ನೋಡುವರುಳ್ಳರೆ ಮಾಡುವೆ ದೇಹಾರವ:
ಎನಗೊಂದು ನಿಜವಿಲ್ಲ, ಎನಗೊಂದು ನಿಷ್ಪತ್ತಿಯಿಲ್ಲ!
ಲಿಂಗವ ತೋರೆ ಉದರವ ಹೊರೆವ
ಭಂಗಗಾರ ನಾನು, ಕೂಡಲಸಂಗಮದೇವಾ!
Transliteration Nōḍuvaruḷḷare māḍuve dēhārava:
Enagondu nijavilla, enagondu niṣpattiyilla!
Liṅgava tōre udarava horeva
bhaṅgagāra nānu, kūḍalasaṅgamadēvā!
Manuscript
English Translation 2 I practise my devotions because
There's someone to look on.
There is in me
No purpose nor sincerity!
O Kūḍala Saṅgama Lord,
What an impostor I,
To earn my livelihood
By a mere show
Of Liṅga !
Translated by: L M A Menezes, S M Angadi
Hindi Translation द्रष्टा हो, तो पूजा करता हूँ,
मुझमें कोई सच्चाई नहीं
मुझमें कोई निष्पत्ति नहीं
लिंग दिखाकर पेट भरनेवाला
पाखंडी हूँ कूडलसंगमदेव ॥
Translated by: Banakara K Gowdappa
Telugu Translation చూచువారున్న జేతునారాధన
నాకొక నిజములేదు, నిష్కృతిలేదు
లింగము చూపి పొట్ట బోసికొను
క్షణభంగురుడ నేను కూడల సంగమయ్యా!
Translated by: Dr. Badala Ramaiah
Marathi Translation
बघणाऱ्यासाठी करीतो मी पूजा
मनामध्ये माझ्या श्रद्धा नाही
दावितो हाताने नैवेद्य लिंगाला
भरीतो पोटाला, तया पासूनी
कूडलसंगमदेवा ! देवा खोटा व्यवहार
निष्पन्न होणार, काय त्यात ?
अर्थ – बघणाऱ्यासाठी पूजा करण्यात एकाग्रता, अनन्यभाव व सहजता नसते. त्यांचे आचरण दंभाचाराचे होय. त्यामुळे त्यांची भक्ती निष्फल ठरते. इष्टलिंगपूजा करून अन्न पदार्थाचा नैवेद्य दाखवून दासोह न करता एकटाच खाणारा खादाड दंभाचारी समजावा तो एक पोट भरणारा पशू व नैवेद्य खाणारा पिशाच समजावा.
Translated by Rajendra Jirobe, Published by V B Patil, Hirabaug, Chembur, Mumbai, 1983
पाहणारे असतील तर समोर मी पूजा प्रदर्शन करतो.
माझ्यात सत्य नाही, निष्पत्ती नाही,
लिंग दाखवून पोट भरणरा ढोंगी मी आहे कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಉದರ = ; ನಿಷ್ಟತ್ತಿ = ; ಭಂಗ = ; ಹೊರೆ = ;
ಕನ್ನಡ ವ್ಯಾಖ್ಯಾನ ನನಗೆ ಜೀವನದಲ್ಲಿ ಡಂಬಾಚಾರ-ಅದರಿಂದ ಉದರಂಭರಣವಲ್ಲದೆ ಮತ್ತೊಂದು ತತ್ತ್ವವಿಲ್ಲ. ನಾನು ಪೂಜೆ ಮಾಡುವುದನ್ನು ಯಾರಾದರೂ ನೋಡುವರಿದ್ದಾರೆಂದರೆ-ತಟ್ಟೆ ತಂಬಿಗೆ ಧಾರೆವಟ್ಟಲು ಪಂಚಪಾತ್ರೆ ಉದ್ದರಣೆ ಆರತಿಬಟ್ಟಲು ಎಲ್ಲಾ ಹರಡಿಕೊಂಡು ಕುಳಿತಿರುತ್ತೇನೆ, ಲಿಂಗಕ್ಕೆ ನೈವೇದ್ಯ ಬಂದಾಗ-ನನಗೆ ನೈವೇದ್ಯ ಮಾಡಿಕೊಳ್ಳುತ್ತೇನೆ, ಹೀಗೆ ಲಿಂಗದ ಹೆಸರಿನಲ್ಲಿ ಪಾತ್ರೆಗಳನ್ನು ಹರಡಿಕೊಂಡು ಹೊಟ್ಟೆಹೊರೆಯುವ ನಾನು ಪಾತ್ರೆವ್ಯಾಪಾರಿಯನ್ನು ಹೋಲುತ್ತೇನೆ, ನನಗೆ ಭಕ್ತಿಯಿಲ್ಲ, ಮುಕ್ತಿ, ಬೇಕಿಲ್ಲ-ಇರುವುದೆಲ್ಲ ಹೊಟ್ಟೆ ಪಾಡಿಗಾಗಿ ನಟಿಸುವ ನಾನಾವೇಷ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು