ಅಂಕ ಓಡಿದರೆ ತೆತ್ತಿಗಂಗೆ ಭಂಗವಯ್ಯಾ:
ಕಾದಿ ಗೆಲಿಸಯ್ಯಾ ಎನ್ನನು-
ಕಾದಿ ಗೆಲಿಸಯ್ಯಾ ಕೂಡಲಸಂಗಮದೇವಯ್ಯಾ.
ಎನ್ನ ತನು-ಮನ -ಧನದಲ್ಲಿ ವಂಚನೆಯಿಲ್ಲದೆ.
Transliteration Aṅka paḍedare tettigaṅge bhaṅgavayya:
Kādi gelisayyā ennanu-
kādi gelisayyā kūḍalasaṅgamadēvayya.
Enna tanu-mana -dhanadalli van̄caneyillade.
Manuscript
English Translation 2 If the warrior runs away,
His master bears the shame:
You make me fight and win;
You make me fight and win,
O Kūḍala Saṅgama Lord,
By clearing all I am and have
Of fraud!
Translated by: L M A Menezes, S M Angadi
Hindi Translation यदि सैनिक भाग जाय
तो सेनानी के लिए कलंक है:
युद्ध कराओ विजयी बनाओ मुझे,
युद्ध कराओ विजयी बनाओ कूडलसंगमदेव,
मेर तन-मन-धन का छल छुडाकर ॥
Translated by: Banakara K Gowdappa
Telugu Translation భటుడ్నోడి పారిన స్వామికి భంగమయ్యా
పోర గెలిపింపుమయ్యా నన్ను
పోరి గెలిపింపుమా కూడల సంగమదేవా;
నా తను-మను-ధనములు వంచనగానట్లు
Translated by: Dr. Badala Ramaiah
Tamil Translation வீரன் புறமுதுகிடுதல் உடையனுக்கு
இழுக்கு ஐயனே
போராடி எனை வெல்லச் செய்வாயையனே
போராடி வெல்லச் செய்வாயையனே
கூடல சங்கம தேவனே, என்
உடல், மனம், செல்வத்திலே ஏய்ப்பின்றி.
Translated by: Smt. Kalyani Venkataraman, Chennai
Marathi Translation
रणभूमितून सैनिक पळाला
पराभूत झाला सम्राट तो
लढवूनि मजला विजयी करावे
मिळवूनी द्यावे, दिग्विजय
कूडलसंगमदेवा! तन मन धनाने
शरण आल्याने विजयी करा
अर्थ- जर रणभूमीतून सैनिक पळ काढल्यास सम्राटांचा पराभव होतो. त्याप्रमाणे तुझ्या इहलोकातून मी पलायन केल्यास सम्राटाच्या सम्राटा हे परमेश्वरा! यात तुझाच पराभव होईल. माझ्या पलायनास कारणीभूत असलेल्या बाबी म्हणजे तन, मन व धनाची विवंचना होत म्हणून माझ्या मनातील त्यासंबंधीची वंचना दूर कर हे सारे तुझ्या चरणी व तुझ्या शरणाच्या चरणी अर्पण केले आहे व तुला शरण आलो आहे. म्हणून मला विजयी करावे अर्थात मुक्त करावे अशी महात्मा बसवेश्वर कूडलसंगमदेवाच्या (परमेश्वराच्या) चरणी प्रार्थना करीत आहेत.
Translated by Rajendra Jirobe, Published by V B Patil, Hirabaug, Chembur, Mumbai, 1983
सैनिकाचे पलायन म्हणजे सम्राटाचा पराभव देवा.
युध्द करवून विजयी करा. युध्द करवून विजयी करा
कूडलसंगमदेवा, तन-मन-धनात वंचना रहित करूनी.
Translated by Shalini Sreeshaila Doddamani
ಶಬ್ದಾರ್ಥಗಳು ಅಂಕ = ಸೈನಿಕ, ಭಟ, ಯುದ್ದ, ಕಾಳಗ; ಕಾದಿ = ; ತನು = ಶರೀರ; ತೆತ್ತಿ = ಸೇವೆ; ಭಂಗ = ಅವಮಾನ;
ಕನ್ನಡ ವ್ಯಾಖ್ಯಾನ ತನು ಮನ ಧನವನ್ನು ಗುರು ಲಿಂಗ ಜಂಗಮಕ್ಕೆ ಪಣವಾಗಿಟ್ಟು ದಾಸೋಹ ಸಂಗ್ರಾಮದಲ್ಲಿ ತಮ್ಮ ಧರ್ಮವೀರವನ್ನು ಮೆರೆಯಲು ಶಕ್ತಿಮೀರಿ ಶ್ರಮಿಸುವುದಾಗಿಯೂ-ಅದನ್ನು ಈಡೇರಿಸಲಾಗದ ದುರ್ಭರ ಸಂಕಷ್ಟ ಒದಗಿದ ಪಕ್ಷಕ್ಕೆ-“ಈ ನನ್ನ ಆಳು ಸೋತರೆ ಅವಮಾನ ನನ್ನದಲ್ಲವೇ” ಎಂದು ಮಮತೆಯಿಂದ ನೀನೇ ನನ್ನ ಮನಭಾವಪ್ರಾಣದಲ್ಲಿ ಶಕ್ತಿಯಾಗಿ ನಿಂತು ಹೋರಾಡಿ ಗೆಲಿಸಬೇಕು-ಎಂದು ಬಸವಣ್ಣನವರು ಆ ದೇವರನ್ನು ಪ್ರಾರ್ಥಿಸಿಕೊಳ್ಳುತ್ತಿರುವರು.
ಯೋಧನು ಕಾದಲಾರದೆ ಹಿಮ್ಮೆಟ್ಟುವ ದುರ್ಘಳಿಗೆ ಬಂದರೆ-ಅವನ ಒಡೆಯನು ತಾನೇ ಬಂದು ಕಾದಾಡಿ-ಆ ಯೋಧನನ್ನು ಗೆಲುಸುವಂಥ ಯುದ್ಧ ಸಂಪ್ರದಾಯವನ್ನು ನಾವಿಲ್ಲಿ ನೆನೆಯಬೇಕು.
ದಾಸೋಹ ಸಂಗ್ರಾಮದಲ್ಲಿ ಗೆಲ್ಲುವುದೆಂದರೆ ಅಲ್ಲಿನಿಯುಕ್ತನಾದ ಭಕ್ತಯೋಧನು ತನ್ನ ತನು ಮನ ಧನವನ್ನು ಲೋಕಕ್ಕೆ ನಿಶ್ಯೇಷವಾಗಿ ವೆಚ್ಚಮಾಡಲು ಅಡ್ಡಿಯಾಗಿ ಬರುವ ಆಶೆ ಮುಂತಾದ ದೌರ್ಬಲ್ಯಗಳನ್ನು ಎದುರಿಸಿ ಹಿಮ್ಮೆಟ್ಟಿಸಿ ಜಯಶಾಲಿಯಾಗಬೇಕು-ಅದಕ್ಕೆ ಶಿವಕೃಪೆ ಬೇಕೆಂಬುದಭಿಪ್ರಾಯ.
ಮತ್ತು ಈ ಭಕ್ತನು ಮಾಡುವ ದಾಸೋಹಕಾರ್ಯಕ್ಕೆ ಯಜಮಾನ ಶಿವನೆಂದೂ, ತಾನು ದುಡಿಯುವ ಆಳು ಮಾತ್ರವೆಂದೂ ಬಸವಣ್ಣನವರು ಭಾವಿಸಿರುವುದು ಗಮನಾರ್ಹವಾಗಿದೆ, ಈ ದಾಸೋಹಂ ಮನೋಭಾವವೇ ದಾಸೋಹದ ಜೀವಾಳ.(ಅಂಕ : ಯೋಧ, ತೆತ್ತಗ : ಒಡೆಯ).
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು