•  
  •  
  •  
  •  
Index   ವಚನ - 305    Search  
 
ಭಕ್ತನ ಭಕ್ತಸ್ಥಲ - ಡಾಂಭಿಕತೆ
ಹೊರಿಸಿಕೊಂಡು ಹೋದ ನಾಯಿ: ಮೊಲನೇನ ಹಿಡಿಯುವುದಯ್ಯಾ? ಇರಿಯದ ವೀರ; ಇಲ್ಲದ ಸೊಬಗುವ ಹೇಳುವುದೇ ನಾಚಿಕೆ! ಆನು ಭಕ್ತನೆಂತಪ್ಪೆನಯ್ಯಾ, ಕೂಡಲಸಂಗಮದೇವಾ?
Transliteration Horisikoṇḍu hōda nāyi: Molanēna hiḍivudayyā? Iriyada vīra; illada sobaguva hēḷuvudē nācike! Ānu bhaktanentappenayyā, kūḍalasaṅgamadēvā?
Manuscript
English Translation 2 A dog borne on the shoulders: how can it catch A rabbit,Lord? A warrior impotent to throw a spear: He ought to blush At his unfounded boastfulness! How can I be a devotee, O Kūḍala Saṅgama Lord? Translated by: L M A Menezes, S M Angadi
Hindi Translation ढोकर ले गया हुआ कुत्ता खरगोश को क्या पकडेगा? भाला भोंकने में असमर्थ वीर की असत्य प्रशंसा लज्जाजनक है । अपने को भक्त कैसे कहूँ कूडलसंगमदेव? Translated by: Banakara K Gowdappa
Telugu Translation ఎత్తులబడి వచ్చు కుక్క కుందేటిని పట్టు టెట్లయ్యా? పొడవలేని వీరుడు లేని బిరుదులు బల్కుటే సిగ్గు భక్తు డెట్ల గుదునయ్యా నేను కూడల సంగమదేవా! Translated by: Dr. Badala Ramaiah
Marathi Translation उठून घेवून जाणारे कुत्रे सश्याला कसे पकडणार? न लढणाऱ्या वीराने वल्गणा मारने लज्जास्पद आहे. मी कसला भक्त आहे कूडलसंगमदेवा ? Translated by Shalini Sreeshaila Doddamani
ಶಬ್ದಾರ್ಥಗಳು ಇರಿ = ;
ಕನ್ನಡ ವ್ಯಾಖ್ಯಾನ ಯುದ್ಧರಂಗಕ್ಕೆ ನುಗ್ಗಿ ಹೋರಾಡಲಾರದವನು-ತಾನು ಶೂರನೆಂದು. ಕುರೂಪಿಯಾದವನು-ತಾನು ಸ್ಫುರದ್ರೂಪಿಯೆಂದು ವರ್ಣಿಸಿಕೊಂಡು ಬೀಗುವುದು ಎಷ್ಟು ಹಾಸ್ಯಾಸ್ಪದವೋ-ಭಕ್ತಿಯಿಲ್ಲದ ತಮ್ಮನ್ನು ತಾವೇ ಭಕ್ತನೆಂದು ಕರೆದುಕೊಳ್ಳುವುದೂ ಅಷ್ಟೇ ಹಾಸ್ಯಾಸ್ಪದವೆನ್ನುವರು ಬಸವಣ್ಣನವರು. ಆ ಬಸವಣ್ಣನವರು ತಮ್ಮನ್ನು ಜಂಗಮ(ಲಿಂಗ)ವೆಂದುಕೊಳ್ಳುವುದಿರಲಿ, ಶರಣರೆಂದುಕೊಳ್ಳುವುದಿರಲಿ-ಭಕ್ತನೆಂದು ಕೊಳ್ಳುವುದಕ್ಕೂ ಅವರಿಗೆ ಅರ್ಹತೆಯಿಲ್ಲವೆ ? ಮಹಾತ್ಮರ ನಿರಹಂ ನಿಲುವುಗಳು ಅದ್ಭುತಗಳಲ್ಲಿ ಅದ್ಭುತ ! ಬಸವಣ್ಣನವರ ಅಭಿಪ್ರಾಯದಲ್ಲಿ-ಭಕ್ತನೆಂದರೆ ಗುರು ಲಿಂಗ ಜಂಗಮರ ಸೇವಕ-ಅವನಿಗಿರಬೇಕಾದ್ದು ದಾಸೋಹಂಭಾವ. ಅಂದಮೇಲೆ ಅವನು ಬಹಳ ಸರಳವಾದ ವಿನಮ್ರವಾದ ಜೀವನವಿಧಾನವನ್ನು ಅಳವಡಿಸಿಕೊಳ್ಳಬೇಕು. ಹಾಗಲ್ಲದೆ ಜರತಾರಿಯನ್ನು ಉಟ್ಟುಕೊಂಡು, ಪಲ್ಲಕ್ಕಿಯನ್ನು ಏರಿಕೊಂಡುಹೋದರೆ ಹೇಗೆ ? ಯಜಮಾನನಿಗೆ ಮೊಲ ಹಿಡಿದುಕೊಡಬೇಕಾದ ನಾಯಿ ವೇಗವಾಗಿ ಓಡುವುದರಲ್ಲಿ ಪಟುವಾಗಿರಬೇಕು ಅದು ಪಲ್ಲಕ್ಕಿಯಲ್ಲಿ ಕುಳಿತು ಚಾಮರ ಹಾಕಿಸಿಕೊಂಡು ಬೇಟೆಗೆ ಹೋಗುವುದಾದರೆ ತೀರ ಅನುಚಿತವಷ್ಟೇ ಅಲ್ಲ ಲಜ್ಜಾಸ್ಪದ ಕೂಡ. ಈ ವಿವೇಕದ ಈ ವಿನಯದ ಈ ಸರಳದ ಬಸವಣ್ಣನವರು ತಮ್ಮ ಮಹಾಮನೆಯಲ್ಲಿ ಯಾವ ಪೋಷಾಕಿನಲ್ಲಿರುತ್ತಿದ್ದರೋ ? “ಮಂಡೆಯ ಬೋಳಿಸಿಕೊಂಡು ಗಂಡುದೊತ್ತುವೊಕ್ಕೆನಯ್ಯ” ಎಂಬ ಅವರ 498 ನೇ ವಚನವನ್ನು ನೋಡಿ, ಅವರೊಬ್ಬ ನಿರಾಭರಣ ನೀರವ ನಿಷ್ಠ ಶ್ರಮಿಕರಾಗಿದ್ದರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು