ಅರ್ಥಪ್ರಾಣಾಭಿಮಾನ ನಿಮ್ಮದೆಂಬೆ:
ಮತ್ತೆಯೂ ಆಸೆ ಬಿಡದನ್ನಕ್ಕ ಭಕ್ತನೆಂತಪ್ಪೆನಯ್ಯಾ?
ಶರಣನೆಂತೆನಿಸುವೆನಯ್ಯಾ, ಆನು ಲಿಂಗೈಕ್ಯನೆಂತೆನಿಸುವೆನಯ್ಯಾ?
ಕೂಡಲಸಂಗನ ಶರಣರ ಸಕಲರತಿಗೆ ಸಲ್ಲದನ್ನಕ್ಕ?
Transliteration Arthaprāṇābhimāna nim'madembe:
Matteyū āse biḍadannakka bhaktanentappenayyā?
Śaraṇanentenisuvenayyā, ānu liṅgaikyanentenisuvenayyā?
Kūḍalasaṅgana śaraṇara sakalaratige salladannakka?
Manuscript
English Translation 2 I say my wealth, my life,
My honour, all are Thine.
And yet, unless the greed departs,
How can I be a devotee?
How can I be, O Lord,
A Śaraṇa , how can I be
One with the Liṅga, unless
I'm worthy of the fullest love
Of Kūḍala Saṅga's Śaraṇas ?
Translated by: L M A Menezes, S M Angadi
Hindi Translation कहता हूँ, फिर भी अर्थप्राणाभिमान भवदीय है
फिर आशा मुक्त होने तक भक्त कैसे बनूँगा?
शरण कैसे कहलाऊँगा जब तक
कूडलसंग के शरणों के संपूर्ण प्रेम का पात्र न बनूँ?
Translated by: Banakara K Gowdappa
Telugu Translation అర్థ ప్రాణాభిమానములు నీ వందుకాని
ఆశ తొలగ నందాక భక్తుడగు టెట్లయ్యా?
శరణు డనిపించు కొను టెట్టులయ్య నేను
లింగై క్యు డనిపించు కొను టెట్టులయ్యా;
సంగని శరణుల మనఃప్రీతికి చెల్ల నందాక !
Translated by: Dr. Badala Ramaiah
Marathi Translation
अर्थ प्राण, अभिमान तुमचा आहे म्हणतो.
तरीही आशा सुटली नाही तर भक्त कसा होणार?
शरणांच्या पूर्ण प्रेमाला पात्र झाल्याविना
कूडलसंगाचा शरण कसा होणार ?
Translated by Shalini Sreeshaila Doddamani
ಶಬ್ದಾರ್ಥಗಳು ಅಭಿಮಾನ = ; ಅರ್ಥ = ಹಣ; ರತಿ = ; ಶರಣ = ;
ಕನ್ನಡ ವ್ಯಾಖ್ಯಾನ ನನ್ನ ಸಂಪತ್ತು, ನನ್ನ ಪ್ರಾಣ, ನನ್ನ ಅಭಿಮಾನ ನಿನ್ನದೇ ಆಗಿದೆಯೆನ್ನುತ್ತೇವೆ-ಶಿವನಿಗೆ ಪ್ರಾರ್ಥನೆ ಸಲ್ಲಿಸುವಾಗ, ಆದರೆ ಜೀವನ ನಡೆಸುವಾಗ-ಆ ಶಿವನನ್ನು ಬಿಟ್ಟು ಅನ್ಯವೆಲ್ಲಕ್ಕೂ ಹಾತೊರೆಯುತ್ತೇವೆ. ಅಂದಮೇಲೆ ನಾವು ಭಕ್ತರಾದೇವು ಹೇಗೆ ? ಮುಂದುವರಿದು ಶರಣರಾದೇವು ಹೇಗೆ ?
ನಮ್ಮದೆಂಬುದೇನಲ್ಲವಿದೆಯೋ-ಅದೆಲ್ಲಾ ಶರಣರ ಸಕಲ ಸುಖಕ್ಕೆ ಸೂರೆಯಾದ ಹೊರತು-ನಾವು ಸ್ವತಃ ಶರಣರಾಗುವುದಿಲ್ಲ.
ಶರಣರು ಪ್ರವರ್ತಿಸಿದ ಧರ್ಮಚಕ್ರಕ್ಕೆ ನಾವು ಅರೆಕಾಲಾದ ಹೊರತು ನಮ್ಮ ಅರ್ಥ-ಪ್ರಾಣ-ಅಭಿಮಾನಕ್ಕೆ ಗಂಭೀರವಾದ ಗತಿಯಿಲ್ಲ. ಘನವಾದ ಗುರಿಯಿಲ್ಲ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು