ಹೇಡಿ ಬಿರುದ ಕಟ್ಟಿದಂತಾಯಿತ್ತೆನ್ನ ವೇಷ:
ಕಾದಬೇಕು, ಕಾದುವರೆ ಮನವಿಲ್ಲ-
ಆಗಳೆ ಹೋಯಿತ್ತು ಬಿರುದು:
ಹಗರಣ ನಗೆಗೆಡೆಯಾಯಿತ್ತು!
ಮಾರಂಕ ಜಂಗಮ ಮನೆಗೆ ಬಂದರೆ
ಕಾಣದಂತಡ್ಡ ಮುಸುಡಿಟ್ಟಡೆ
ಕೂಡಲಸಂಗಮದೇವ, ಜಾಣ, ಮೂಗ ಹಲುದೋರೆ ಕೊಯ್ವ!
Transliteration Hēḍi biruda kaṭṭidantāyittenna vēṣa:
Kāḍabēku, kāḍuvare manavilla-
āgaḷe hōyittu birudu:
Hagaraṇa nagegeḍeyāyittu!
Māraṅka jaṅgama manege bandare
kāṇadantaḍḍa musuḍiṭṭaḍe
kūḍalasaṅgamadēva, jāṇa, mūga haludōre koyva!
Manuscript
English Translation 2 My garb is as the imblem fo valour
Worm by a craven man;
I have to fight-I have no mind to fight!
Mhe emblem is already gone!
My bluster has become a joke!
When Jaṅgama , the opposing foe,
Knocks at my door,
If I turn my face a way
So that he cannot see,
Lord Kūḍala Saṅgama, the wise.
Will chop my nose until
My teeth lie bare!
Translated by: L M A Menezes, S M Angadi
Hindi Translation भीरु का बंधा बिरद सा है,मेरा वेश
लडना है, किंतु लडने में मन नहीं है
तभी मेरा बिरद चला गया;
अभिनय उपहास बन गया
प्रति द्वंद्वी जंगम के घर आने पर मुँह छिपा लूँ,
तो चतुर कूडलसंगमदेव आदंत नाक काटेंगे ॥
Translated by: Banakara K Gowdappa
Telugu Translation పేడికి బిరుదిచ్చినట్ల య్యె నా వేషము
పోరవలె`పోరుటకు మనసు లేదు
ఆరడిjైుపోయె నా బిరుదు
నవ్వులపాలయ్యె నా వేషము
ప్రతిస్పర్ది జంగముడిరటికి రాగ
చూడనట్లు ముసుగును పెట్ట పలుదోప
ముక్కుకోయక మానునే సంగమదేవుడు?
Translated by: Dr. Badala Ramaiah
Marathi Translation
भित्र्या पदवीधारकासारखा आहे माझावेष.
युध्द केले पाहिजे पण लढण्याची इच्छा नाही.
पदवी राहिली नाही, ढोंग हास्यास्पद झाले.
प्रतियोध्दा जंगमघरीयेता तोंड फिरविले तर,
दात दिसेल असे नाक कापेल चतुर कूडलसंगमदेव.
Translated by Shalini Sreeshaila Doddamani
ಶಬ್ದಾರ್ಥಗಳು ಕಾದು = ಹೋರಾಡು; ಜಂಗಮ = ನಡೆದಾಡುವ ಜೀವವಿರುವ; ಬಿರಿದ = ಹರಳಿದ; ಮಾರಂಕ = ;
ಕನ್ನಡ ವ್ಯಾಖ್ಯಾನ ಉಗ್ಘಡಿಸಿಕೊಳ್ಳುವ-ಮೂರು ಲೋಕದ ಗಂಡ, ಅರಿರಾಯರ ಮಿಂಡ ಮುಂತಾದ ಬಿರುದುಗಳೂ, ಧರಿಸಿಕೊಳ್ಳುವ ಕಾಲಪೆಂಡೆಯ ಮುಂತಾದ ಬಿರುದಾಂಕಿತಗಳೂ-ವಿಜಯಶಾಲಿಯಾಗಿ ಹಿಂದಿರುಗಿ ಬರುವ ಶೂರನಿಗೆ ಭೂಷಣವೇ ಹೊರತು-ಪ್ರಾಣದ ಮೇಲಣ ಆಶೆಯಿಂದ ಮೈಗಳ್ಳನಾಗಿ ಶತ್ರುಗಳಿಗೆ ಬೆಂಗೊಟ್ಟು ಓಡಿಬರುವ ಹೇಡಿಗಲ್ಲ-ಅದೆಲ್ಲಾ ಅವನಿಗೆ ಹಾಸ್ಯಾಸ್ಪದ. ಇಂಥ ಹೇಡಿಗೆ ಬಸವಣ್ಣನವರು ತಮ್ಮನ್ನು ಹೋಲಿಸಿಕೊಂಡು-ತಮ್ಮ ಭಕ್ತಿಭಂಡಾರಿ ಮುಂತಾದ ಬಿರುದಗಳೂ, ವಿಭೂತಿ ರುದ್ರಾಕ್ಷಿನಂದಿಯುಂಗುರ ಮುಂತಾದ ಲಾಂಛನಗಳೂ ನಗೆಗೀಡಾದುವೆನ್ನುವರು.
ಮನೆಗೆ ಬಂದ ಜಂಗಮಕ್ಕೆ ಸೇವೆ ಮಾಡಬೇಕು-ಮಾಡಲಾರದೆ-ಅವನನ್ನು ದೂರದಿಂದಲೇ ಕಂಡು ಕಣ್ತಪ್ಪಿಸಿಕೊಳ್ಳಲು ಮುಖ ತಿರುಗಿಸಿದರೆ-ಅದು ಎದುರಿಸಬೇಕಾದ ಧರ್ಮಯುದ್ಧದಲ್ಲಿ ತೋರಿದ ಹೇಡಿತನವಲ್ಲದೆ ಮತ್ತೇನು ಎನ್ನುತ್ತ ಬಸವಣ್ಣನವರು ಭಾವಿಸುತ್ತಿರುವುದು ಅವರ ಅತ್ಮಶೋಧನೆಯ ನಿರ್ದಾಕ್ಷಿಣ್ಯಕ್ಕೆ ಸಾಕ್ಷಿಯಾಗಿದೆ.
ವಿ : ಅಂಕ : ಯೋಧ, ಮಾರಂಕ : ಪ್ರತಿಯೋಧ,ಗಳೆ : ಯುದ್ದಪ್ರತಿಜ್ಞೆ, ಹಗರಣ>ಪ್ರಕರಣ : ವಿಡಂಬನಾತ್ಮಕವಾದ ಒಂದು ನಾಟಕಭೇದ. ಭಕ್ತನ ಧರ್ಮಶೌರ್ಯವು ನಿರ್ಣಯವಾಗುವುದು-ಜಂಗಮ ಬಂದು ಆ ಭಕ್ತನ ಎದುರಿಗೆ ನಿಂತಾಗ, ಭಕ್ತನು ಹಿಂತೆಗೆಯದೆ ಜಂಗಮವನ್ನು ತೃಪ್ತಿಪಡಿಸಿದರೆ ಆಗ ಆ ಭಕ್ತನು ಗೆದ್ದಂತೆ-ಇಲ್ಲದಿದ್ದರೆ ಸೋತಂತೆ. ಇಂಥ ಯೋಧ-ಪ್ರತಿಯೋಧ ಪ್ರತಿಮೆಯು ಈ ವಚನೋಕ್ತಿಯ ಹಿನ್ನೆಲೆಗಿದೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು