ಭಕ್ತನ ಭಕ್ತಸ್ಥಲ - ಡಾಂಭಿಕತೆ
ಎನ್ನ ಭಕ್ತನೆಂದೆಂಬರು:
ಎನ್ನ ಹೊರಹಂಚೆ ಒಳಬೊಳ್ಳೆತನವನರಿಯರಾಗಿ!
ಎನ್ನ ಮಾನಾಪಮಾನ ಶರಣರಲ್ಲಿ; ಜಾತಿ-ವಿಜಾತಿಯು ಶರಣರಲ್ಲಿ;
ತನು-ಮನ-ಧನವೂ ಶರಣರಲ್ಲಿ.
ವಂಚನೆಯುಳ್ಳ ಡಂಭಕ ನಾನು:
ತಲೆಯೊಡೆಯಂಗೆ ಕಣ್ಣ ಬೈಚಿಡುವೆ,
ಕೂಡಲಸಂಗಮದೇವಾ.
Transliteration Enna bhaktanendembaru:
Enna horahan̄ce oḷaboḷḷetanavanariyarāgi!
Enna mānapamāna śaraṇaralli; jāti-vijātiyu śaraṇaralli;
tanu-mana-dhanavū śaraṇaralli.
Van̄caneyuḷḷa ḍambhaka nānu:
Taleyoḍeyaṅge kaṇṇu baiciḍuve,
kūḍalasaṅgamadēvā.
Manuscript
English Translation 2 They call me a devote:
They see the outer gloss, and not
The hollowness within.
My honour and my shame
Are with theŚaraṇās ;
My high caste, or low caste
Is with the Śaraṇās;
All that I am and have
Is with the Śaraṇās;
All that I really am
Is sanctimonious fraud:
I'd hide me from the sight
Of my sovereign liege,
O Kūḍala Saṅgama Lord!
Translated by: L M A Menezes, S M Angadi
Hindi Translation मुझे भक्त कहते हैं;
वे मेरी बाहरी भडक ही जानते हैं,
न कि भीतरी कपट,
मेरा मानापमान शरणों के साथ है,
जाति-विजाति शरणों के साथ है,
तन-मन-धन शरणों के साथ है,
धूर्त पाखंडी हूँ मैं,
सर्वेश्वर से आँख चुराता हूँ
कूडलसंगमदेव ॥
Translated by: Banakara K Gowdappa
Telugu Translation నన్ను భక్తు డనుచుండిరి.
ఈ నా పై మెరుగులలోని టొల్లుచూడక
శరణుల యెడ నా మానాభిమానములు
శరణులయెడ నా జాతివిజాతులు
శరణులయెడ నా తనుమనధనములు
వంచనగల డాంబికుడ నేను
తలగొట్టువానికి కన్నులు మూయుచుంటి
కూడల సంమదేవా!
Translated by: Dr. Badala Ramaiah
Marathi Translation
मला भक्त मानतात,
माझी बाह्य वेषभूषा पाहून आतील ढोंगीपणा जाणत नाहीत.
माझा मानापमान शरणांचा, जातपात शरणांच्यात,
तनमनधनात शरणाला वंचीत करणारा दांभिक मी,
डोक्याच्या मालकापासून डोळे चुकविले तर
कूडलसंगमदेव कसे प्रसन्न होतील.
Translated by Shalini Sreeshaila Doddamani
ಶಬ್ದಾರ್ಥಗಳು ಅಪಮಾನ = ಅವಮಾನ; ಒಳಬೊಳ್ಳೆ = ; ಡಂಬಕ = ; ತನು = ; ಬೈಚಿಡು = ; ಮಾನ = ; ವಂಚನೆ = ;
ಕನ್ನಡ ವ್ಯಾಖ್ಯಾನ ಮೈಮೇಲೆ ವಿಭೂತಿ ರುದ್ರಾಕ್ಷಿ ಲಿಂಗಲಾಂಛನ-ಒಳಗೆ ಧ್ಯಾನಶೂನ್ಯ ಸರ್ವಶೂನ್ಯ. ಮೈಮೇಲೆಲ್ಲ ಹಚ್ಚೆಯ ಚಿತ್ತಾರ ಹೊಯ್ಸಿಕೊಂಡು ಒಳಗೆಲ್ಲಾ ಹಾಳುಬಿದ್ದವನಂತೆ ನನ್ನ ಅವತಾರ. ಇದನ್ನು ತಿಳಿಯದ ಜನ ನನ್ನನ್ನು ಭಕ್ತ ಎನ್ನುವರು.
ಶರಣರಿಗಾಗುವ ಮಾನಾವಮಾನ ನನ್ನದು ಎನ್ನುವೆ, ಶರಣರಿಗಾಗುವ ಜಾತಿವಿಜಾತಿಭಾವ ನನ್ನದು ಎನ್ನುವೆ-ಬರಿಯ ಮಾತಿನಲ್ಲಿ. ಶರಣರಿಗೆ ಮಾನ ಬಂದರೆ ನನ್ನಿಂದ ಎನ್ನುವೆ, ಅವಮಾನವಾದರೆ ಅವರಿಂದಲೇ ಎನ್ನುವೆ: ಶರಣರು ಸತ್ಕುಲಜರು ಎಂದರೆ ನಮ್ಮವರು ಶರಣರು ಎನ್ನುವೆ, ಶರಣರು ಹೀನಕುಲದವರು ಎಂದರೆ ಸುಮ್ಮನಿರುವೆ.
ನನ್ನ ತನು ಮನ ಧನ ಶರಣರಿಗೆ ಸಮರ್ಪಿತ ಎನ್ನುವೆ, ಆದರೆ ಅದಕ್ಕೆಲ್ಲ ವ್ಯತಿರಿಕ್ತವಾಗಿ ನಡೆದುಕೊಳ್ಳುವ ನಯವಂಚಕ ಡಂಬಕ ನಾನು. ನನಗೆ ಶರಣರಲ್ಲಿ ಸರ್ವಸಮರ್ಪಣಭಾವವಿಲ್ಲ, ತಲೆಯನ್ನೇ ಕೊಡ ಬೇಕಾದ ದಣಿಗೆ ಕಣ್ಣನ್ನೂ ಮೀಟಿ ಕೊಡಲಾರದ ಸ್ವಾರ್ಥಿಹೇಡಿ ನಾನು.
(ಹಂಚೆ>ಹಚ್ಚೆ, ಚಿತ್ತಾರ. ಜಾತಿ : ಉತ್ತಮ ಜಾತಿ, ವಿಜಾತಿ : ಕೀಳುಜಾತಿ.)
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು