ಆಚರಿಸಿದವರು ಅಪ್ಪರ್-ತಿರುಜ್ಞಾನ ಸಂಬಂಧರ್-ಸುಂದರಮೂರ್ತಿ-ಮಾಣಿಕ್ಯ ವಾಚಗರ್ ಎಂದು ಗಣನೆ ಮಾಡುವರು.
ದೇವರನ್ನು ಯಜಮಾನನೆಂದೂ-ತಾನು ಅವನ ಸೇವಕನೆಂದೂ ಉಪಾಸಿಸುವುದು ದಾಸಮಾರ್ಗ-ಅದನ್ನೇ ಬಸವಣ್ಣನವರು ಸ್ವಾಮಿಭೃತ್ಯಸಂಬಂಧವೆಂದು ಹೇಳುತ್ತಿರುವರು. ಶಿವಶರಣರು ಜಂಗಮಲಿಂಗ (ತಿರುಗಾಡುವ ಲಿಂಗ) ಸ್ವರೂಪಿಳಾಗಿರುವುದರಿಂದ ಅವರೊಡನೆಯೂ ಭಕ್ತನಾದವನು ಇದೇ ಸ್ವಾಮಿಭೃತ್ಯಸಂಬಂಧವನ್ನು ಇಟ್ಟು ನಡೆದುಕೊಳ್ಳಬೇಕು.
ಆ ಶರಣರೊಡನೆ ಆಧ್ಯಾತ್ಮವನ್ನು ಕುರಿತು ಸಂಭಾಷಿಸುವ (ಅನುಭಾವ) ಸಂದರ್ಭದಲ್ಲಿಯೂ-ಅನುಭಾವ ವರ್ಧಿಸಬೇಕೇ ಹೊರತು-ಮಾತಿಗೆ ಮಾತು ಮಥಿಸಿ ಅಹಂಕಾರದ ವಿಷ ಹೊಗೆಯಾಡಬಾರದು. ಮನಕ್ಕೆ ಮನ ಸೋಕಿ ಜ್ಯೋತಿರ್ಲಿಂಗ ಸ್ಫುರಿಸಬೇಕು. ಹೀಗಾಗಲು-ನಾವು ಶರಣರೊಡನೆ ಚರ್ಚಿಸುವಾಗ-ತಿಳಿಯಬೇಕೆಂಬ ವಿನಯ ಬೇಕೇ ಹೊರತು. ತಿಳಿದಿರುವೆನೆಂಬ ಚಕಮಕಿ ಸಲ್ಲದು. ಈ ದುರಹಂಕಾರವನ್ನು ಶರಣರಲ್ಲಿ ಯಾವ ಕಾರಣಕ್ಕಾಗಿಯೇ ಆಗಲಿ ಭಕ್ತನು ಪಡಬಾರದು-ಪಟ್ಟನೋ-ಹಾಲು ತುಂಬಿದ ಕೊಡ ಕೆಳಗೆ ಬಿದ್ದಂತೆ-ಪತಿತನಾಗಿ ಪಡೆದಿದ್ದ ಸಿದ್ಧಿಯನ್ನೆಲ್ಲಾ-ಮರಳಿ ಪಡೆಯದ ರೀತಿಯಲ್ಲಿ ನೀಗಿಕೊಳ್ಳುವನು, ಅಳ್ಕುಜೀರ್ಣೆ – ಕೇಶಿರಾಜ ಅಳ್ಕಮೆ>ಅಕ್ಕವೆ. ಅಕ್ಕವೆಯಾಗದೆ ; ವೃದ್ಧಿಯಾಗದೆ.
ನೋಡಿ ವಚನ-243
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು