ಅಚ್ಚ ಶರಣರು ನಿಮ್ಮ ನಿಚ್ಚ ನಿಚ್ಚ ನೆನೆವರು;
ಬಚ್ಚ ಬಿರಿಯ ಮಾತನಾಡುವೆನು!
ಒಪ್ಪಚ್ಚಿ ಅರೆಭಕ್ತಿ ನೆನೆಯಲೀಯದು ನಿಮ್ಮ;
ಮೆಚ್ಚರು ನಿಮ್ಮ ಶರಣರು ಎನ್ನ, ಕೂಡಲಸಂಗಮದೇವಾ.
Transliteration Acca śaraṇaru nim'ma nicca nicca nenevaru;
bacca biriya mātanāḍuvenu!
Oppacci arebhakti neneyalīyadu nim'ma;
meccaru nim'ma śaraṇaru enna, kūḍalasaṅgamadēvā.
Manuscript
English Translation 2 The real Śaraṇās
Invoke Thee every day:
I speak but hollow words!
Not even once does this
Lukewarm devotion allow me to think of Thee;
Therefore, Thy Śaraṇās love me not,
O Kūḍala Saṅgama Lord!
Translated by: L M A Menezes, S M Angadi
Hindi Translation सत्य शरण नित्य तव स्मरण ध्यान करते हैं
मैं निरर्थक बातें करता हूँ ।
मेरी अधूरी भक्ति एक बार भी
तव स्मरण करने नहीं देती ।
तव शरण मुझे नहीं चाहते कूडलसंगमदेव ॥
Translated by: Banakara K Gowdappa
Telugu Translation నిక్కపు భక్తులు నిను దినదినము తలతురు
వట్టిమాటల వాగెద నేను ఒకసారియూ
నిన్ను స్మరింపనీదు నా కొఱభక్తి
నీ శరణులునన్ను మెచ్చరు కూడల సంగమ దేవా!
Translated by: Dr. Badala Ramaiah
Marathi Translation
शरण गुंतला तुझ्या स्मरणात
वल्गना करण्यात गुंतलो मी
स्वतःचे पांडित्य, जगा दाखवीत
वेळ तो व्यतीत झाला माझा
भक्ति नाही जोवर, होऊनि अंतर्मूख
ईश्वरी ते सुख मिळे कैसे ?
ईश्वर प्राप्तीचा मार्ग मी न जाणिला
सांगत सुटला, मोठेपण !
वाट चाले शरण, अंतर्मुख होऊनि
तया संगे धाऊनि, गेलो नाही
कूडलसंगमदेवा ! शरणांच्या दारी
मज भक्ति खरी, नाही नाही
अर्थ - शिवशरण नित्यनेमाने परमेश्वराचे स्मरण करण्यात व सदाचारात गुंतले असता मी लोकापुढे देवाचे गुण वर्णन करण्यात व स्वतःचे पांडित्य दाखविण्यात वेळ घालविला. मला परमेश्वराचा साक्षात्कार झाला. माझ्या स्वप्नात देव आला अशा तऱ्हेची वल्गना करून लोकात आपला मोठेपणा दाखविण्यात जीवन व्यर्थ केले. आणि त्यातच चैतन्य शक्ती नष्ट झाली. त्याचे नामस्मरण करण्यात वेळ मिळाला नाही. अशा तऱ्हेने माझी भक्ति अधुरी ठरली. म्हणून वल्गना न करता शरणांच्या सत्संगात राहिलो असतो तर मोक्षला पोहचलो असतो. अशा तऱ्हेने लोक कल्याणार्थ महात्मा बसवेश्वर आपल्यावर आरोप लादून घेऊन लोकातील दंभाचार व वल्गना काढून टाकू इच्छितात इत्यर्थ: परमेश्वरी साक्षात्काराचा अनुभव व अनुभूती व्यक्त करण्यास शब्द अपुरे पडतात. ते शब्दात व्यक्त करण्याचा प्रयत्न केल्यास त्याने काहीही साधू शकणार तर नाहीच उलट चैतन्य शांती व भक्तिचा ऱ्हास होतो.
Translated by Rajendra Jirobe, Published by V B Patil, Hirabaug, Chembur, Mumbai, 1983
शरण आपले स्मरण नित्य करतात. व्यर्थ गोष्टी मी बोलतो.
माझी अर्धवट भक्ती तुमचे स्मरण करु देत नाही.
तुमचे शरण मला मानणार नाहीत कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಅರೆಭಕ್ತಿ = ನಿಜವಲ್ಲದ ಭಕ್ತಿ; ಬಚ್ಚ = ;
ಕನ್ನಡ ವ್ಯಾಖ್ಯಾನ ಪಕ್ಕಾ ಶರಣರು ದೇವರನ್ನು ಕುರಿತು ಯಾವಾಗಲೂ ಧ್ಯಾನಮಗ್ನವಾಗಿರುವರು-ನಾನಾದರೋ ಭಕ್ತಿಯನ್ನು ಕುರಿತು ಯಾವಾಗಲೂ ಬರಿಯ ಮಾತನಾಡುವೆನೇ ಹೊರತು-ಒಂದು ಸಲವಾದರೂ ದೇವರ ಮೇಲೆ ಮನಸ್ಸು ನಿಲ್ಲಿಸಿ ಅವನ ಧ್ಯಾನ ಮಾಡಲಿಲ್ಲ, ನಾನು ಅಚ್ಚಭಕ್ತನಲ್ಲ-ಅರೆಭಕ್ತ. ಅರೆಭಕ್ತಿಯ ಲಕ್ಷಣವೆಂದರೆ-ಒಳ್ಳೆಯ ಮಾತನಾಡುವುದು-ಆದರೆ ಆಡಿದಂತೆ ಒಳ್ಳೆಯ ಕೆಲಸವನ್ನು ಮಾಡದಿರುವುದು. ಈ ಕಾರಣದಿಂದ ಅರೆಭಕ್ತನಾದ ನನ್ನನ್ನು ಅಚ್ಚಶರಣರು ಪ್ರೀತಿಸುತ್ತಿಲ್ಲವೆಂದು ಬಸವಣ್ಣನವರು ಪರಿತಪಿಸುತ್ತ-ತಮ್ಮ ನಡೆನುಡಿ ಒಂದಾಗಲಿ ಎಂದು ದೇವರಲ್ಲಿ ಮೊರೆಯಿಡುತ್ತಿರುವರು.
ವಿ: ಬಹುಶಃ ಬಸವಣ್ಣನವರು ಬಾಗೇವಾಡಿಯಲ್ಲಿರಲಿ ಕೂಡಲಸಂಗಮದಲ್ಲಿರಲಿ ಕಲ್ಯಾಣದಲ್ಲಿರಲಿ-ಭಕ್ತರಿಗೆ ದಾಸೋಹವನ್ನು ಕುರಿತು ಉಪನ್ಯಾಸಗಳನ್ನು ಕೊಡುತ್ತಿದ್ದುದೊಂದು ಅವರ ನಿತ್ಯ ಕರ್ತವ್ಯವಾಗಿತ್ತು. ಆ ಉಪನ್ಯಾಸಗಳಲ್ಲಿ ತಾವು ಹೇಳುವ ಮಾತುಗಳಿಗೂ ತಮ್ಮ ನಡೆವಳಿಗೂ ಕೂದಲೆಳೆಯಷ್ಟು ಅಂತರ ಕಂಡು ಬಂದರೂ ಅದನ್ನು ತೀವ್ರವಾಗಿ ಅಸಮ್ಮತಿಸಿ-ಆ ಮಾತಿನ ನೇರಕ್ಕೆ ತಮ್ಮ ಕೃತಿಯನ್ನು ರೂಢಿಸಿಕೊಳ್ಳಲು ಬಸವಣ್ಣನವರು ಸದಾ ಪ್ರಯತ್ನಿಸುತ್ತಿದ್ದರು. ಹೀಗಾಗಿ ಅವರ ಉಪದೇಶವೆಲ್ಲಾ ಆತ್ಮಸಂಬೋಧನೆಗಳೇ ಆಗಿವೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು